ನವದೆಹಲಿ: ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ, ದಿಲ್ಲಿ, ಮಧ್ಯಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಾನಾ ಉದ್ದಿಮೆಗಳ ಮೇಲೆ ಬುಧವಾರ ದಾಳಿ ನಡೆಸಿ ಪರಿಶೀಲಿಸಿದರು. ಪ್ರತ್ಯಕ ಪ್ರಕರಣಗಳಿಗೆ ಸಂಬಂಧಿಸಿ ಇಲಾಖೆ ಈ ಕ್ರಮ ಕೈಗೊಂಡಿದೆ.
ತೆರಿಗೆ ವಂಚನೆಗೆ ಸಂಬಂಧಿಸಿ ಎಂಬಸ್ಸಿ ಗ್ರೂಪ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಮುಂಬಯಿನಲ್ಲಿ ಗ್ರೂಪ್‌ನ ಕಚೇರಿಯಲ್ಲಿ ತಪಾಸಣೆ ನಡೆಸಲಾಯಿತು. ಕಾರ್ಯಾಚರಣೆ ವೇಳೆ ಕಚೇರಿಯಿಂದ ಯಾರೊಬ್ಬರನ್ನೂ ಹೊರಗೆ ಬಿಡಲಿಲ್ಲ ಹಾಗೂ ಒಳಗೆ ಸೇರಿಸಲಿಲ್ಲ. ಗುರ್ ಗಾಂವ್‌ನಲ್ಲಿ ಮದ್ಯದ ಉದ್ಯಮದ ಮೇಲೆ ದಾಳಿ ನಡೆಯಿತು. ಕರ್ನಾಟಕದಲ್ಲಿ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಯಿತು.
ಲಿಕ್ಕರ್ ಉತ್ಪಾದನೆ ಮತ್ತು ಮಾರಾಟ, ಡೇರಿ ಮತ್ತು ಹಾಲು, ರಿಯಲ್ ಎಸ್ಟೇಟ್ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿನ ಉದ್ದಿಮೆಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತು.