ನವ ದೆಹಲಿ: ಖಾಸಗಿ ವಲಯದ ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ನಿಶ್ಚಿತ ಠೇವಣಿಗಳ (Fixed deposit) ಮೇಲಿನ ಬಡ್ಡಿ ದರಗಳನ್ನು ಏರಿಸಿದೆ. ೩೬೫ ದಿನಗಳಿಂದ ೩೮೯ ದಿನಗಳ ಅವಧಿಯ ನಿಶ್ಚಿತ ಠೇವಣಿಗಳಿಗೆ ಪರಿಷ್ಕೃತ ಬಡ್ಡಿ ದರಗಳು ಮಂಗಳವಾರದಿಂದಲೇ ಅನ್ವಯಿಸಲಿವೆ.
ಐಸಿಐಸಿಐ ಬ್ಯಾಂಕ್, ಪಿಎನ್‌ಬಿ, ಎಸ್‌ಬಿಐ ಮತ್ತಿತರ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಪರಿಷ್ಕರಿಸಿದ ಬಳಿಕ ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡ ಏರಿಸಿದೆ. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ತನ್ನ ರೆಪೊ ದರವನ್ನು ಏರಿಸಿದ ಬಳಿಕ, ಬ್ಯಾಂಕ್‌ಗಳು ನಿಶ್ಚಿತ ಠೇವಣಿಗಳ ಬಡ್ಡಿ ದರವನ್ನು ಪರಿಷ್ಕರಿಸಿವೆ.
ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ೨ ಕೋಟಿ ರೂ.ಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿಗೆ ಜುಲೈ ೨೬ರಿಂದ ಬಡ್ಡಿ ದರ ಇಂತಿದೆ.
ಅವಧಿ | ಸಾಮಾನ್ಯ ನಾಗರಿಕರಿಗೆ | ಹಿರಿಯ ನಾಗರಿಕರಿಗೆ |
7-15 ದಿನಗಳು | 2.50 % | 3.00 % |
15-30 ದಿನಗಳು | 2.50 % | 3.05 % |
31-45 ದಿನಗಳು | 3.00 % | 3.50% |
46-90 ದಿನಗಳು | 3.00% | 3.50% |
91-120 ದಿನಗಳು | 3.50% | 4.00% |
121-179 ದಿನಗಳು | 3.50% | 4.00% |
180-269 ದಿನಗಳು | 4.75% | 5.25% |
270 ದಿನಗಳು | 4.75% | 5.25% |
271-363 ದಿನಗಳು | 4.75% | 5.25% |