Site icon Vistara News

Mukesh Ambani: ಮುಕೇಶ್ ಅಂಬಾನಿ ದಿನಕ್ಕೆ 3 ಕೋಟಿ ಖರ್ಚು ಮಾಡಿದರೂ ಅವರ ಸಂಪತ್ತು ಪೂರ್ತಿ ಖಾಲಿಯಾಗಲು 932 ವರ್ಷ ಬೇಕು!

Mukesh Ambani

ವಿಶ್ವದ (world) 11ನೇ ಮತ್ತು ಏಷ್ಯಾದ (Asia) ಮೊದಲ ಸ್ಥಾನದಲ್ಲಿರುವ ಶ್ರೀಮಂತ ವ್ಯಕ್ತಿ (richest person) ಮುಕೇಶ್ ಅಂಬಾನಿ (Mukesh Ambani) ವ್ಯಕ್ತಿ ಅವರ ನಿವ್ವಳ ಸಂಪತ್ತಿನ ಮೌಲ್ಯ 10.21 ಲಕ್ಷ ಕೋಟಿ ರೂ. ಗಳಾಗಿದೆ. ಅವರು ಪ್ರತಿದಿನ 3 ಕೋಟಿ ರೂಪಾಯಿ ಖರ್ಚು ಮಾಡಿದರೆ ಅಥವಾ ದೇಣಿಗೆ ನೀಡಿದರೆ ಅವರ ಸಂಪತ್ತು ಯಾವಾಗ ಕೊನೆಯಾಗಬಹುದು ಗೊತ್ತೇ?

ಮುಕೇಶ್ ಅಂಬಾನಿ ಅವರು ತಮ್ಮ ನಿವ್ವಳ ಮೌಲ್ಯದಿಂದ ದಿನಕ್ಕೆ 3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ ಅಥವಾ ದಾನ ಮಾಡಿದರೆ, ಅವರ ಎಲ್ಲಾ ಸಂಪತ್ತು 3,40,379 ದಿನಗಳಲ್ಲಿ ಕೊನೆಗೊಳ್ಳುತ್ತದೆ. ಇದನ್ನು ವರ್ಷಗಳಾಗಿ ಪರಿವರ್ತಿಸಿದರೆ ವರ್ಷದಲ್ಲಿ 365 ದಿನಗಳಂತೆ ಅವರು ತಮ್ಮ ಸಂಪತ್ತನ್ನು ಮುಗಿಸಲು 932 ವರ್ಷ ಮತ್ತು 6 ತಿಂಗಳು ಬೇಕಾಗುತ್ತದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ 2024ರಲ್ಲಿ ಅಂಬಾನಿಯವರ ನಿವ್ವಳ ಮೌಲ್ಯವು ಸುಮಾರು 1.98 ಲಕ್ಷ ಕೋಟಿ ರೂ. ಗಳಷ್ಟು ಹೆಚ್ಚಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾದ ಮುಕೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಹೊಂದಿದ್ದಾರೆ. ಅವರ ಬಳಿ 10.21 ಲಕ್ಷ ಕೋಟಿ ರೂ. ಗಳಷ್ಟು ಅಗಾಧವಾದ ಸಂಪತ್ತನ್ನು ಹೊಂದಿದ್ದಾರೆ.

ಅವರ ಬಳಿ ಸಂಪತ್ತಿನ ಹೆಚ್ಚಳವು ವಿಶ್ವದ ಗಣ್ಯ ಬಿಲಿಯನೇರ್‌ಗಳಲ್ಲಿ ಅವರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದೆ. ಪ್ರಸ್ತುತ ಇವರು ಮುಂಬಯಿನಲ್ಲಿ ತಮ್ಮ ಕಿರಿಯ ಪುತ್ರ ಅನಂತ್ ಮತ್ತು ರಾಧಿಕಾ ಅವರ ವಿವಾಹ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ವಿಶ್ವದ ವಿವಿಧ ಗಣ್ಯರು ಪಾಲ್ಗೊಂಡಿದ್ದಾರೆ.

