ಬೆಂಗಳೂರು: ಕಳೆದ ಮೂರು ದಿನಗಳಿಂದ ಒಂದೇ ಸಮ ಇಳಿಕೆ ಕಂಡಿದ್ದ ಬಂಗಾರ-ಬೆಳ್ಳಿ ಬೆಲೆ (Gold Silver Rate Today) ಇಂದು ಬುಲಿಯನ್ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ (Gold Rate Today) ಇಂದು ನಿನ್ನೆಗಿಂತಲೂ 550 ರೂಪಾಯಿ ಹೆಚ್ಚಿದೆ. ಹಾಗೇ, ಬೆಳ್ಳಿಯ ಬೆಲೆ ಕೆಜಿಗೆ 1000 ರೂಪಾಯಿಗಳಷ್ಟು ಏರಿಕೆಯಾಗಿದೆ. ಮಾರ್ಚ್ನಿಂದ ಮೇ ಅಂತ್ಯದವರೆಗೆ ಭಾರತದಲ್ಲಿ ಸಾಮಾನ್ಯವಾಗಿ ಮದುವೆ- ಮತ್ತಿತರ ಸಮಾರಂಭಗಳ ಅವಧಿಯಾಗಿರುತ್ತದೆ. ಈ ವೇಳೆ ಸಹಜವಾಗಿಯೇ ಚಿನ್ನ-ಬೆಳ್ಳಿ ಒಡವೆಗಳ ಖರೀದಿಯೂ ಜೋರಾಗಿರುತ್ತದೆ. ಕಳೆದ ಕೆಲವು ದಿನಗಳಿಂದಲೂ ಒಂದೇ ಸಮ ಬೆಲೆ ಇಳಿಕೆಯಾಗುತ್ತಿದ್ದ ಕಾರಣ ಗ್ರಾಹಕರಿಗೆ ಅನುಕೂಲವಾಗಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ಬೆಲೆ?
22 ಕ್ಯಾರೆಟ್ ಚಿನ್ನ:- 1 ಗ್ರಾಂ.-5,635 ರೂ., 8 ಗ್ರಾಂ-45,080 ರೂಪಾಯಿ, 10 ಗ್ರಾಂ-56,350 ರೂ. ಮತ್ತು 100 ಗ್ರಾಂ-5,63,500 ರೂಪಾಯಿ
24 ಕ್ಯಾರೆಟ್ ಚಿನ್ನ: 1 ಗ್ರಾಂ-6,147 ರೂಪಾಯಿ., 8 ಗ್ರಾಂ-49,176 ರೂ., 10 ಗ್ರಾಂ-61,470 ರೂ, ಮತ್ತು 100 ಗ್ರಾಂ-6,14,700 ರೂಪಾಯಿ.
ಬೆಳ್ಳಿಯ ದರ: 1 ಗ್ರಾಂ-79 ರೂಪಾಯಿ, 8 ಗ್ರಾಂ-632 ರೂ., 10 ಗ್ರಾಂ-790 ರೂ., 100 ಗ್ರಾಂ-7900 ರೂ., 1 ಕೆಜಿ-79,000 ರೂಪಾಯಿ.
ಇದನ್ನೂ ಓದಿ: Gold rate : ಚಿನ್ನದ ದರದಲ್ಲಿ 330 ರೂ. ಇಳಿಕೆ, ಪ್ರಮುಖ ನಗರಗಳಲ್ಲಿ ದರ ಎಷ್ಟು? ಇಲ್ಲಿದೆ ಡಿಟೇಲ್ಸ್
ಇನ್ನು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ಕೋಲ್ಕತ್ತದಲ್ಲಿ 56,300 ರೂಪಾಯಿ, ಮುಂಬಯಿಯಲ್ಲಿ 56,450 ರೂ., ಚೆನ್ನೈನಲ್ಲಿ 56,300 ರೂ ಮತ್ತು ದೆಹಲಿಯಲ್ಲಿ 56,450 ರೂಪಾಯಿ ಇದೆ. ಒಟ್ಟಾರೆ ಭಾರತದ ಮಾರುಕಟ್ಟೆಯಲ್ಲಿ 22ಕ್ಯಾರೆಟ್ನ 10 ಗ್ರಾಂ ಚಿನ್ನದ ರೇಟ್ 56,800 ರೂಪಾಯಿ. ಹಾಗೇ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ, ಕೋಲ್ಕತ್ತದಲ್ಲಿ 61,420 ರೂಪಾಯಿ., ಮುಂಬಯಿ ಮತ್ತು ಚೆನ್ನೈನಲ್ಲೂ 61,420 ರೂಪಾಯಿ ಮತ್ತು ದೆಹಲಿಯಲ್ಲಿ 61,570 ರೂಪಾಯಿ ಇದೆ. ಒಟ್ಟಾರೆ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 61,960ರೂಪಾಯಿ ಇದೆ.