Site icon Vistara News

GOLD PRICE: ಬಂಗಾರದ ದರ 270 ರೂ. ಇಳಿಕೆ, ಮತ್ತಷ್ಟು ಅಗ್ಗ ಸಂಭವ

gold

ನವದೆಹಲಿ: ಬಂಗಾರದ ದರ ಗುರುವಾರ 270 ರೂ. ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್‌ ದರ 51,440 ರೂ.ಗಳಾಗಿತ್ತು. ೨೨ ಕ್ಯಾರಟ್‌ ಚಿನ್ನದ ದರ 47,170 ರೂ.ಗೆ ತಗ್ಗಿತ್ತು.

ಬೆಳ್ಳಿಯ ದರ ಯಥಾಸ್ಥಿತಿಯಲ್ಲಿದ್ದು ಪ್ರತಿ ಕೆ.ಜಿಗೆ ೬೬,೦೦೦ ರೂ. ಇತ್ತು. ಪ್ಲಾಟಿನಮ್‌ ದರದಲ್ಲಿ ಹತ್ತು ಗ್ರಾಮ್‌ಗೆ 330 ರೂ. ಕಡಿತವಾಗಿದ್ದು, ೨೩,೨೫೦ ರೂ.ಗೆ ತಗ್ಗಿದೆ.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಮಾಡಿರುವುದರಿಂದ ಬಂಗಾರದ ದರ ಇಳಿಕೆಯಾಗುವ ಸಾಧ್ಯತೆ ಇದೆ. ಹೂಡಿಕೆದಾರರು ಚಿನ್ನದ ಬದಲು ಡಾಲರ್‌ನಲ್ಲಿ ಹೂಡಿಕೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ.

Exit mobile version