ಮುಂಬಯಿ: ಭಾರತೀಯ ಮೂಲದ ಹಿರಿಯ ತಂತ್ರಜ್ಞಾನಿ, ಮಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್‌ನಿಂದ (MIT) ನಾಲ್ಕು ಪದವಿಗಳನ್ನು ಗಳಿಸಿರುವ ಡಾ. ಶಿವ ಅಯ್ಯಾದೊರೈ (59), ಟ್ವಿಟರ್‌ನ ಮುಂದಿನ ಸಿಇಒ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಎಲಾನ್ ಮಸ್ಕ್ ಅವರು ಟ್ವಿಟರ್‌ನ ಸಿಇಒ ಹುದ್ದೆಯಿಂದ ( Twitter CEO) ಕೆಳಗಿಳಿಯುವುದಾಗಿ ಇತ್ತೀಚೆಗೆ ಸುಳಿವು ನೀಡಿದ್ದರು.
ಮುಂಬಯಿ ಮೂಲದ ಅಯ್ಯಾದೊರೈ ಅವರು ಎಂಐಟಿಯಿಂದ ಜೈವಿಕ ವಿಜ್ಞಾನ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಸೇರಿದಂತೆ ನಾಲ್ಕು ಪದವಿಗಳನ್ನು ಗಳಿಸಿದ್ದಾರೆ. ಟ್ವಿಟರ್‌ನ ಸಿಇಒ ಹುದ್ದೆಗೆ ನಾನು ಆಸಕ್ತನಾಗಿದ್ದೇನೆ. ಏಳು ಯಶಸ್ವಿ ಹೈಟೆಕ್ ಸಾಫ್ಟ್‌ವೇರ್ ಕಂಪನಿಗಳನ್ನು ನಾನು ಸೃಷ್ಟಿಸಿದ್ದೇನೆ. ದಯವಿಟ್ಟು ಅರ್ಜಿ ಸಲ್ಲಿಸುವ ಬಗ್ಗೆ ತಿಳಿಸಿ ಎಂದು ಎಲಾನ್ ಮಸ್ಕ್ ಅವರಿಗೆ ಅಯ್ಯಾ ದುರೈ ಅವರು ಟ್ವೀಟ್ ಮಾಡಿದ್ದಾರೆ.
2011ರಲ್ಲಿ ಬರೆದ ಲೇಖನವೊಂದರಲ್ಲಿ ಅಯ್ಯಾದೊರೈ ಅವರು, 1978ರಲ್ಲಿ 14 ವರ್ಷ ವಯಸ್ಸಿನ ಹುಡುಗನಾಗಿದ್ದಾಗಲೇ ಇಮೇಲ್ ಅನ್ನು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದರು.