ನವ ದೆಹಲಿ: ರಿಲಯನ್ಸ್ ಸಮೂಹದ ಇ-ಕಾಮರ್ಸ್ ಕಂಪನಿಯಾದ ಜಿಯೊಮಾರ್ಟ್ (Reliance JioMart) 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮತ್ತೊಂದು ಸುತ್ತಿನಲ್ಲಿ ಮುಂಬರುವ ವಾರಗಳಲ್ಲಿ ಬರೋಬ್ಬರಿ 9,900 ಹುದ್ದೆ ಕಡಿತವಾಗುವ ಸಾಧ್ಯತೆ ಇದೆ. ತನ್ನ ಹಲವಾರು ಕೇಂದ್ರಗಳನ್ನು ಮುಚ್ಚಲೂ ಜಿಯೊಮಾರ್ಟ್ ಉದ್ದೇಶಿಸಿದೆ.
ಜಿಯೊ ಮಾರ್ಟ್ ತನ್ನ ಲಾಭವನ್ನು ಉಳಿಸಿಕೊಳ್ಳುವ ತಂತ್ರದ ಭಾಗವಾಗಿ ಉದ್ಯೋಗ ಕಡಿತಕ್ಕೆ ನಿರ್ಧರಿಸಿದೆ. ಕಾರ್ಪೊರೇಟ್ ಕಚೇರಿಯಲ್ಲಿ 500 ಎಕ್ಸಿಕ್ಯುಟಿವ್ಸ್‌ಗಳನ್ನೂ ಕೆಲಸದಿಂದ ತೆಗೆದು ಹಾಕಿದೆ.
ಜಿಯೊ ಮಾರ್ಟ್ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಕೊಡುತ್ತಿತ್ತು. ಆದರೆ ಈಗ ಲಾಭದ ದೃಷ್ಟಿಯಿಂದ ಹಾಗೂ ವೆಚ್ಚ ಕಡಿತದ ಉದ್ದೇಶದಿಂದ ಉದ್ಯೋಗಿಗಳ ಸಂಖ್ಯೆ ಇಳಿಸಿದೆ. ತನ್ನ ಅರ್ಧದಷ್ಟು ಫುಲ್‌ಫಿಲ್‌ಮೆಂಟ್ ಸೆಂಟರ್‌ಗಳನ್ನು ಮುಚ್ಚಲು ಉದ್ದೇಶಿಸಿದೆ. ರಿಲಯನ್ಸ್ ರಿಟೇಲ್. ಮೆಟ್ರೊ ಕ್ಯಾಶ್ & ಕ್ಯಾರಿ ಇಂಡಿಯಾವನ್ನೂ ಖರೀದಿಸಿದೆ. ಹೀಗಾಗಿ ಹೆಚ್ಚುವರಿ 3500 ಕಾರ್ಮಿಕರು ಇದ್ದಾರೆ. ಹೀಗಾಗಿ ಉದ್ಯೋಗ ಕಡಿತ ಅನಿವಾರ್ಯವಾಗಿತ್ತು ಎಂದು ವರದಿಯಾಗಿದೆ.
ಭಾರತದಲ್ಲಿ ರಿಟೇಲ್ ಉದ್ಯಮ ಬದಲಾಗುತ್ತಿದೆ. ಇ-ಕಾಮರ್ಸ್ ಮಹತ್ವ ಪಡೆಯುತ್ತಿದೆ. ಜಿಯೊಮಾರ್ಟ್ ಮಾರುಕಟ್ಟೆಯಲ್ಲಿ ಬೆಳೆಯುತ್ತಿದೆ. ಪ್ರತಿಸ್ಪರ್ಧಿ ಕಂಪನಿಗಳ ಜತೆ ನಿಲ್ಲಲು ಬದಲಾವಣೆಗಳ ಅಗತ್ಯ ಇರುತ್ತದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ:Reliance Jio Q4 Results : ಜಿಯೊಗೆ ಜನವರಿ-ಮಾರ್ಚ್‌ನಲ್ಲಿ 4,716 ಕೋಟಿ ರೂ. ನಿವ್ವಳ ಲಾಭ, 13% ಹೆಚ್ಚಳ