ಸ್ಟಾಕ್‌ಹೋಮ್: ಸ್ವೀಡನ್ ಮೂಲದ ಸ್ಪೋಟಿಫೈ ಟೆಕ್ನಾಲಜಿ (Spotify ) ಕಂಪನಿಯು ಈ ವಾರ ಉದ್ಯೋಗ ಕಡಿತ ಮಾಡಲಿದೆ. ಇದರೊಂದಿಗೆ ಅಮೆಜಾನ್, ಮೆಟಾ ಇತ್ಯಾದಿ ಟೆಕ್ ಕಂಪನಿಗಳಲ್ಲಿನ ಜಾಬ್ ಕಟ್ ಟ್ರೆಂಡ್ ಮತ್ತಷ್ಟು ಕಂಪನಿಗಳಿಗೆ ಮುಂದುವರಿದಂತಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಕಂಪನಿ 38 ಮಂದಿಗೆ ಗೇಟ್ ಪಾಸ್ ನೀಡಿತ್ತು. ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಕಂಪನಿ ತಿಳಿಸಿದೆ. ಮ್ಯೂಸಿಕ್ ಸ್ಟ್ರೀಮಿಂಗ್ ವಲಯದ ದಿಗ್ಗಜ ಕಂಪನಿಯಾಗಿರುವ ಸ್ಪೋಟಿಫೈ 9800 ಉದ್ಯೋಗಿಗಳನ್ನು ಹೊಂದಿದೆ.
ಹೊಸತಾಗಿ ಎಷ್ಟು ಮಂದಿಗೆ ಪಿಂಕ್ ಸ್ಲಿಪ್ ನೀಡಲಾಗುವುದು ಎಂದು ಕಂಪನಿ ತಿಳಿಸಿಲ್ಲವಾದರೂ, ಉದ್ಯೋಗ ಕಡಿತ ಖಾತರಿಯಾಗಿದೆ. ಸ್ಪೋಟಿಫೈ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.