ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭಾರತದಲ್ಲಂತೂ ಚಿನ್ನವನ್ನು ಹೂಡಿಕೆ, ಅಲಂಕಾರಕ್ಕಾಗಿ ಯತೇಚ್ಛವಾಗಿ ಬಳಕೆ ಮಾಡುತ್ತಾರೆ. ಮದುವೆ ಸಮಾರಂಭ, ಕೆಲವು ಹಬ್ಬಗಳಲ್ಲಿ ಈ ಲೋಹಕ್ಕೆ ವಿಶೇಷ ಪ್ರಾಶಸ್ತ್ಯ ಇದೆ. ಅಷ್ಟೇ ಅಲ್ಲ, ಚಿನ್ನ ಆಪತ್ಕಾಲದ ರಕ್ಷಕ. ಕೈಯಲ್ಲಿ ಹಣವಿದ್ದಾಗ ಬಂಗಾರ ಕೊಂಡು ಇಟ್ಟುಕೊಂಡರೆ, ಅದು ಮುಂದೆ ಯಾವುದೇ ಆರ್ಥಿಕ ಸಂಕಷ್ಟದಲ್ಲಿ ನಮ್ಮ ಕೈ ಹಿಡಿಯುತ್ತದೆ ಎಂಬ ನಂಬಿಕೆ ಭಾರತೀಯರದ್ದು. ಹೀಗಾಗಿ ಚಿನ್ನವನ್ನು ಕೊಳ್ಳಲು ಜನ ಆ ಕಾಲ, ಈ ಕಾಲ ಎಂದು ನೋಡುವುದಿಲ್ಲ. ಅಂಥ ಚಿನ್ನಪ್ರಿಯರು, ಬಂಗಾರ ಖರೀದಿಸಲು ಪ್ಲ್ಯಾನ್ ಮಾಡುತ್ತಿರುವವರಿಗೆ ಇಂದು ಗುಡ್ನ್ಯೂಸ್ ಇದೆ. ಇಂದು ಚಿನ್ನದ ದರ (Gold Rate Today) ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ.
ಗುಡ್ ರಿಟರ್ನ್ಸ್ ವೆಬ್ಸೈಟ್ ಪ್ರಕಾರ ಭಾರತದಲ್ಲಿ ಇಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಇಳಿಕೆಯಾಗಿದೆ. ನಿನ್ನೆ 55,600 ರೂಪಾಯಿ ಇತ್ತು. ಅದು ಇಂದು 55,500 ರೂ.ಗೆ ಇಳಿಕೆಯಾಗಿದೆ. ಹಾಗೇ, 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ನಿನ್ನೆಗಿಂತಲೂ 10 ರೂ. ಇಳಿಕೆಯಾಗಿದ್ದ 5,550 ರೂ. ಆಗಿದೆ. 8 ಗ್ರಾಂ.ಗೆ 44,400 ರೂ., 100 ಗ್ರಾಂ.ಗೆ 5,55,000 ರೂ. ಇದೆ. ಹಾಗೇ, ದೇಶದಲ್ಲಿ 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ ಕೂಡ ನಿನ್ನೆಗಿಂತಲೂ 100 ರೂ.ಕಡಿಮೆಯಾಗಿದ್ದು, 60,550 ರೂ.ಕ್ಕೆ ಮಾರಾಟವಾಗುತ್ತಿದೆ. 1 ಗ್ರಾಂ.ಗೆ 6,055ರೂ., 8 ಗ್ರಾಂ.ಗೆ 48,440 ರೂ, 100 ಗ್ರಾಂ.ಗೆ 6,05,500 ರೂಪಾಯಿ ಇದೆ. ಇನ್ನು ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 1ಗ್ರಾಂ ಬೆಳ್ಳಿ ಬೆಲೆ 74.50 ರೂ., 8 ಗ್ರಾಂ-596 ರೂ., 10 ಗ್ರಾಂ.-745 ರೂ., 100 ಗ್ರಾಂ- 7,450 ರೂ. ಮತ್ತು 1 ಕೆಜಿಗೆ 74,500 ರೂ.ಇದೆ.
ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?
