Site icon Vistara News

Income tax return filing : ಆದಾಯ ತೆರಿಗೆ ವಿವರಗಳನ್ನು ಯಾರು, ಹೇಗೆ ಸಲ್ಲಿಸಬೇಕು?

ITR

ಕಳೆದ 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ ( Income tax return filing) ಜುಲೈ 31 ಕೊನೆಯ ದಿನಾಂಕವಾಗಿದೆ. ಹಾಗಾದರೆ ಯಾರು ಐಟಿ ರಿಟರ್ನ್‌ ಸಲ್ಲಿಸಬೇಕು? ಇಲ್ಲಿದೆ ವಿವರ.

ನಿಮ್ಮ ಒಟ್ಟು ಆದಾಯ (ಎಲ್ಲ ಡಿಡಕ್ಷನ್‌ ಮತ್ತು ವಿನಾಯಿತಿ ಕಳೆದ ಬಳಿಕ) 2.5 ಲಕ್ಷ ರೂ.ಗಿಂತ ಹೆಚ್ಚು ಇದ್ದರೆ, ಹಿರಿಯ ನಾಗರಿಕರಿಗೆ 3 ಲಕ್ಷ ರೂ, ಅತಿ ಹಿರಿಯ ನಾಗರಿಕರಿಗೆ 5 ಲಕ್ಷ ರೂ. ಇದ್ದರೆ ಐಟಿ ರಿಟರ್ನ್‌ ಸಲ್ಲಿಸಬೇಕಾಗುತ್ತದೆ.

ನಿಮ್ಮ ಒಟ್ಟು ಸೇಲ್ಸ್‌, ವಹಿವಾಟು, ಬಿಸಿನೆಸ್ ಗ್ರಾಸ್‌ ರಿಸಿಪ್ಸ್ಟ್‌ ‌ 60 ಲಕ್ಷ ರೂ.ಗಿಂತ ಮೇಲ್ಪಟ್ಟು ಇದ್ದರೆ ಐಟಿ ರಿಟರ್ನ್‌ ಸಲ್ಲಿಸಬೇಕಾಗುತ್ತದೆ. ಪ್ರೊಫೆಶನ್‌ಗಳಿಂದ ನಿಮ್ಮ ಒಟ್ಟು ರಿಸಿಪ್ಟ್ಸ್‌ 10 ಲಕ್ಷ ರೂ. ಮೀರಿದ್ದರೆ ಐಟಿ ರಿಟರ್ನ್‌ ಸಲ್ಲಿಸಬೇಕಾಗುತ್ತದೆ.

ನೀವು ವಿದೇಶಿ ಆಸ್ತಿ, ಆದಾಯ ಅಥವಾ ವಿದೇಶಿ ಬ್ಯಾಂಕ್‌ ಖಾತೆಯಲ್ಲಿ ಸೈನಿಂಗ್‌ ಅಥಾರಿಟಿಯನ್ನು ಹೊಂದಿದ್ದರೆ ಐಟಿ ರಿಟರ್ನ್‌ ಸಲ್ಲಿಸಬೇಕು. ಒಂದು ವರ್ಷದಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ಎಲೆಕ್ಟ್ರಿಸಿಟಿ ಬಿಲ್‌ ಬಂದಿದ್ದರೆ ಐಟಿಆರ್‌ ಸಲ್ಲಿಸಬೇಕು. ಉಳಿತಾಯ ಖಾತೆಯಲ್ಲಿ 50 ಲಕ್ಷ ರೂ. ಅಥವಾ ಹೆಚು ಮೊತ್ತವನ್ನು ಡಿಪಾಸಿಟ್‌ ಇಟ್ಟಿದ್ದರೆ ಐಟಿಆರ್‌ ಸಲ್ಲಿಸಬೇಕು. ಕರೆಂಟ್‌ ಅಕೌಂಟ್‌ನಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಹಣ ಠೇವಣಿ ಇಟ್ಟಿದ್ದರೆ ಐಟಿಆರ್‌ ಕಡ್ಡಾಯವಾಗಿ ಸಲ್ಲಿಸಬೇಕು.

