Site icon Vistara News

Gold Rate Today: ವೀಕೆಂಡ್​ ಶಾಪಿಂಗ್​​ನಲ್ಲಿ ಚಿನ್ನ-ಬೆಳ್ಳಿ ತುಟ್ಟಿ; ತಿಂಗಳ ಮೊದಲ ದಿನ ಎಷ್ಟಿದೆ ರೇಟ್​?

gold bangles

ಜುಲೈ ತಿಂಗಳ ಮೊದಲನೇ ದಿನವೇ ಚಿನ್ನ-ಬೆಳ್ಳಿ ದರ (Gold Silver Rate) ಏರಿದ್ದು, ವೀಕೆಂಡ್​ನಲ್ಲಿ ಆಭರಣ ಖರೀದಿ ಪ್ಲ್ಯಾನ್​ ಹಾಕಿದ್ದವರಿಗೆ ಏರಿಕೆಯಾಗಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ ಶುಕ್ರವಾರ ಸಂಜೆ ಟ್ರೇಡ್​ ಕ್ಲೋಸಿಂಗ್​ ವೇಳೆ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ (Gold Rate Today) ಶೇ.0.30ರಷ್ಟು ಏರಿಕೆಯಾಗಿ, 58,190 ರೂಪಾಯಿ ಆಗಿತ್ತು. ಇಂದು ಅದೇ ಏರುಗತಿ ಮುಂದುವರಿದಿದೆ.. ಹಾಗೇ ಬೆಳ್ಳಿ ಕೆಜಿಗೆ ಶೇ.0.59ರಷ್ಟು ಅಧಿಕಗೊಂಡು, 70,010ರೂಪಾಯಿ ತಲುಪಿತ್ತು. ಗುಡ್​ ರಿಟರ್ನ್ಸ್​ ಪ್ರಕಾರ ದೇಶದ ಮಾರುಕಟ್ಟೆಯಲ್ಲಿಂದು 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ನಿನ್ನೆಗಿಂತಲೂ ಇಂದು 220 ರೂ.ಹೆಚ್ಚಿದೆ. ಹಾಗೇ, 22 ಕ್ಯಾರೆಟ್​ನ, 10 ಗ್ರಾಂ ಚಿನ್ನದ ರೇಟ್​ ನಿನ್ನೆಗಿಂತ 200 ರೂ.ಅಧಿಕವಾಗಿದೆ. ಕೆಜಿ ಬೆಳ್ಳಿ ಬೆಲೆ (Silver Price) ನಿನ್ನೆಗಿಂತ 500 ರೂಪಾಯಿ ಅಧಿಕವಾಗಿದೆ.

ದೇಶದಲ್ಲಿ 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ 5415ರೂ., 8ಗ್ರಾಂ.ಗೆ 43,320ರೂ., 10 ಗ್ರಾಂ-54,150 ರೂ. ಮತ್ತು 100 ಗ್ರಾಂ.ಗೆ 5,41,500ರೂಪಾಯಿ ಇದೆ. ಹಾಗೇ. 24 ಕ್ಯಾರೆಟ್​ನ 1 ಗ್ರಾಂ. ಚಿನ್ನದ ಬೆಲೆ 5,907ರೂ., 8ಗ್ರಾಂ.ಗೆ 47,256 ರೂ., 10 ಗ್ರಾಂ.ಗೆ 59,070ರೂ. ಮತ್ತು 100 ಗ್ರಾಂ.ಗೆ 5,90,700 ರೂಪಾಯಿ ಇದೆ. ಹಾಗೇ, ಬೆಳ್ಳಿ ಬೆಲೆ 10 ಗ್ರಾಂ.ಗೆ 719ರೂ., 100 ಗ್ರಾಂ.ಗೆ 7190ರೂ. ಮತ್ತು ಒಂದು ಕೆಜಿಗೆ 71,900ರೂ. ಇದೆ. ಇಂದು ಬೆಂಗಳೂರಲ್ಲೂ ಕೂಡ ಚಿನ್ನ-ಬೆಳ್ಳಿ ದರ ಇಷ್ಟೇ ಇದೆ.

ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 2 ದಿನಗಳಲ್ಲಿ 530 ರೂ. ಇಳಿಕೆ

ಶತಶತಮಾನಗಳಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಎಲ್ಲಿಲ್ಲದ ಪ್ರಾಧಾನ್ಯತೆ ಇದೆ. ಅದಕ್ಕೆ ಧಾರ್ಮಿಕ ನಂಬಿಕೆಗಳೂ ಬೆಸೆದುಕೊಂಡಿದೆ. ಹೀಗಾಗಿ ವಧುವಿನ ಆಭರಣಗಳಿಗೆ ಚಿನ್ನದ ಒಡವೆಗಳನ್ನು ಖರೀದಿಸುವುದು ವಾಡಿಕೆ. ಮಾಂಗಲ್ಯ ಸೂತ್ರಕ್ಕೆ ಜನ ಬಂಗಾರವನ್ನು ಕೊಳ್ಳುತ್ತಾರೆ. ಅದೊಂದೇ ಅಲ್ಲದೆ, ವಧುವಿನ ಅಂದ ಚಂದ ಹೆಚ್ಚಿಸಲು, ಗಮನ ಸೆಳೆಯಲು ಆಭರಣಗಳನ್ನು ಧರಿಸುತ್ತಾರೆ. ಇನ್ನು ಹೂಡಿಕೆ ವಿಷಯದಲ್ಲೂ ಚಿನ್ನಕ್ಕೆ ಮೊದಲ ಪ್ರಾಶಸ್ತ್ಯ ಕೊಡುತ್ತಾರೆ. ಚಿನ್ನ ಖರೀದಿಸಿ ಇಟ್ಟುಕೊಂಡರೆ, ಅದು ಸದಾ ಕೈ ಹಿಡಿಯುತ್ತದೆ. ಕಷ್ಟಕಾಲಕ್ಕೆ ಆಗುತ್ತದೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಭಾರತದಲ್ಲಿ ಚಿನ್ನ ಖರೀದಿ ಸದಾ ನಡೆಯುವ ಪ್ರಕ್ರಿಯೆಯಾಗಿದೆ.

Exit mobile version