22 ಕ್ಯಾರೆಟ್ ಚಿನ್ನ: 1 ಗ್ರಾಂ- 5,550 ರೂ., 8 ಗ್ರಾಂ-44,440 ರೂ., 10 ಗ್ರಾಂ-55,550 ರೂ., 100 ಗ್ರಾಂ-5,55,500 ರೂ.
24 ಕ್ಯಾರೆಟ್ ಚಿನ್ನ: 1 ಗ್ರಾಂ-6,060 ರೂ., 8 ಗ್ರಾಂ-48,480 ರೂ., 10 ಗ್ರಾಂ-60,600 ರೂ., 100 ಗ್ರಾಂ-6,06,000 ರೂ.
ಬೆಳ್ಳಿ ದರ: ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ನಿನ್ನೆಗಿಂತಲೂ 175 ರೂ. ಹೆಚ್ಚಿದೆ. 1 ಗ್ರಾಂ ಬೆಳ್ಳಿ ಬೆಲೆ 75.75 ರೂ., 8 ಗ್ರಾಂ.-606 ರೂ., 10 ಗ್ರಾಂ-757.75 ರೂ., 100 ಗ್ರಾಂ-7,575 ರೂ., 1 ಕೆಜಿ-75,750 ರೂಪಾಯಿ ಆಗಿದೆ.
ಇದನ್ನೂ ಓದಿ: Gold price today : ಚಿನ್ನದ ದರದಲ್ಲಿ ಅಲ್ಪ ಇಳಿಕೆ, ಬೆಳ್ಳಿ 400 ರೂ. ಹೆಚ್ಚಳ
22 ಕ್ಯಾರೆಟ್ ಚಿನ್ನಕ್ಕೂ-24 ಕ್ಯಾರೆಟ್ ಚಿನ್ನಕ್ಕೂ ಇರುವ ವ್ಯತ್ಯಾಸ
ಸಾಮಾನ್ಯವಾಗಿ 22 ಕ್ಯಾರೆಟ್ ಚಿನ್ನಕ್ಕೂ, 24 ಕ್ಯಾರೆಟ್ ಚಿನ್ನಕ್ಕೂ ದರದಲ್ಲಿ ವ್ಯತ್ಯಾಸ ಇರುತ್ತದೆ. 22 ಕ್ಯಾರೆಟ್ ಚಿನ್ನಕ್ಕೆ ಸ್ವಲ್ಪ ಕಡಿಮೆ ಬೆಲೆ ಇದ್ದರೆ, 24 ಕ್ಯಾರೆಟ್ ಬಂಗಾರಕ್ಕೆ ಬೆಲೆ ಹೆಚ್ಚಿರುತ್ತದೆ. ಆದರೆ 22 ಕ್ಯಾರೆಟ್ಗೂ, 24 ಕ್ಯಾರೆಟ್ಗೂ ನಡುವಿನ ವ್ಯತ್ಯಾಸದ ಅರಿವು ಅನೇಕ ಗ್ರಾಹಕರಿಗೆ ಇರುವುದಿಲ್ಲ. ಇದು ಮತ್ತೇನಲ್ಲ, 22 ಕ್ಯಾರೆಟ್ ಎಂದರೆ ಅದರಲ್ಲಿ ಶೇ.91ರಷ್ಟು ಶುದ್ಧ ಚಿನ್ನ ಇದ್ದರೆ, 24 ಕ್ಯಾರೆಟ್ನಲ್ಲಿ ಶೇ.99.9ರಷ್ಟು ಶುದ್ಧ ಚಿನ್ನ ಇರುತ್ತದೆ. 22 ಕ್ಯಾರೆಟ್ ಚಿನ್ನದ ಆಭರಣಗಳಲ್ಲಿ ಇನ್ನುಳಿದ ಶೇ.9ರಷ್ಟು ಭಾಗ ತಾಮ್ರ, ಬೆಳ್ಳಿ, ಸತುವಿನ ಅಂಶ ಇರುತ್ತದೆ. 24 ಕ್ಯಾರೆಟ್ನ ಚಿನ್ನವನ್ನು ಅಪರಂಜಿ ಎಂದೂ ಕರೆಯಲಾಗುತ್ತದೆ, ಇದನ್ನು ಆಭರಣಗಳಲ್ಲಿ ಬಳಕೆ ಮಾಡುವುದಿಲ್ಲ.