Site icon Vistara News

Highest Paid CEO: ವಿಪ್ರೊ ಮಾಜಿ ಸಿಇಒ ವಾರ್ಷಿಕ ಸಂಬಳ 166 ಕೋಟಿ ರೂ! ಉಳಿದ ಸಿಇಒಗಳಿಗೆ ಎಷ್ಟು?

Highest Paid CEO

ವಿಪ್ರೋದ (Wipro) ಮಾಜಿ ಸಿಇಒ (ex-ceo) ಮತ್ತು ಆಡಳಿತ ನಿರ್ದೇಶಕ ಥಿಯೆರ್ರಿ ಡೆಲಾಪೋರ್ಟೆ (Thierry Delaporte) ಅವರು 20 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 166 ಕೋಟಿ ರೂ. ಗಳಿಸಿ ಸತತ ಎರಡನೇ ವರ್ಷ ಐಟಿ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ (Highest Paid CEO) ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಥಿಯೆರಿ ಡೆಲಾಪೋರ್ಟೆ ಅವರು ಏಪ್ರಿಲ್‌ 6ರಂದು ಕಂಪನಿಗೆ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಕಂಪನಿಯು 32 ವರ್ಷಗಳ ಕಾಲ ಅನುಭವ ಹೊಂದಿರುವ ಶ್ರೀನಿವಾಸ್ ಪಾಲ್ಲಿಯಾ ಅವರನ್ನು ನೇಮಕ ಮಾಡಿದೆ. ಯುಎಸ್ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್‌ಗೆ ವಿಪ್ರೊ ಸಲ್ಲಿಸಿರುವ 20 ಎಫ್ ಫೈಲಿಂಗ್‌ಗಳ ಪ್ರಕಾರ ಡೆಲಾಪೋರ್ಟೆ 3.9 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಸಂಬಳ ಮತ್ತು ಭತ್ಯೆ, 5 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ಕಮಿಷನ್/ ವೇರಿಯಬಲ್ ಪೇ, ಸುಮಾರು 7 ಮಿಲಿಯನ್ ಡಾಲರ್ ಇತರ ಮತ್ತು 4 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ದೀರ್ಘಾವಧಿಯ ಪರಿಹಾರವನ್ನು ಗಳಿಸಿದ್ದಾರೆ.

ಶ್ರೀನಿವಾಸ್ ಪಲ್ಲಿಯಾ ಅವರು ಸುಮಾರು 50 ಕೋಟಿ ರೂಪಾಯಿಗಳ ವಾರ್ಷಿಕ ಸಂಭಾವನೆ ಪ್ಯಾಕೇಜ್‌ ಸ್ವೀಕರಿಸಿದ್ದಾರೆ. ಇದರಿಂದ ಅವರು ಆರ್ಥಿಕ ವರ್ಷ 2025ರಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಸಿಇಒ ಆಗಿದ್ದಾರೆ. ಕಂಪನಿಯ ಆದಾಯವು ಇಳಿಮುಖವಾಗುತ್ತಿರುವ ಹೊತ್ತಲ್ಲಿ ಹೊಸ ಸಿಇಒ ನೇಮಕ ವೇತನದ ನಡುವಿನ ಅಸಮಾನತೆಯನ್ನು ಹೆಚ್ಚಿಸಿದೆ. ಸಿಇಒ ವೇತನವು ಸತತ ಎರಡನೇ ವರ್ಷಕ್ಕೆ ಹೆಚ್ಚಾಗಿದೆ.

ಮತ್ತೊಂದೆಡೆ ವಿಪ್ರೋ ಕಾರ್ಯನಿರ್ವಾಹಕ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ ಅವರು ಹೆಚ್ಚುತ್ತಿರುವ ಏಕೀಕೃತ ನಿವ್ವಳ ಲಾಭದ ಮೇಲೆ ಶೇ. 0.35ರಷ್ಟು ಕಮಿಷನ್‌ಗೆ ಅರ್ಹರಾಗಿದ್ದಾರೆ. ಕಂಪನಿಯ ಹಣಕಾಸಿನ ವರ್ಷದಲ್ಲಿ ನಷ್ಟವನ್ನು ಅನುಭವಿಸಿದ ಕಾರಣ ಅದನ್ನು ತಡೆಹಿಡಿಯಲಾಗಿದೆ.

ಕಂಪನಿಯ ಆದಾಯ ಇಳಿಕೆ

ಆರ್ಥಿಕ ವರ್ಷ 2024ರ ಪೂರ್ಣ ವರ್ಷದಲ್ಲಿ ವಿಪ್ರೋ ಆದಾಯವು ವರ್ಷಕ್ಕೆ 90,486 ಕೋಟಿಗಳಿಂದ 89,760 ಕೋಟಿಗೆ ಇಳಿದಿದೆ.

ಅತಿ ಹೆಚ್ಚು ವಾರ್ಷಿಕ ಸಂಭಾವನೆ

2023- 24ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ವಾರ್ಷಿಕ ಸಂಭಾವನೆ ಪ್ಯಾಕೇಜ್‌ನಲ್ಲಿ 56 ಕೋಟಿ ರೂ. ಆಗಿದೆ. ಎಚ್‌ಸಿಎಲ್‌ಟೆಕ್‌ನ ಸಿ ವಿಜಯಕುಮಾರ್, 28.4 ಕೋಟಿ ರೂ. ಗಳಿಸಿದ್ದಾರೆ. L&T ಮತ್ತು Mindtree ವಿಲೀನದ ಅನಂತರ ನವೆಂಬರ್ 2022 ರಲ್ಲಿ ಚುಕ್ಕಾಣಿ ಹಿಡಿದ ಅದರ ಸಿಇಒ ದೇಬಾಶಿಸ್ ಚಟರ್ಜಿ ಆರ್ಥಿಕ ವರ್ಷ 22-23ರಲ್ಲಿ 17.5 ಕೋಟಿ ರೂ. ಗಳಿಸಿದ್ದಾರೆ.

ಇದನ್ನೂ ಓದಿ: Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

ಟೆಕ್ ಮಹೀಂದ್ರಾದ ಮೋಹಿತ್ ಜೋಶಿ ಅವರು ವಾರ್ಷಿಕವಾಗಿ 6.5 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಿಇಒ ಮತ್ತು ಎಂಡಿ ಕೆ. ಕೃತಿವಾಸನ್ ಅವರು 2024ರಲ್ಲಿ ವಾರ್ಷಿಕ ಪರಿಹಾರದಲ್ಲಿ 25.36 ಕೋಟಿ ರೂ. ಗಳನ್ನು ಪಡೆದರು.

2024ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಡೆಲಾಪೋರ್ಟೆ ಅವರಿಗೆ ನೀಡಿದ ಪರಿಹಾರವು 9,89,130 ಅನ್ವೆಸ್ಟೆಡ್ ಸ್ಟಾಕ್ ಆಯ್ಕೆ ಮತ್ತು 4.33 ಮಿಲಿಯನ್ ಡಾಲರ್ ಮೊತ್ತದ ನಗದು ಪರಿಹಾರವನ್ನು ಒಳಗೊಂಡಿದೆ.

Exit mobile version