Site icon Vistara News

Olectra Greentech Ltd: 4ನೇ ತ್ರೈಮಾಸಿಕದಲ್ಲಿ ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್‌ಗೆ ಭರ್ಜರಿ ಲಾಭ; ಇ-ಬಸ್‍ಗಳಿಗೆ ಹೆಚ್ಚಿದ ಬೇಡಿಕೆ

Olectra Greentech Ltd. posted a net profit in Q4, Increased demand for e-buses

ಹೈದರಾಬಾದ್: ಪ್ರಮುಖ ಎಲೆಕ್ಟ್ರಿಕ್ ಬಸ್ ತಯಾರಕ ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ (ಒಜಿಎಲ್) 2023 ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು 2022-23ರ ಹಣಕಾಸು ವರ್ಷದ ಲೆಕ್ಕಪರಿಶೋಧಿತ ಸ್ವತಂತ್ರ ಮತ್ತು ಏಕೀಕೃತ ಫಲಿತಾಂಶಗಳನ್ನು ಪ್ರಕಟಿಸಿದ್ದು, ನಿರ್ದೇಶಕರ ಮಂಡಳಿ ಸಭೆಯಲ್ಲಿ ಫಲಿತಾಂಶಗಳನ್ನು ಅನುಮೋದಿಸಲಾಗಿದೆ.

ವರದಿಯಂತೆ ಪ್ರಸಕ್ತ ವರ್ಷದಲ್ಲಿ, ಒಲೆಕ್ಟ್ರಾ ಇ-ಬಸ್‌ಗಳ ಅತಿ ಹೆಚ್ಚು ವಿತರಣೆಯನ್ನು ದಾಖಲಿಸಿದೆ. 2021-22ರಲ್ಲಿ 259 ಇದ್ದ, ಇ-ಬಸ್‍ಗಳ ವಿತರಣೆ 2022-23ರಲ್ಲಿ 563ಕ್ಕೆ ಏರಿಕೆಯಾಗಿದೆ. ಬಲವಾದ ಬೇಡಿಕೆ ಮುಂದುವರಿದಿದ್ದು, ಒಟ್ಟು ಆರ್ಡರ್‌ಗಳ ಸಂಖ್ಯೆ 3,394 ಯುನಿಟ್‌ಗಳಷ್ಟಿದೆ. ಇನ್ನು ಕಂಪನಿಯ ಕ್ರೋಡೀಕೃತ ಮೊತ್ತ 1,090.76 ಕೋಟಿ ರೂ. ಆಗಿದ್ದು ಶೇ.84ರಷ್ಟು ಏರಿಕೆಯಾಗಿದೆ. ಇಬಿಐಟಿಡಿಎ 153.97 ಕೋಟಿ ರೂ.ಗೆ ಅಂದರೆ ಶೇ.14 ಏರಿಕೆಯಾಗಿದೆ. ಕಂಪನಿಯಿಂದ ಎಲೆಕ್ಟ್ರಿಕ್ ಟಿಪ್ಪರ್‌ಗಳ ಮಾರಾಟ ಆರಂಭವಾಗಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ 17 ಇ-ಟಿಪ್ಪರ್‌ಗಳ ಹಸ್ತಾಂತರವಾಗಿದೆ.

ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಸ್ವತಂತ್ರ ಫಲಿತಾಂಶಗಳು

ಸಂಸ್ಥೆಯ ಈ ಧನಾತ್ಮಕ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಸಿಎಂಡಿ ಕೆ.ವಿ.ಪ್ರದೀಪ್ ಅವರು, 2023ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ ನಮ್ಮ ಸ್ವತಂತ್ರ ಮತ್ತು ಏಕೀಕೃತ ಆದಾಯ ಮತ್ತು ಲಾಭದಾಯಕತೆ ಎರಡರಲ್ಲೂ ಬಲವಾದ ಬೆಳವಣಿಗೆಯನ್ನು ವರದಿ ಮಾಡಲು ನಾವು ಸಂತೋಷಪಡುತ್ತೇವೆ. ಪೂರೈಕೆ ಸರಪಳಿ ಮತ್ತು ಇತರ ಸ್ಥೂಲ ಸವಾಲುಗಳು ಮುಂದುವರಿದಿದ್ದರೂ, ನಮ್ಮ ಗಮನವು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ನಮ್ಮ ತಂತ್ರಜ್ಞಾನ ಸಾಮರ್ಥ್ಯಗಳನ್ನು ಹೆಚ್ಚಿಸುವುದು. ಇದು ಎಲೆಕ್ಟ್ರಿಕ್ ಬಸ್ ವಿಭಾಗದಲ್ಲಿ ನಮ್ಮ ನಾಯಕತ್ವದ ಸ್ಥಾನವನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ | Adani Group : ಮ್ಯಾನ್ಮಾರ್‌ ಬಂದರನ್ನು ಭಾರಿ ಡಿಸ್ಕೌಂಟ್‌ನಲ್ಲಿ ಮಾರಿದ ಅದಾನಿ ಗ್ರೂಪ್‌, ಕಾರಣವೇನು?

ದೇಶದ ಸ್ವಚ್ಛ ಚಲನಶೀಲತೆಯ ಕಾರ್ಯಸೂಚಿಗೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ ಮತ್ತು ಮುಂಬರುವ ವರ್ಷಗಳಲ್ಲಿ ಬಲವಾದ ಬೆಳವಣಿಗೆಯ ಪಥವನ್ನು ಎದುರು ನೋಡುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Exit mobile version