Site icon Vistara News

Oldest Billionaire: ಎಲ್‌ಐಸಿಯಲ್ಲಿ ಏಜೆಂಟ್ ಈಗ ಭಾರತದ ಹಿರಿಯ ಬಿಲಿಯನೇರ್

Oldest Billionaire

ಪಂಜಾಬ್: ಫೋರ್ಬ್ಸ್ ಬಿಲಿಯನೇರ್‌ಗಳ 2024ರ ಪಟ್ಟಿಯಲ್ಲಿ (Forbes Billionaires List) ಈ ಬಾರಿ ಭಾರತದ (india) ಸುಮಾರು 200 ಮಂದಿ ಅತ್ಯಂತ ಶ್ರೀಮಂತರು ಎಂಬ ಖ್ಯಾತಿಗೆ ಪಡೆದಿದ್ದು, ಇವರಲ್ಲಿ 93 ವರ್ಷದ ಪಂಜಾಬ್ (punjab) ನ ಲಚ್ಮನ್ ದಾಸ್ ಮಿತ್ತಲ್ (Lachhman Das Mittal) ಅವರು ಭಾರತದ ಅತ್ಯಂತ ಹಿರಿಯ ಬಿಲಿಯನೇರ್ (oldest billionaire) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹೀಂದ್ರಾ ಮತ್ತು ಮಹೀಂದ್ರಾ ಗುಂಪಿನ ( Mahindra & Mahindra group) ಮಾಜಿ ಅಧ್ಯಕ್ಷರಾದ ಕೇಶುಬ್ ಮಹೀಂದ್ರ (Keshub Mahindra) ಅವರು 2023ರ ಏಪ್ರಿಲ್ 12ರಂದು ತಮ್ಮ 99 ನೇ ವಯಸ್ಸಿನಲ್ಲಿ ನಿಧನರಾಗುವವರೆಗೂ ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ಯಾರು ಲಚ್ಮನ್ ದಾಸ್ ಮಿತ್ತಲ್ ?

1931ರಲ್ಲಿ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಜನಿಸಿದ ಲಚ್ಮನ್ ದಾಸ್ ಮಿತ್ತಲ್ ಎಲ್‌ಐಸಿಯಲ್ಲಿ ವಿಮಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ಉರ್ದುವಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಮೊದಲ ಸ್ಥಾನ ಪಡೆದು ತೇರ್ಗಡೆಯಾಗಿದ್ದರು. ಬಳಿಕ ಅವರು ಮಾರುತಿ ಉದ್ಯೋಗ್‌ನಲ್ಲಿ ಡೀಲರ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಿದ್ದು, ಅದನ್ನು ತಿರಸ್ಕರಿಸಲಾಗಿತ್ತು.

ಇದನ್ನೂ ಓದಿ: Youngest Billionaire: 19 ವರ್ಷದ ವಿದ್ಯಾರ್ಥಿನಿ ವಿಶ್ವದ ಕಿರಿಯ ಬಿಲಿಯನೇರ್ ಆಗಿದ್ದು ಹೇಗೆ? ಇಲ್ಲಿದೆ ಮನಿ ಸೀಕ್ರೆಟ್​​

ವ್ಯಾಪಾರ ಕ್ಷೇತ್ರಕ್ಕೆ ಕಾಲಿರಿಸಿದ ಅವರು, ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್ (ITL) ಅನ್ನು ಸ್ಥಾಪಿಸಿದರು. 1990ರಲ್ಲಿ ಅಂದರೆ ಅವರ 60 ನೇ ಇಳಿ ವಯಸ್ಸಿನಲ್ಲಿ ಸೋನಾಲಿಕಾ ಟ್ರಾಕ್ಟರ್‌ಗಳನ್ನು ಪ್ರಾರಂಭಿಸಿದರು. ಸೋನಾಲಿಕಾ ಗ್ರೂಪ್ ಇಂದು ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಐದು ದೇಶಗಳಲ್ಲಿ ಕೈಗಾರಿಕೆಗಳು ಮತ್ತು 120 ಕ್ಕೂ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆಗಳನ್ನು ಹೊಂದಿದೆ.

ಪ್ರಸ್ತುತ ಮಿತ್ತಲ್ ಅವರು ಕಂಪೆನಿಯ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿಲ್ಲ. ಆದರೆ ಅವರ ಕುಟುಂಬವು ಪ್ರಮುಖ ಪಾತ್ರ ವಹಿಸುತ್ತದೆ. ಅವರ ಹಿರಿಯ ಮಗ ಅಮೃತ್ ಸಾಗರ್ ಕಂಪೆನಿಯ ಉಪಾಧ್ಯಕ್ಷರಾಗಿದ್ದರೆ, ಅವರ ಕಿರಿಯ ಮಗ ದೀಪಕ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಮೊಮ್ಮಕ್ಕಳಾದ ಸುಶಾಂತ್ ಮತ್ತು ರಾಮನ್ ಕೂಡ ಕಂಪೆನಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.

ಮಿತ್ತಲ್ ಅವರ ಪುತ್ರಿ ಉಷಾ ಸಂಗವಾನ್ ಅವರು ಸರ್ಕಾರಿ ಸ್ವಾಮ್ಯದ ಜೀವ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ ಮೊದಲ ಮಹಿಳಾ ವ್ಯವಸ್ಥಾಪಕ ನಿರ್ದೇಶಕರಾಗಿದ್ದು ನಿವೃತ್ತಿ ಹೊಂದಿದ್ದಾರೆ.

ಭಾರತದಲ್ಲಿ 200 ಬಿಲಿಯನೇರ್ ಗಳು

ಭಾರತದ 200 ಬಿಲಿಯನೇರ್‌ಗಳು ಫೋರ್ಬ್ಸ್‌ನ 2024ರ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೇರಿದ್ದು, ಇವರು ಒಟ್ಟು 954 ಶತಕೋಟಿ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಭಾರತವು ಈ ವರ್ಷ ದಾಖಲೆಯ 200 ಅತಿ ಶ್ರೀಮಂತರನ್ನು ಹೊಂದಿರುವ ಕಾರಣದಿಂದ ಜಾಗತಿಕವಾಗಿ ಭಾರತ ಮೂರನೇ ಸ್ಥಾನದಲ್ಲಿದೆ.

ಮುಖೇಶ್ ಅಂಬಾನಿ ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಇವರ ಸಂಪತ್ತು 116 ಬಿಲಿಯನ್ ಡಾಲರ್, ಗೌತಮ್ ಅದಾನಿ 17ನೇ ಶ್ರೀಮಂತ ವ್ಯಕ್ತಿಯಾಗಿದ್ದು ಇವರ ಸಂಪತ್ತಿನ ಒಟ್ಟು ಮೌಲ್ಯ 84 ಬಿಲಿಯನ್ ಡಾಲರ್ . ರಿಲಯನ್ಸ್ ಇಂಡಸ್ಟ್ರೀಸ್ ಸಂಘಟಿತ ಷೇರುಗಳ ಬೆಳವಣಿಗೆಯೊಂದಿಗೆ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು 83 ಬಿಲಿಯನ್‌ ಡಾಲರ್ ನಿಂದ 116 ಶತಕೋಟಿ ಡಾಲರ್‌ಗೆ ಏರಿದ್ದು, ಅವರು ಪಟ್ಟಿಯಲ್ಲಿನ ವಿಶೇಷ 100 ಶತಕೋಟಿ ಡಾಲರ್ ಕ್ಲಬ್‌ಗೆ ಪ್ರವೇಶಿಸಿದ ಮೊದಲ ಏಷ್ಯದ ಶ್ರೀಮಂತ ವ್ಯಕ್ತಿ ಆಗಿದ್ದಾರೆ ಎಂದು ಫೋರ್ಬ್ಸ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಮೂಲಸೌಕರ್ಯ ಮತ್ತು ಸರಕುಗಳ ಉದ್ಯಮಿ ಗೌತಮ್ ಅದಾನಿ ಅವರು ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಯುಎಸ್ ಆಧಾರಿತ ಕಿರು-ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್‌ನಿಂದ ವಂಚನೆಯ ಆರೋಪದ ಬಳಿಕ ಅದಾನಿ ಗ್ರೂಪ್‌ನ ಷೇರುಗಳು ಕಳೆದ ವರ್ಷ ಕುಸಿತಕಂಡಿತ್ತು ಆದರೂ ಅದರಿಂದ ಶೀಘ್ರವಾಗಿ ಅವರು ಚೇತರಿಸಿಕೊಂಡರು. ಹೀಗಾಗಿ ಈ ಬಾರಿ ಅದಾನಿ 84 ಶತಕೋಟಿ ಸಂಪತ್ತಿನೊಂದಿಗೆ ಜಾಗತಿಕವಾಗಿ 17ನೇ ಶ್ರೀಮಂತ ವ್ಯಕ್ತಿಯಾಗಿ ಮರಳಿದ್ದಾರೆ.

Exit mobile version