ಅಂಬಾನಿಯವರ ಈ ಸಂಪತ್ತಿನ ಪ್ರಮಾಣವು ಅವರ ವ್ಯವಹಾರ ಕುಶಾಗ್ರಮತಿಗೆ ಸಾಕ್ಷಿಯಾಗಿದೆ.


ರಿಲಯನ್ಸ್ ಗೆ ಟಾಪ್ 10 ಉದ್ಯಮ ಸಮೂಹದಲ್ಲಿ ಸ್ಥಾನ ಪಡೆಯುವ ಗುರಿ

ಒಂದೇ ಸ್ಥಳದಲ್ಲಿ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಸಮುಚ್ಚಯ ನಿರ್ಮಾಣದಿಂದ ದೇಶದ ಅತಿದೊಡ್ಡ ಮೊಬೈಲ್ ನೆಟ್ ವರ್ಕ್ ಆಪರೇಟರ್ ಎಂದು ಕೆಲವೇ ವರ್ಷದಲ್ಲಿ ಉದ್ಯಮವು ಬೆಳೆದಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಇಷ್ಟಕ್ಕೇ ತೃಪ್ತಿ ಆಗುವುದಿಲ್ಲ, ವಿಶ್ವದ ಟಾಪ್ 10 ಉದ್ಯಮ ಸಮೂಹಗಳಲ್ಲಿ ಒಂದಾಗಿ ಬೆಳೆಯಲಿದೆ ಎಂದು ಮುಕೇಶ್ ಅಂಬಾನಿ ಇತ್ತೀಚಿಗೆ ಹೇಳಿದ್ದರು.

ರಿಲಯನ್ಸ್ ಸಮೂಹದ ಸ್ಥಾಪಕರಾದ ಧೀರೂಭಾಯಿ ಅಂಬಾನಿ ಅವರ ಜನ್ಮದಿನವನ್ನು ರಿಲಯನ್ಸ್ ಕುಟುಂಬ ದಿನವೆಂದು ಆಚರಿಸಲಾಗುತ್ತಿದ್ದು, ಇದರ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಅವರು ತಿಳಿಸಿದರು.
ರಿಲಯನ್ಸ್ ಈಗ ಡಿಜಿಟಲ್ ಡೇಟ್ ಪ್ಲಾಟ್ ಫಾರ್ಮ್ಸ್ ಮತ್ತು ಎಐ (ಕೃತಕ ಬುದ್ಧಿಮತ್ತೆ) ಅಳವಡಿಕೆಯಲ್ಲಿ ಜಾಗತಿಕ ನಾಯಕರ ಸಾಲಿನಲ್ಲಿ ರಿಲಯನ್ಸ್ ಸ್ಥಾನ ಪಡೆಯುವ ಗುರಿ ಇರಿಸಿಕೊಂಡಿದೆ ಎಂದು ಹೇಳಿದ್ದರು.

ಇವತ್ತಿಗೆ ಉದ್ಯಮ ದೇಶೀಯ ಮತ್ತು ಜಾಗತಿಕ ಜಾಗತಿಕ ಪರಿಸರ ಬಹಳ ವೇಗವಾಗಿ ಬದಲಾಗುತ್ತಿದೆ. ಅಲ್ಲಿ ಸಂತೃಪ್ತಿಗೆ ಯಾವುದೇ ಅವಕಾಶ ಇಲ್ಲ. ರಿಲಯನ್ಸ್ ಹಿಂದೆಯೂ ಸಂತೃಪ್ತಗೊಂಡಿಲ್ಲ ಮತ್ತು ಭವಿಷ್ಯದಲ್ಲೂ ಸಂತೃಪ್ತ ಆಗುವುದಿಲ್ಲ. ಉದ್ಯಮ‌ ವಿಸ್ತರಿಸುತ್ತಲೇ ಹೋಗುತ್ತದೆ ಎಂದು ಅವರು ವಿವರಿಸಿದ್ದರು.

