ಇಂದು ಬಂಗಾರದ ದರದಲ್ಲಿ (Gold Rate Today)ಯಾವುದೇ ಬದಲಾವಣೆಯಾಗಿಲ್ಲ. ಗುಡ್ರಿಟರ್ನ್ಸ್ ಪ್ರಕಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 55,000 ರೂಪಾಯಿ ಇದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 60,000 ರೂಪಾಯಿ ಇದೆ. ಇನ್ನುಳಿದಂತೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ (Gold Price) 5,500ರೂ., 8 ಗ್ರಾಂ.ಗೆ 44,000ರೂ., 100 ಗ್ರಾಂ.ಗೆ 5,50,000ರೂಪಾಯಿ ಆಗಿದೆ. 24 ಕ್ಯಾರೆಟ್ನ 1 ಗ್ರಾಂ.ಗೆ 6000ರೂ., 8 ಗ್ರಾಂ.ಗೆ 48,000 ರೂ., 100 ಗ್ರಾಂ.ಗೆ 6,00,000ರೂ.ದರ ಇದೆ.
ಅದೇ ಬೆಂಗಳೂರಲ್ಲಿ ಬೆಳ್ಳಿಯ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ ನಿನ್ನೆಗಿಂತಲೂ ಇಂದು 300 ರೂಪಾಯಿ ಹೆಚ್ಚಿದೆ. 1 ಗ್ರಾಂ ಬೆಳ್ಳಿ ದರ 76.80ರೂಪಾಯಿ, 8 ಗ್ರಾಂ.ಗೆ 614.40 ರೂ., 10 ಗ್ರಾಂ.ಗೆ 768 ರೂ., 100 ಗ್ರಾಂ.ಗೆ 7680 ರೂಪಾಯಿ ಮತ್ತು ಕೆಜಿ ಬೆಳ್ಳಿ ಬೆಲೆ 76,800 ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ ಯಥಾಸ್ಥಿತಿ, ಬೆಳ್ಳಿ 1,000 ರೂ. ದುಬಾರಿ
ಭಾರತದಲ್ಲಿ ಚಿನ್ನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಅತ್ಯುತ್ತಮ ಹೂಡಿಕೆ ಮಾರ್ಗವಾಗಿಯೂ ಬಂಗಾರವನ್ನು ಪರಿಗಣಿಸಲಾಗುತ್ತದೆ. ಹಾಗೇ, ಅಲಂಕಾರದ ವಿಚಾರದಲ್ಲೂ ಬಂಗಾರ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಲ್ಲಿನ ಜನ ಕೈಯಲ್ಲಿ ಸ್ವಲ್ಪ ಹಣವಾದರೆ ಸಾಕು ಚಿನ್ನ ಖರೀದಿಸಲು ಮೊದಲ ಆದ್ಯತೆ ಕೊಡುತ್ತಾರೆ. ಬಾರ್, ಕಾಯ್ನ್, ಆಭರಣ ರೂಪದಲ್ಲಿ ಚಿನ್ನ ಕೊಳ್ಳುವಿಕೆ ನಡೆಯುತ್ತದೆ. ಇನ್ನು ಚಿನ್ನದಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎಂದು ಎರಡು ವಿಧವಿದ್ದು, 24 ಕ್ಯಾರೆಟ್ನ್ನು ಅಪರಂಜಿ ಚಿನ್ನ ಎಂದೇ ಹೇಳಲಾಗುತ್ತದೆ. ಅಂದರೆ ಇದರಲ್ಲಿ ಶೇ.99.9ರಷ್ಟು ಚಿನ್ನವಿರುತ್ತದೆ. ಇದು ಒಡವೆ ರೂಪದಲ್ಲಿ ಸಿಗುವುದಿಲ್ಲ. ಇನ್ನು 22 ಕ್ಯಾರೆಟ್ ಚಿನ್ನವೆಂದರೆ ಅದರಲ್ಲಿ ತಾಮ್ರ, ಸತು ಸೇರಿ ಇನ್ನಿತರ ಲೋಹಗಳ ಅಂಶವಿರುತ್ತದೆ. ಆಭರಣಗಳಲ್ಲಿ ಬಳಕೆ ಮಾಡುವ ಚಿನ್ನ ಇದು.