ಮುಂಬಯಿ: ಐಸಿಐಸಿಐ ಬ್ಯಾಂಕ್‌ನಲ್ಲಿ ನಡೆದಿರುವ ಸಾಲದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೊಕಾನ್ ಗ್ರೂಪ್‌ನ ಸ್ಥಾಪಕ ವೇಣುಗೋಪಾಲ್ ಧೂತ್ (72) ಅವರಿಗೆ (Interim bail ) ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
2022 ರ ಡಿಸೆಂಬರ್ 26ರಂದು ಧೂತ್ ಅವರನ್ನು ಸಿಬಿಐ ಬಂಧಿಸಿತ್ತು. 2019 ರ ಜನವರಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ, ಪಿಕೆ ಚವಾಣ್ ಅವರನ್ನು ಒಳಗೊಂಡಿದ್ದ ಹೈಕೋರ್ಟ್ ಪೀಠವು, ಧೂತ್ ಅವರಿಗೆ 1 ಲಕ್ಷ ರೂ. ಭದ್ರತಾ ಠೇವಣಿಯನ್ನು ಇಡಲು ಸೂಚಿಸಿ ಜಾಮೀನು ನೀಡಿತು. ಚಂದಾ ಕೊಚ್ಚಾರ್ ಎಂಡಿ ಆಗಿದ್ದಾಗ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೊಕಾನ್ ಗ್ರೂಪ್ ಕಂಪನಿಗೆ ಅಕ್ರಮವಾಗಿ ಸಾಲ ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಮುಂದುವರಿಸಿದೆ.