ಹೊಸದಿಲ್ಲಿ: ಪೇಟಿಎಂನ ಸಿಬ್ಬಂದಿಗೆ 220 ಕೋಟಿ ರೂ. ಮೌಲ್ಯದ ಷೇರುಗಳ ಖರೀದಿ ಆಯ್ಕೆಯನ್ನು (ಇಎಸ್‌ಒಪಿ) ಕಂಪನಿಯ ಮಾತೃ ಸಂಸ್ಥೆ ಒದಗಿಸಿದೆ.
ನಿಯಂತ್ರಕಕ್ಕೆ ಪೇಟಿಎಂನ ಮಾತೃ ಸಂಸ್ಥೆ ಒನ್ 97 ಕಮ್ಯುನಿಕೇಶನ್ಸ್ ಈ ಸಂಬಂಧ ಸಲ್ಲಿಸಿರುವ ವಿವರದಲ್ಲಿ, ಷೇರುಗಳ ಆಯ್ಕೆಯನ್ನು ಅರ್ಹ ಉದ್ಯೋಗಿಗಳಿಗೆ ನೀಡಲಾಗಿದೆ ಎಂದು ತಿಳಿಸಿದೆ. ಇದರ ಮೌಲ್ಯ 220 ಕೋಟಿ ರೂ.ಗಳಾಗಿದೆ.
ಏನಿದು ಇಎಸ್‌ಒಪಿ?
ಉದ್ಯೋಗಿಗಳ ಷೇರು ಖರೀದಿ ಆಯ್ಕೆ (Employee stock ownership plan) ಎಂದರೆ ಉದ್ಯೋಗಿಗಳಿಗೆ ಕಂಪನಿಯ ಷೇರುಗಳನ್ನು ಹೊಂದುವ ಆಯ್ಕೆಯನ್ನು ನೀಡುವುದು. ಉದ್ಯೋಗಿಗಳಿಗೆ ವೇತನದ ಹೊರತಾಗಿ ಕಂಪನಿಗಳು ತಮ್ಮ ಷೇರುಗಳನ್ನೂ ನೀಡುವ ಅವಕಾಶ ಇಎಸ್‌ಒಪಿಯಲ್ಲಿ ಇರುತ್ತದೆ.