ಬೆಂಗಳೂರು: ಬೆಂಗಳೂರಿನಲ್ಲಿ ಪೀಠೋಪಕರಣಗಳ ಮಳಿಗೆ ಐಕಿಯದ ಫುಡ್ಕೋರ್ಟ್ನಲ್ಲಿ ಭಾನುವಾರ ಗ್ರಾಹಕರೊಬ್ಬರ ಟೇಬಲ್ ಮೇಲೆ ಸತ್ತ ಇಲಿ ಬಿದ್ದ ಘಟನೆ ನಡೆದಿದೆ. ಕಂಪನಿ ಈ ಬಗ್ಗೆ ಕ್ಷಮೆ ಕೋರಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. (IKEA Bengaluru)
ಶರಣ್ಯ ಶೆಟ್ಟಿ ಎಂಬುವರು ಐಕಿಯ ಮಳಿಗೆಯಲ್ಲಿ ಭಾನುವಾರ ಸ್ವಿಡಿಶ್ ಚೈನ್ಸ್ನ ಫುಡ್ ಕೋರ್ಟ್ನಲ್ಲಿ ಆಹಾರ ಸವಿಯುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಐಕಿಯ, ಘಟನೆಯ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ತಿಳಿಸಿದೆ.
Hej! We apologize for the unpleasant incident at IKEA Nagasandra. We're currently investigating the situation & ensuring to take all precautionary efforts. Food safety and hygiene is our top priority, and we want our customers to always have the best shopping experience at IKEA.
— IKEAIndia (@IKEAIndia) July 17, 2023
ನಾಗಸಂದ್ರದ ಐಕಿಯದಲ್ಲಿ ಇಂಥ ಅಹಿತಕರ ಘಟನೆ ನಡೆದಿರುವುದಕ್ಕೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ. ನಾವು ಈಗ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಮ್ಮ ಆದ್ಯತೆಯಾಗಿದೆ. ಐಕಿಯದಲ್ಲಿ ಗ್ರಾಹಕರಿಗೆ ಸದಾ ಅತ್ಯುತ್ತಮ ಶಾಪಿಂಗ್ ಅನುಭವ ಸಿಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಘಟನೆ ಬಗ್ಗೆ ಅನೇಕ ಗ್ರಾಹಕರು ಕಮೆಂಟ್ಗಳನ್ನು ಮಾಡಿದ್ದಾರೆ. ಕಳವಳ ವ್ಯಕ್ತಪಡಿಸಿದ್ದಾರೆ. ಐಕಿಯ ಮಳಿಗೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಐಕಿಯ ಮೂಲತಃ ಗೃಹಾಲಂಕಾರ ಮತ್ತು ಪೀಠೋಪಕರಣಗಳ ಮಳಿಗೆಯಾಗಿದ್ದರೂ, ಇದರ ಫುಡ್ ಕೋರ್ಟ್ಗಳು ಭಾರಿ ಬಿಸಿನೆಸ್ ನಡೆಸುತ್ತವೆ.