ನವ ದೆಹಲಿ: ಭಾರತದ ಸರಕುಗಳ ರಫ್ತು 2022-23ರಲ್ಲಿ ದಾಖಲೆಯ 447 ಶತಕೋಟಿ ಡಾಲರ್‌ಗೆ (36 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಅಂತಿಮ ಅಂಕಿ ಅಂಶಗಳು ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿದೆ (Goods exports growth) ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಸೇವೆಗಳ ರಫ್ತು 2022-23ರಲ್ಲಿ 320 ಶತಕೋಟಿ ಡಾಲರ್ (26 ಲಕ್ಷ ಕೋಟಿ ರೂ.) ದಾಟುವ ಸಾಧ್ಯತೆ ಇದೆ. ಸಚಿವಾಲಯ ಈಗ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ.
ಕಳೆದ 2021-22ಕ್ಕೆ ಹೋಲಿಸಿದರೆ ಸರಕುಗಳ ರಫ್ತು 6% ಹೆಚ್ಚಳವಾಗುವ ನಿರೀಕ್ಷೆ ಇದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ವಸ್ತುಗಳ ಸಾಮಾಗ್ರಿಗಳ ದರ ಹೆಚ್ಚಳ, ಗೋಧಿ ಮತ್ತಿತರ ವಸ್ತಿಗಳ ರಫ್ತಿಗೆ ನಿರ್ಬಂಧ, ರಷ್ಯಾ-ಉಕ್ರೇನ್ ಸಂಘರ್ಷದ ಸವಾಲುಗಳ ಹೊರತಾಗಿಯೂ ರಫ್ತು ವೃದ್ಧಿಸಿದೆ ಎಂದು ಅವರು ತಿಳಿಸಿದರು.
ಅಂತಿಮವಾಗಿ ಸರಕು ಮತ್ತು ಸೇವೆಗಳ ರಫ್ತು ಮೌಲ್ಯ 765 ಶತಕೋಟಿ ಡಾಲರ್ (62 ಲಕ್ಷ ಕೋಟಿ ರೂ.) ದಾಟುವ ನಿರೀಕ್ಷೆ ಇದೆ ಎಂದು ಸಚಿವ ಪಿಯೂಷ್ ಗೋಯೆಲ್ ತಿಳಿಸಿದರು. ಭಾರತವು ಎಂಜಿನಿಯರಿಂಗ್, ಪೆಟ್ರೋಲಿಯಂ ಉತ್ಪನ್ನಗಳು, ಜ್ಯುವೆಲ್ಲರಿ, ಕೃಷಿ ಉತ್ಪನ್ನಗಳು, ರಾಸಾಯನಿಕ ಉತ್ಪನ್ನಗಳ ರಫ್ತು ಏರಿಕೆಯಾಗಿದೆ.
ರಫ್ತು ಹೆಚ್ಚಳಕ್ಕೆ ಕಾರಣವೇನು?
ಮೂಲ ಸೌಕರ್ಯಕ್ಷೇತ್ರದ ಆಧುನೀಕರಣ
ಮುಕ್ತ ವ್ಯಾಪಾರ ಒಪ್ಪಂದಗಳ ವಿಸ್ತರಣೆ
ವ್ಯಾಪಾರದ ಅಂತಾರಾಷ್ಟ್ರೀಕರಣ
ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಗಳು