Site icon Vistara News

GOLD PRICE: ಬಂಗಾರದ ದರ 110 ರೂ. ಏರಿಕೆ, ಬೆಳ್ಳಿ 1,000 ರೂ. ಜಿಗಿತ

gold

ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ 110 ರೂ. ಏರಿಕೆ ದಾಖಲಾಗಿದೆ. 24 ಕ್ಯಾರಟ್‌ ಚಿನ್ನದ 10 ಗ್ರಾಮ್‌ ಗೆ ದರ 52,090 ರೂ.ಗೆ ವೃದ್ಧಿಸಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನದ ದರದಲ್ಲಿ ಕೂಡ 110 ರೂ. ಏರಿಕೆಯಾಗಿದ್ದು, 47,850 ರೂ.ಗೆ ಹೆಚ್ಚಳವಾಗಿದೆ.

ಒಂದು ಕೆಜಿ ಬೆಳ್ಳಿಯ ದರದಲ್ಲಿ 1 ಸಾವಿರ ರೂ. ಹೆಚ್ಚಳವಾಗಿದ್ದು, 67,500 ರೂ.ಗೆ ವೃದ್ಧಿಸಿದೆ. 10 ಗ್ರಾಮ್‌ ಪ್ಲಾಟಿನಮ್‌ ದರ 25,250 ರೂ.ಗೆ ಹೆಚ್ಚಳವಾಗಿದೆ.

.ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನದ ದರ 1,835 ಡಾಲರ್‌ಗೆ ಮುಟ್ಟಿದೆ.

ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್‌ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್‌ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.

Exit mobile version