ನವ ದೆಹಲಿ: ಬ್ಯಾಂಕ್ ವ್ಯವಹಾರದಲ್ಲಿ 40 ಗ್ರಾಹಕರು ತಮ್ಮ ಖಾತೆಗಳಿಂದ ಕೇವಲ 3 ದಿನಗಳಲ್ಲಿ ಲಕ್ಷಾಂತರ ರೂ. ಕಳೆದುಕೊಂಡ (40 Bank customers lost lakhs in 3 days) ಘಟನೆ ನಡೆದಿದೆ. ಈ ಗ್ರಾಹಕರು ಮಾಡಿದ ಪ್ರಮಾದ ಏನೆಂದರೆ, ಒಂದು ನಕಲಿ ಲಿಂಕ್ ಅನ್ನು ಕ್ಲಿಕ್ಕಿಸಿದ್ದು. ( Banking) ಕೆವೈಸಿ ಮತ್ತು ಪ್ಯಾನ್ ಕಾರ್ಡ್ (KYC) ವಿವರವನ್ನು ಕೋರಿ ಬಂದಿದ್ದ ಲಿಂಕ್ ಅನ್ನು ಕ್ಲಿಕ್ಕಿಸಿ ಈ ಗ್ರಾಹಕರು ತಮ್ಮ ಖಾತೆಯಿಂದ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ.
ಮುಂಬಯಿ ಪೊಲೀಸರು ನಾಗರಿಕರಿಗೆ ಸಲಹೆಯನ್ನು ನೀಡಿದ್ದು, ಗೌಪ್ಯ ಮಾಹಿತಿಯನ್ನು ಕೋರುವ ಲಿಂಕ್‌ಗಳನ್ನು ಕ್ಲಿಕ್ಕಿಸದಂತೆ ಎಚ್ಚರ ವಹಿಸಲು ಸಲಹೆ ನೀಡಿದೆ.
ಈ ಖಾತೆದಾರರಿಗೆ ಕೆವೈಸಿ ಮತ್ತು ಪ್ಯಾನ್ ವಿವರ ಅಪ್‌ಡೇಟ್ ಮಾಡುವಂತೆ ಲಿಂಕ್ ಬಂದಿತ್ತು. ಅದು ಬ್ಯಾಂಕ್‌ನ ನಕಲಿ ವೆಬ್‌ಸೈಟ್‌ಗೆ ಲಿಂಕ್ ಮಾಡುತ್ತಿತ್ತು. ಅಲ್ಲಿ ಕಸ್ಟಮರ್ ಐಡಿ, ಪಾಸ್‌ವರ್ಡ್, ಒಟಿಪಿ ಮತ್ತು ಇತರ ಮಾಹಿತಿಗಳನ್ನು ಎಂಟರ್ ಮಾಡುವಂತೆ ತಿಳಿಸಲಾಗುತ್ತಿತ್ತು. ಬಳಿಕ ವಂಚಕರು ಖಾತೆಯಿಂದ ಲಕ್ಷಾಂತರ ರೂ.ಗೆ ಕನ್ನ ಹಾಕುತ್ತಿದ್ದರು.