Site icon Vistara News

IRCTC Services : ಐಆರ್‌ಸಿಟಿಸಿ ಸೇವೆ ಅಲ್ಪಕಾಲದ ಅಡಚಣೆ ಬಳಿಕ ಲಭ್ಯ

IRCTC

ಬೆಂಗಳೂರು: ಭಾರತೀಯ ರೈಲ್ವೆಯ (Indian Railway Catering and Tourism Corporation -IRCTC) ಐಆರ್‌ಸಿಟಿಸಿ ವೆಬ್‌ಸೈಟ್‌ ಕೆಲ ಕಾಲ ಅಡಚಣೆಯಿಂದ ಸ್ಥಗಿತವಾಗಿತ್ತು. ಆದರೆ ಇದೀಗ ಮತ್ತೆ ಲಭ್ಯವಿದೆ ಎಂದು ಇಲಾಖೆ ತಿಳಿಸಿದೆ. ಬಳಕೆದಾರರು ಐಆರ್‌ಸಿಟಿಸಿ ಅಪ್ಲಿಕೇಶನ್‌ನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಪ್ರಯಾಣಿಕರಿಗೆ ಟಿಕೆಟ್‌ ಬುಕಿಂಗ್‌ ಮಾಡುವಾಗ ಉಂಟಾಗಿದ್ದ ಅಡಚಣೆಗಳು ಬಗೆಹರಿದಿವೆ. ಅಡಚಣೆ ಆಗಿದ್ದಕ್ಕೆ ವಿಷಾದಗಳು ಎಂದು ಐಆರ್‌ಸಿಟಿಸಿ ಟ್ವೀಟ್‌ ಮಾಡಿದೆ. ತಾಂತ್ರಿಕ ಅಡಚಣೆಯಿಂದ ಪ್ಲಾಟ್‌ಫಾರ್ಮ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಈ ಹಿಂದೆ ಐಆರ್‌ಸಿಟಿಸಿ ಟ್ವೀಟ್‌ ಮಾಡಿತ್ತು.

ಇದನ್ನೂ ಓದಿ: IRCTC website: ಐಆರ್‌ಸಿಟಿಸಿ ವೆಬ್‌ಸೈಟ್‌ ಡೌನ್‌, ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕಿದ್ದರೆ ಹೀಗೆ ಮಾಡಿ

ಐಆರ್‌ಸಿಟಿಸಿ ಶೀಘ್ರದಲ್ಲಿಯೇ ವಾಯ್ಸ್‌ ಆಧರಿತ ಇ-ಟಿಕೆಟ್‌ ಬುಕಿಂಗ್‌ ಸೌಲಭ್ಯವನ್ನು ನೀಡಲಿದೆ. ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಅನ್ನು ಮತ್ತಷ್ಟು ಬಳಕೆದಾರ ಸ್ನೇಹಿಯಾಗಿಸಲಿದೆ ಎಂದು ವರದಿಯಾಗಿದೆ. ಐಆರ್‌ಸಿಟಿಸಿ Ask Disha ಎಂಬ ಎಐ ಆಧರಿತ ಪ್ಲಾಟ್‌ಫಾರ್ಮ್‌ ಅನ್ನು ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಿದೆ. ಇದರಲ್ಲಿ ಗ್ರಾಹಕರು ವಾಯ್ಸ್‌ ಕಮಾಂಡ್‌ ಮೂಲಕ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಮಾಡಬಹುದು.

Exit mobile version