Site icon Vistara News

Mobile number : ಶಾಪಿಂಗ್‌ ವೇಳೆ ಮೊಬೈಲ್‌ ನಂಬರ್‌ ಕೇಳುವುದೇಕೆ, ಸರಕಾರದ ಹೊಸ ಸೂಚನೆ ಏನು?

shoping centre

#image_title

ನವ ದೆಹಲಿ: ಶಾಪಿಂಗ್‌ ಮಾಲ್‌ಗಳಲ್ಲಿ ಪ್ರತಿ ಸಲವೂ ಬಿಲ್‌ ಪಡೆಯುವ ಸಂದರ್ಭ ಕೌಂಟರ್‌ನಲ್ಲಿ ಇರುವವರು ಮೊದಲಿಗೆ ನಿಮ್ಮ ಮೊಬೈಲ್‌ ನಂಬರ್‌ ಕೇಳಿರಬಹುದು. (Mobile number) ಬಳಿಕವಷ್ಟೇ ಬಿಲ್‌ ಮಾಡಲು ತೊಡಗುತ್ತಾರೆ. ಆದರೆ ವಾಸ್ತವವಾಗಿ ಗ್ರಾಹಕರ ಒಪ್ಪಿಗೆ ಇಲ್ಲದೆಯೇ (express consent) ಅವರ ಮೊಬೈಲ್‌ ನಂಬರ್‌ ಅನ್ನು ಸಂಗ್ರಹಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಇದೀಗ ರಿಟೇಲ್‌ ಕಂಪನಿಗಳಿಗೆ ಸೂಚಿಸಿದೆ.

ಕೇವಲ ಇದು ಸೂಚನೆ ಮಾತ್ರವಲ್ಲ, ಇನ್ನು ಮುಂದೆ ಗ್ರಾಹಕರ ಸಮ್ಮತಿ ಇಲ್ಲದೆಯೇ ಮೊಬೈಲ್‌ ನಂಬರ್‌ ಪಡೆದರೆ ಅದು ಶಿಕ್ಷಾರ್ಹ ಅಪರಾಧ (punishable offence) ಆಗುತ್ತದೆ. ಐಟಿ ಕಾಯಿದೆ ಅಡಿಯಲ್ಲಿ ಅದಕ್ಕೆ ಶಿಕ್ಷೆ ಇದೆ.

ಸರ್ಕಾರವು ರಿಟೇಲರ್ಸ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ (Retailers Association of India) ಮತ್ತು ಇತರ ಐದು ಕೈಗಾರಿಕಾ ಮಂಡಳಿಗಳಿಗೆ (CII, FICCI, ASSOCHAM, CAIT, PHD Chamber of commerce) ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಅವರು ಸೂಚಿಸಿದ್ದಾರೆ.

ರಿಟೇಲ್‌ ಮಳಿಗೆಗಳಲ್ಲಿ, ವ್ಯಾಪಾರಿ ಕೇಂದ್ರಗಳಲ್ಲಿ ಗ್ರಾಹಕರಿಂದ ಬಲವಂತವಾಗಿ ಮೊಬೈಲ್‌ ನಂಬರ್‌ ಪಡೆಯಬಾರದು. ಮೊಬೈಲ್‌ ನಂಬರ್‌ ಅನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕೇಳಿಕೊಂಡು, ಬಳಿಕ ಪ್ರಮೋಶನಲ್‌ ಮೆಸೇಜ್‌ಗಳನ್ನು ಕಳಿಸಬಾರದು ಎಂದು ಲಿಖಿತವಾಗಿ ತಿಳಿಸಿದ್ದಾರೆ.

ಮೊಬೈಲ್‌ ನಂಬರ್‌ ಕೇಳುವುದೇಕೆ? ಕಾನೂನು ಪ್ರಕಾರ ಶಾಪಿಂಗ್‌ ಮಾಲ್‌ಗಳಲ್ಲಿ ಬಿಲ್ಲಿಂಗ್‌ ವೇಳೆ ಮೊಬೈಲ್‌ ನಂಬರ್‌ ಅನ್ನು ಗ್ರಾಹಕರಿಂದ ಪಡೆಯಲೇಬೇಕೆಂದಿಲ್ಲ. ಹಾಗೆ ಒತ್ತಾಯ ಅಥವಾ ಆಗ್ರಹ ಮಾಡಿದರೆ ಅದು ತಪ್ಪು. ಆದರೆ ಮಾರ್ಕೆಟಿಂಗ್‌ ಹೆಚ್ಚಿಸಿಕೊಳ್ಳುವ ತಂತ್ರದ ಭಾಗವಾಗಿ ಶಾಪಿಂಗ್‌ ಮಾಲ್‌ಗಳಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ಸಂಗ್ರಹಿಸುತ್ತಾರೆ. ತಮ್ಮ ಡಿಸ್ಕೌಂಟ್‌ಗಳ ಬಗ್ಗೆ, ಆಫರ್‌ಗಳ ಬಗ್ಗೆ ತಿಳಿಸಲು ಬಳಸುತ್ತಾರೆ. ಮೆಸೇಜ್‌ ಕಳಿಸುತ್ತಾರೆ.

ಇದನ್ನೂ ಓದಿ: Retail inflation : ಬಿಗ್‌ ರಿಲೀಫ್, ರಿಟೇಲ್‌ ಹಣದುಬ್ಬರ ಏಪ್ರಿಲ್‌ನಲ್ಲಿ 4.7%ಕ್ಕೆ ಇಳಿಕೆ, ಕಾರಣವೇನು?

Exit mobile version