ಬೆಂಗಳೂರು: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಮದ್ಯದ ದರಗಳಲ್ಲಿ 20% ದರ ಏರಿಕೆಯಾಗಿದೆ. ಮದ್ಯದ ಎಲ್ಲ 18 ಘೋಷಿತ ದರ ಶ್ರೇಣಿಗಳ ಮೇಲೆ (karnataka budget 2023) ಹೆಚ್ಚುವರಿ ಸುಂಕವನ್ನು ವಿಧಿಸಲಾಗಿದೆ. ಹೀಗಾಗಿ ಮದ್ಯ ದುಬಾರಿಯಾಗಲಿದೆ.
ಬಿಯರ್ ಮೇಲಿನ ಸುಂಕವನ್ನು 175%ರಿಂದ 185% ಕ್ಕೆ ಏರಿಸಲಾಗಿದೆ. ಹೀಗಿದ್ದರೂ ಅಬಕಾರಿ ಸುಂಕದ ಏರಿಕೆಯ ಬಳಿಕವೂ ನಮ್ಮ ರಾಜ್ಯದಲ್ಲಿ ನೆರೆ ರಾಜ್ಯಗಳಿಗಿಂತ ಕಡಿಮೆ ದರದಲ್ಲಿ ಮದ್ಯ ಸಿಗಲಿದೆ ಎಂದು ಸರ್ಕಾರ ಬಜೆಟ್‌ನಲ್ಲಿ ತಿಳಿಸಿದೆ.
36,000 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ ಗುರಿಯನ್ನು ಇಲಾಖೆಗೆ ನೀಡಲಾಗಿದೆ. ರಾಜ್ಯದ ಎಲ್ಲ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯಿಂದ 1.01 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಹೊಂದಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವಾಗಿ 25,000 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ವಾಹನ ನೋಂದಣಿಯಿಂದ 11,500 ಕೋಟಿ ರೂ. ಸಂಗ್ರಹ ನಿರೀಕ್ಷಿಸಲಾಗಿದೆ.
ಬಜೆಟ್‌ನ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.