ಹೊಸದಿಲ್ಲಿ: ಪ್ರಮುಖ ಬ್ಯಾಂಕ್‌ಗಳು ಮತ್ತು ಪೈನಾನ್ಸ್ ಕಂಪನಿಗಳು ಸಾಲದ ಬಡ್ಡಿ ದರಗಳನ್ನು ಜೂನ್ 1 ರಿಂದ ಅನ್ವಯವಾಗುವಂತೆ ಏರಿಸಿವೆ.
ಎಚ್‌ಡಿಎಫ್‌ಸಿ ತನ್ನ ಸಾಲದ ಬಡ್ಡಿ ದರದಲ್ಲಿ ಶೇ.05ನಷ್ಟು ಏರಿಕೆ ಮಾಡಿದೆ. ಇದರ ಪರಿಣಾಮ ಬ್ಯಾಂಕಿನ ಗೃಹ ಸಾಲದ ಇಎಂಐಗಳು ಹೆಚ್ಚಲಿದೆ. ಹೊಸ ಮತ್ತು ಹಾಲಿ ಗ್ರಾಹಕರಿಗೆ ಇದು ಅನ್ವಯವಾಗಲಿದೆ.
ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಮ್ಮ ಎಂಸಿಎಲ್‌ಆರ್ ಆಧಾರಿತ ಸಾಲದ ಬಡ್ಡಿ ದರಗಳಲ್ಲಿ ಏರಿಕೆ ಮಾಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ.0.15 ಬಡ್ಡಿ ದರ ಏರಿಸಿದೆ. ಐಸಿಐಸಿಐ ಬ್ಯಾಂಕ್ , ಬ್ಯಾಂಕ್ ಆಫ್ ಇಂಡಿಯಾ ಕೂಡ ಸಾಲದ ಎಂಸಿಎಲ್ ಆರ್ ಬಡ್ಡಿ ದರಗಳಲ್ಲಿ ಶೇ.0.30ರಷ್ಟು ಏರಿಕೆ ಮಾಡಿವೆ. ಈಗಾಗಲೇ ಎಸ್‌ಬಿಐ ಜೂನ್‌ನಿಂದ ಅನ್ವಯಿಸುವಂತೆ ಗೃಹ ಸಾಲ ಬಡ್ಡಿ ದರದಲ್ಲಿ ಶೇ.೦.40 ವೃದ್ಧಿಸಿದೆ. ಹೀಗಾಗಿ ಸಾಲಗಾರರು ಹೆಚ್ಚಿನ ಹೊರೆ ಹೊರಲು ಸಜ್ಜಾಗಬೇಕಾಗಿದೆ.
ಇದನ್ನೂ ಓದಿ: Loan Tips: ಗೃಹ ಸಾಲ ಬೇಗ ಬೇಗನೆ ತೀರಿಸಿರಿ…ಇಲ್ಲಿದೆ ಹಲವು ದಾರಿ