ನವದೆಹಲಿ: ಭಾರತದ ಉಕ್ಕು ಉತ್ಪಾದನೆ ಈ ವರ್ಷ ಮೇನಲ್ಲಿ ೯೭.೩ ಲಕ್ಷ ಟನ್‌ಗೆ ಏರಿಕೆಯಾಗಿದೆ. ಅಂದರೆ ೧೫% ಹೆಚ್ಚಳ ದಾಖಲಾಗಿದೆ. ಅದೇ ರೀತಿ ಉಕ್ಕಿನ ಬಳಕೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ೨೦% ಏರಿಕೆಯಾಗಿದೆ. (೯೪.೫೦ ಲಕ್ಷ ಟನ್)
ಕಳೆದ ಏಪ್ರಿಲ್-ಮೇ ತಿಂಗಳಿನಲ್ಲಿ ಒಟ್ಟಾಗಿ ೧.೮೫ ಕೋಟಿ ಟನ್ ಉಕ್ಕು ಬಳಕೆಯಾಗಿತ್ತು. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ೧೦% ಹೆಚ್ಚಳ ಇದಾಗಿದೆ. ಆರ್ಥಿಕ ಮತ್ತು ಉದ್ದಿಮೆ ವಲಯದ ಚಟುವಟಿಕೆ ಚುರುಕುಗೊಂಡಿರುವುದನ್ನು ಇದು ಬಿಂಬಿಸಿದೆ.
ಕಲ್ಲಿದ್ದಲು ಆಮದಿಗೆ ಟೆಂಡರ್
ಕಲ್ಲಿದ್ದಲು ಉತ್ಪಾದಕ ಕೋಲ್ ಇಂಡಿಯಾ ಕಲ್ಲಿದ್ದಲು ಆಮದಿನ ಟೆಂಡರ್‌ಗೆ ಸಂಬಂಧಿಸಿ ಜೂನ್ ೧೪-೧೭ರಂದು ಸಭೆ ಕರೆದಿದೆ. ಕಲ್ಲಿದ್ದಲಿನ ಕೊರತೆ ಹೆಚ್ಚುತ್ತಿದ್ದು, ನೀಗಿಸುವ ನಿಟ್ಟಿನಲ್ಲಿ ಆಮದು ಮಾಡಿಕೊಳ್ಳಳಾಗುತ್ತಿದೆ.