ನವ ದೆಹಲಿ: ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತು ಮೇ31ಕ್ಕೆ ಬಿಡುಗಡೆಯಾಗಿದೆ. ಹೀಗಿದ್ದರೂ ಬಹುಶಃ ನಿಮಗೆ ಸಿಗದಿರಬಹುದು. ಆಗ ಏನು ಮಾಡಬೇಕು ಎಂಬುದನ್ನು ತಿಳಿಯುವುದು ಮುಖ್ಯ.
ಸರಕಾರ 10 ಕೋಟಿ ರೈತರಿಗೆ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಶಿಮ್ಲಾದಲ್ಲಿ ಗರೀಬ್ ಕಲ್ಯಾಣ್ ಸಮ್ಮೇಳನದ ವೇಳೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಈ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ 6,000 ರೂ. ಸಿಗುತ್ತದೆ. ಮೂರು ಕಂತುಗಳಲ್ಲಿ ಇದನ್ನು ನೀಡಲಾಗುತ್ತಿದೆ.
ಈ ಹಣವನ್ನು ಪಡೆಯಲು ರೈತರು ಪಿಎಂ ಕಿಸಾನ್ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದನ್ನು ಆನ್ ಲೈನ್ ಇಲ್ಲವೇ ಆಫ್‌ಲೈನ್ ಮೂಲಕ ಮಾಡಬಹುದು. ಒಂದು ವೇಳೆ ಪಿಎಂ ಕಿಸಾನ್ ನಿಧಿ ಲಭಿಸದಿದ್ದರೆ ಕೆಳಕಂಡ ಇ-ಮೇಲ್ ಐಡಿ ಅಥವಾ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
- ಇ-ಮೇಲ್ ಐಡಿ: pmkisan-ict@gov.in, pmkisan-funds@gov.in
- ಪಿಎಂ ಕಿಸಾನ್ ಸಹಾಯವಾಣಿ: 011-24300606
- ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ: 1800-115-526
ಪಿಎಂ ಕಿಸಾನ್ ಫಲಾನುಭವಿಗಳ ಸ್ಟೇಟಸ್ ತಿಳಿಯುವುದು ಹೇಗೆ?
- pmkisan.gov.in ವೆಬ್ ಸೈಟ್ ತೆರೆಯಿರಿ
- farmers corner ಸೆಕ್ಷನ್ ಅಡಿಯಲ್ಲಿ Beneficiary Status ಕ್ಲಿಕ್ಕಿಸಿ.
- ಆಧಾರ್ ವಿವರಗಳನ್ನು ಅಥವಾ ಬ್ಯಾಂಕ್ ಖಾತೆ ವಿವರ ಸಲ್ಲಿಸಿ
- ಈಗ Get Data ಕ್ಲಿಕ್ಕಿಸಿ ಕಂತಿನ ಮಾಹಿತಿ ಪಡೆಯಿರಿ.