ನಿರಂತರವಾದ ನಾವೀನ್ಯತೆ ಮತ್ತು ಮರು ಸಂಶೋಧನೆಯ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮಾಡುವುದಕ್ಕೆ ರಿಲಯನ್ಸ್ ಹೆಸರು ಪಡೆದಿದೆ. ಧೀರೂಭಾಯಿ ಅಂಬಾನಿ ಕಾಲದಲ್ಲಿ ಮುಂಬಯಿನಲ್ಲಿ ಸಣ್ಣ ಜವಳಿ ಉತ್ಪಾದನಾ ಘಟಕದೊಂದಿಗೆ ಪ್ರಾರಂಭಿಸಿ, ರಿಲಯನ್ಸ್ ಈಗ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಮುಂದೆ ಪೆಟ್ರೋಕೆಮಿಕಲ್ಸ್ ಆರಂಭಿಸಿತು ಮತ್ತು ದೇಶದ ಅತಿದೊಡ್ಡ ಉತ್ಪಾದಕ ಆಯಿತು. ಆ ನಂತರ ತೈಲ ಸಂಸ್ಕರಣಾಗಾರ ಆರಂಭಿಸಿತು. ಇದು ದೇಶದಲ್ಲೇ ಅತಿದೊಡ್ಡ ಸಂಸ್ಕರಣಾಗಾರವಾಗಿತ್ತು ಮತ್ತು ಆ ನಂತರ ವಿಶ್ವದಲ್ಲೇ ಅತಿದೊಡ್ಡ ಏಕಸ್ಥಳ ತೈಲ ಸಂಸ್ಕರಣಾಗಾರವಾಗಿ ವಿಸ್ತರಣೆ ಆಯಿತು ಎಂದು ತಿಳಿಸಿದ್ದರು.

ಇದನ್ನೂ ಓದಿ: ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

ರಿಲಯನ್ಸ್ ಇಂಡಸ್ಟ್ರೀಸ್ 2005ರಲ್ಲಿ ಚಿಲ್ಲರೆ ವಲಯವನ್ನು ಪ್ರವೇಶಿಸಿತು ಮತ್ತು ಈಗ ದೇಶದಲ್ಲಿ ಕಿರಾಣಿ ಅಂಗಡಿಗಳು, ಹೈಪರ್‌ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಚಿಲ್ಲರೆ ವ್ಯಾಪಾರದ ಅತಿದೊಡ್ಡ ಆಪರೇಟರ್ ಆಗಿದೆ. 2016ರಲ್ಲಿ ಇದು ಟೆಲಿಕಾಂ ಸೇವೆ ಜಿಯೋವನ್ನು ಪ್ರಾರಂಭಿಸಿತು, ಇದು ಶೀಘ್ರವಾಗಿ ಭಾರತದಲ್ಲಿ ಅತಿದೊಡ್ಡ ಆಪರೇಟರ್ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆಪರೇಟರ್ ಆಯಿತು. ಇವತ್ತಿಗೆ ರಿಲಯನ್ಸ್ ಹೊಸ ಇಂಧನ ವ್ಯವಹಾರಗಳಿಗಾಗಿ ಗಿಗಾ-ಸ್ಕೇಲ್ (ಬೃಹತ್ ಪ್ರಮಾಣದ) ಕಾರ್ಖಾನೆಗಳನ್ನು ನಿರ್ಮಿಸುತ್ತಿದೆ ಮತ್ತು ಹಣಕಾಸು ಸೇವೆ ಕ್ಷೇತ್ರದಲ್ಲೂ ಮುನ್ನುಗ್ಗಿದೆ. ನಾವು ಗುರಿಯನ್ನು ಎತ್ತರಕ್ಕೆ ನಿಗದಿ ಮಾಡುವ ಧೈರ್ಯವನ್ನು ತೋರಿಸಿದ್ದೇವೆ ಮತ್ತು ಹೊಸ ದಾಖಲೆಗಳನ್ನು ಸೃಷ್ಟಿಸಲು ಇನ್ನಷ್ಟು ಎತ್ತರಕ್ಕೆ ಜಿಗಿಯುವ ಸಾಮರ್ಥ್ಯವನ್ನು ತೋರಿಸಿದ್ದೇವೆ. ಈ ಮೂಲಕ ರಿಲಯನ್ಸ್ ದೀರ್ಘಕಾಲಿಕ ಬೆಳವಣಿಗೆಯನ್ನು ಸಾಧಿಸಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದರು.

Exit mobile version