ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ಬಂಗಾರದ ದರ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ನ 10 ಗ್ರಾಮ್ ಚಿನ್ನದ ದರ 51,930 ರೂ.ಗೆ ತಗ್ಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರ 47,600 ರೂ.ಗೆ ಇಳಿಕೆಯಾಗಿದೆ.
ಬೆಳ್ಳಿಯ ದರದಲ್ಲಿ 800 ರೂ. ಕಡಿತವಾಗಿದ್ದು, ಪ್ರತಿ ಕೆಜಿಗೆ 67,700 ರೂ.ನಷ್ಟಿತ್ತು. 10 ಗ್ರಾಮ್ ಪ್ಲಾಟಿನಮ್ ದರದಲ್ಲಿ 190 ರೂ. ಏರಿಕೆಯಾಗಿದ್ದು 25,440 ರೂ.ಗೆ ವೃದ್ಧಿಸಿತ್ತು.
.ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,835 ಡಾಲರ್ಗೆ ಮುಟ್ಟಿದೆ.
ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.