ನವದೆಹಲಿ: ಭಾರತ ಸಂಸ್ಕರಿತ ತಾಳೆ ಎಣ್ಣೆ ದರದ ಮೂಲ ಆಮದು ದರವನ್ನು ಕಡಿತಗೊಳಿಸಿದೆ. ಆದರೆ ಸೋಯಾಬೀನ್ ಎಣ್ಣೆ, ಬಂಗಾರ, ಬೆಳ್ಳಿಯ ಮೂಲ ಆಮದು ದರವನ್ನು ಏರಿಸಿದೆ.
ಮೂಲ ದರವನ್ನು ಆಧರಿಸಿ ಆಮದು ಸುಂಕವನ್ನು ವಿಧಿಸಲಾಗುತ್ತದೆ. ಭಾರತ ಜಗತ್ತಿನ ಎರಡನೇ ಅತಿ ದೊಡ್ಡ ಖಾದ್ಯ ತೈಲ ಆಮದುದಾರ ರಾಷ್ಟ್ರವಾಗಿದೆ. ಕಳೆದ ವಾರ 20 ಲಕ್ಷ ಟನ್ ಸೋಯಾಬೀನ್ ಎಣ್ಣೆ ಯ ಸುಂಕ ರಹಿತ ಆಮದಿಗೆ ಅನುಮತಿ ನೀಡಿತ್ತು.
ಕಚ್ಚಾ ತಾಳೆ ಎಣ್ಣೆಯ ಮೂಲ ಆಮದು ದರ 1,703 ಡಾಲರ್‌ನಿಂದ 1,625 ಡಾಲರ್‌ಗೆ ಇಳಿಕೆಯಾಗಿದೆ ಕಚ್ಚಾ ಸೋಯಾಬೀನ್ ತೈಲದ ಆಮದು ದರ 1,872 ಡಾಲರ್‌ನಿಂದ 1,866 ಡಾಲರ್‌ಗೆ ಏರಿಕೆಯಾಗಿದೆ. ಚಿನ್ನದ ಮೂಲ ಆಮದು ದರ 592 ಡಾಲರ್‌ನಿಂದ 597 ಡಾಲರ್‌ಗೆ ಹೆಚ್ಚಳವಾಗಿದೆ.
ಸರಕಾರ ಪ್ರತಿ 15 ದಿನಗಳಿಗೊಮ್ಮೆ ಖಾದ್ಯ ತೈಲ, ಚಿನ್ನ, ಬೆಳ್ಳಿಯ ಮೂಲ ಆಮದು ದರಗಳನ್ನು ಪರಿಷ್ಕರಿಸುತ್ತದೆ.