ಬೆಂಗಳೂರು: ದೇಶದಲ್ಲಿ ಚಿನ್ನದ ದರ (Gold Rate Today)ಇಂದು ಕೂಡ ಇಳಿಕೆಯಾಗಿದೆ. 22 ಮತ್ತು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 70 ರೂಪಾಯಿ ಕಡಿಮೆಯಾಗಿದೆ. ಹಾಗಿದ್ದಾಗ್ಯೂ ದೇಶದ ಬಹುತೇಕ ನಗರಗಳಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 60 ಸಾವಿರ ಗಡಿ ದಾಟಿಕೊಂಡೇ ಇದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 55 ಸಾವಿರದ ಆಸುಪಾಸಿನಲ್ಲೇ ಸುತ್ತುತ್ತಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿ ದರ (Silver Rate) 500 ರೂ. ಹೆಚ್ಚಿದೆ. ದೇಶದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 55 ಸಾವಿರ ರೂ., 100 ಗ್ರಾಂ ಚಿನ್ನದ ಬೆಲೆ 5,50,00 ರೂ.ಆಗಿದೆ. ಹಾಗೇ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 60 ಸಾವಿರ ಮತ್ತು 100 ಗ್ರಾಂ.ಗೆ 6 ಲಕ್ಷ ರೂಪಾಯಿ ಏರಿಕೆಯಾಗಿದೆ. ಬೆಳ್ಳಿ 10ಗ್ರಾಂ.ಗೆ 740 ರೂ., 100 ಗ್ರಾಂ, 7400 ರೂ. ಮತ್ತು ಒಂದು ಕೆಜಿಗೆ 74 ಸಾವಿರ ರೂಪಾಯಿ ಇದೆ.
ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ
22 ಕ್ಯಾರೆಟ್: 1 ಗ್ರಾಂ. -5,500 ರೂ., 8 ಗ್ರಾಂ-44,000 ರೂ., 10 ಗ್ರಾಂ-55,000 ರೂ. 100 ಗ್ರಾಂ-5,55,000 ರೂ.
24 ಕ್ಯಾರೆಟ್: 1 ಗ್ರಾಂ-6000 ರೂ., 8 ಗ್ರಾಂ-48,000, 10 ಗ್ರಾಂ-60,000ರೂ., 100 ಗ್ರಾಂ-6,00,000 ರೂ.
ಇನ್ನು ಬೆಂಗಳೂರಲ್ಲಿ ಬೆಳ್ಳಿಯ ಬೆಲೆಯಲ್ಲಿ ಸದ್ಯ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆಯಂತೆ ಇಂದೂ ಕೂಡ 100 ಗ್ರಾಂ.ಗೆ 7475 ರೂ. ಮತ್ತು ಕೆಜಿಗೆ 74,750 ರೂಪಾಯಿ ಇದೆ.
ಇದನ್ನೂ ಓದಿ: Gold rate today : ಚಿನ್ನದ ದರದಲ್ಲಿ ಯಥಾಸ್ಥಿತಿ, ಬೆಳ್ಳಿ 250 ರೂ. ಅಗ್ಗ
ಭಾರತದಲ್ಲಿ ಚಿನ್ನ ಹೂಡಿಕೆ, ಸಂಪ್ರದಾಯದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದೆ. ಇಲ್ಲಿ ಮದುವೆ, ಗೃಹಪ್ರವೇಶದಿಂದ ಹಿಡಿದು ಯಾವುದೇ ಶುಭ ಸಮಾರಂಭದಲ್ಲಿ ಬಂಗಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇದ್ದೇ ಇದೆ. ಬೇಡಿಕೆ ಮತ್ತು ಪೂರೈಕೆ, ಜಾಗತಿಕ ಆರ್ಥಿಕ ಸ್ಥಿತಿಗತಿ ಮತ್ತಿತರ ಅಂಶಗಳ ಆಧಾರದ ಮೇಲೆ ಬಂಗಾರದ ಬೆಲೆಯಲ್ಲಿ ಏರಿಳಿತವಾಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