Site icon Vistara News

LIC ತ್ರೈಮಾಸಿಕ ಲಾಭ 2,409 ಕೋಟಿ ರೂ. 17% ಇಳಿಕೆ, 810 ರೂ.ಗೆ ತಗ್ಗಿದ ಷೇರು ದರ

lic

ನವದೆಹಲಿ: ಭಾರತೀಯ ಜೀವ ವಿಮೆ ನಿಗಮ ಕಳೆದ ಜನವರಿ-ಮಾರ್ಚ್‌ ತ್ರೈಮಾಸಿಕ ಅವಧಿಯ ಫಲಿತಾಂಶ ಪ್ರಕಟಿಸಿದ್ದು, 2,409 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಆದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ( 2,917 ಕೋಟಿ ರೂ.) ಶೇ,17 ರಷ್ಟು ಇಳಿಕೆ ದಾಖಲಿಸಿದೆ.

ಎಲ್‌ಐಸಿ ಹೂಡಿಕೆದಾರರಿಗೆ ಪ್ರತಿ ಷೇರಿಗೆ 1.50 ರೂ.ಗಳ ಡಿವಿಡೆಂಡ್‌ ಘೋಷಿಸಿದೆ. ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರು ದರ 810 ರೂ.ಗಳ ಕೆಳಮಟ್ಟಕ್ಕೆ ಇಳಿಕೆಯಾಗಿದೆ. ಐಪಿಒ ದರ 949 ರೂ. ನಿಗದಿಯಾಗಿತ್ತು. ಅಂದರೆ 139 ರೂ. ಕೆಳಮಟ್ಟದಲ್ಲಿದೆ. ತಜ್ಞರ ಪ್ರಕಾರ ಎಲ್‌ಐಸಿ ಮೌಲ್ಯಯುತವಾದ ಷೇರು ಆಗಿ ಹೂಡಿಕೆಗೆ ಪರಿಗಣಿಸಬಹುದು. ಹೊಸತಾಗಿ ಹೂಡಿಕೆ ಮಾಡಲು ಬಯಸುವವರು ಇನ್ನೂ ಸ್ವಲ್ಪ ಕಾಯುವುದು ಸೂಕ್ತ.

2021-22 ರ ಇಡೀ ಸಾಲಿಗೆ ಎಲ್‌ಐಸಿ 4,043 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು 2020-21ಕ್ಕೆ ಹೋಲಿಸಿದರೆ ಶೇ.39ರಷ್ಟು ಹೆಚ್ಚು ( 2,900 ಕೋಟಿ ರೂ.)

ಇದನ್ನೂ ಓದಿ:ಹೂಡಿಕೆದಾರರಿಗೆ ಎಲ್‌ಐಸಿ ಷೇರು ಕಲಿಸಿ‌ದ ಹೊಸ ಪಾಠ!

Exit mobile version