Site icon Vistara News

Nikhil Kamath : ಅಮೆರಿಕದಲ್ಲಿ ಓದಿದ ಸ್ನೇಹಿತರನ್ನು ಜೆರೋಧಾ ಸಂಸ್ಥಾಪಕ ನಿಖಿಲ್‌ ಕಾಮತ್ ಭಾರತಕ್ಕೆ ಆಹ್ವಾನಿಸಿದ್ದೇಕೆ?

nilhil kamant

Nikhil kamath

ಬೆಂಗಳೂರು: ಅಮೆರಿಕದಲ್ಲಿ ಪದವಿ ಓದಿರುವ ತಮ್ಮ ಸ್ನೇಹಿತರನ್ನು ಜೆರೋಧಾ ಸಂಸ್ಥಾಪಕ ನಿಖಿಲ್‌ ಕಾಮತ್‌ ಅವರು ಭಾರತಕ್ಕೆ ಮರಳಿ ಏನಾದರೂ ಸ್ಟಾರ್ಟಪ್‌ ಶುರು ಮಾಡುವಂತೆ ಆಹ್ವಾನಿಸಿದ್ದಾರೆ. ಭಾರತದ ಆರ್ಥಿಕತೆ ಬೆಳವಣಿಗೆ ದಾಖಲಿಸುತ್ತಿರುವುದು ಹಾಗೂ ಮುಂದಿನ ದಶಕದಲ್ಲಿ ಪ್ರಗತಿಯ ಉಜ್ವಲ ಭವಿಷ್ಯ ಇರುವುದರಿಂದ ಭಾರತಕ್ಕೆ ಮರಳಬೇಕು ಎಂದು ಮನವಿ ಮಾಡಿದ್ದಾರೆ. (Nikhil Kamath) ಈ ನಿಟ್ಟಿನಲ್ಲಿ ಬ್ಲೂಮ್‌ ಬರ್ಗ್‌ನ ವರದಿಯೊಂದನ್ನೂ ಟ್ವೀಟ್‌ ಮಾಡಿದ್ದಾರೆ. ಹಾಗಾದರೆ ಅದರಲ್ಲೇನಿದೆ?

ನಿಖಿಲ್‌ ಕಾಮತ್‌ ಅವರು ಬ್ಲೂಮ್‌ ಬರ್ಗ್‌ನ 2023ರಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ (Recession probabilities worldwide 2023) ಹಾಗೂ ಐಎಂಎಫ್‌ನ ವಿಶ್ವ ಉತ್ಪಾದನೆ 2023 (world output projection 2023) ಗ್ರಾಫ್‌ಗಳನ್ನು ಟ್ವೀಟ್‌ ಮಾಡಿದ್ದಾರೆ.

ತಜ್ಞರ ಪ್ರಕಾರ 2023ರಲ್ಲಿ ಭಾರತದಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ ಇಲ್ಲ. (೦%) ಆದರೆ ಬ್ರಿಟನ್‌ ಮತ್ತು ಅಮೆರಿಕದಲ್ಲಿ ಅನುಕ್ರಮವಾಗಿ 75% ಮತ್ತು 65% ಸಾಧ್ಯತೆ ಇದೆ. ಕೆನಡಾ ಮತ್ತು ಜರ್ಮನಿಯಲ್ಲಿ 60% ಸಾಧ್ಯತೆ ಇದೆ. ಮತ್ತೊಂದು ಕಡೆ ಭಾರತದ ಜಿಡಿಪಿ 2023ರಲ್ಲಿ 5.9% ಬೆಳೆಯುವ ಅಂದಾಜಿದೆ. ಇದು ಜಗತ್ತಿನಲ್ಲೇ ಹೆಚ್ಚು.

Exit mobile version