ವಿದೇಶ ಪ್ರವಾಸದ ಸಂದರ್ಭ 2 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದರೆ ಐಟಿಆರ್‌ ಸಲ್ಲಿಸಬೇಕು. ನಿಮ್ಮ ಟಿಡಿಎಸ್‌ ಅಥವಾ ಟಿಸಿಎಸ್‌ 25,000 ರೂ. (ಹಿರಿಯ ನಾಗರಿಕರಿಗೆ 50,000 ರೂ.) ನೀವು ಟಿಡಿಎಸ್‌ ಅಥವಾ ಟಿಸಿಎಸ್‌ ರಿಫಂಡ್‌ ನಿರೀಕ್ಷಿಸುತ್ತಿದ್ದರೆ ಐಟಿ ರಿಟರ್ನ್‌ ಕೊಡಬೇಕು. ಮುಂದಿನ ವರ್ಷಕ್ಕೆ ಕ್ಯಾರಿ ಫಾರ್‌ವರ್ಡ್‌ ಬಯಸಿದರೆ ಐಟಿ ರಿಟರ್ನ್‌ ಸಲ್ಲಿಸಬೇಕು.

ಐಟಿಆರ್‌ ಸಲ್ಲಿಸುವ ಸಂದರ್ಭ ಅವಶ್ಯಕವಾಗುವ ದಾಖಲೆಗಳಲ್ಲಿ ವಾರ್ಷಿಕ ಹಣಕಾಸು ವಿವರಗಳ ಹೇಳಿಕೆ ಅಥವಾ ಆನ್ಯುಯಲ್‌ ಇನ್‌ಫಾರ್ಮೇಶನ್‌ ಸ್ಟೇಟ್‌ಮೆಂಟ್‌ ( Annual Information Statement) ಒಂದಾಗಿದೆ. ಇದರಲ್ಲಿ ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌ಗಳು, ಸ್ಟಾಕ್‌ ಬ್ರೋಕರ್‌ಗಳು ಇತ್ಯಾದಿ ಮೂಲಗಳಿಂದ ಲಭಿಸಿದ ವಿವರಗಳನ್ನು ಪ್ರಿ-ಫಿಲ್ಡ್‌ ಮಾಡಿ ಶೇರ್‌ ಮಾಡಲಾಗುತ್ತದೆ. ಜತೆಗೆ ನಿಮ್ಮ ವೇತನ ವಿವರಗಳೂ ಇರುತ್ತದೆ. ಎಐಎಸ್‌ನಲ್ಲಿ ಮಾಹಿತಿಗಳು ಸರಿಯಾಗಿ ಇರುವುದು ಅವಶ್ಯಕ.

ತೆರಿಗೆ ಕಡಿತ ಆಗಿದ್ದರೂ, ಆಗದಿದ್ದರೂ ಎಐಎಸ್‌ ನಿರ್ಣಾಯಕ ದಾಖಲಾತಿ. ತೆರಿಗೆ ಇಲಾಖೆಯು 2021ರಲ್ಲಿ ಎಐಎಸ್‌ ಅನ್ನು ಪರಿಚಯಿಸಿದೆ. ತೆರಿಗೆ ಇಲಾಖೆ ನಾನಾ ಮೂಲಗಳಿಂದ ಸಂಗ್ರಹಿಸಿದ ವಿವರಗಳನ್ನು ಇದು ಒಳಗೊಂಡಿರುತ್ತದೆ. ಆದ್ದರಿಂದ ನೀವು ಇದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌ ಕಂಪನಿಗಳು, ನಿಮ್ಮ ಉದ್ಯೋಗದಾತರು, ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ವಿಸ್ತಾರ Money Guide: ಹಣ ಗಳಿಕೆಯ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುವು?

ಒಂದು ವೇಳೆ ಎಐಎಸ್‌ನಲ್ಲಿ ಯಾವುದಾದರೂ ಅಸಮರ್ಪಕ ಮಾಹಿ ಇದ್ದರೆ ಅಥವಾ ಸರಿಯಾದ ಮಾಹಿತಿ ಬಿಟ್ಟು ಹೋಗಿದ್ದರೆ ಏನು ಮಾಡಬಹುದು? ಇದಕ್ಕೂ ಪರಿಹಾರ ಇದೆ. ಆನ್‌ಲೈನ್‌ ಮೂಲಕ ಸರಿಯಾದ ಮಾಹಿತಿ ನೀಡಬಹುದು. ಫೀಡ್‌ ಬ್ಯಾಕ್‌ ಕೊಡಬಹುದು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (central board of direct taxes -CBDT) ತಿಳಿಸಿದೆ.

Exit mobile version