Site icon Vistara News

PF Balance Check: ಬಡ್ಡಿ ಬಂದಿದೆಯೋ ಇಲ್ಲವೋ… ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

PF Balance Check

ನವದೆಹಲಿ: ನೌಕರರ ಭವಿಷ್ಯ ನಿಧಿ (EPF) ಹೊಂದಿರುವ ಉದ್ಯೋಗಿಗಳಿಗೆ ಇನ್ನು ಕೆಲವೇ ದಿನಗಳಲ್ಲಿ 2023-2024ರ ಬಡ್ಡಿ ಹಣ (interest money) ಖಾತೆಗೆ ಬೀಳಲಿದೆ. ಹೀಗಾಗಿ ಈಗಾಗಲೇ ಇಪಿಎಫ್‌ಒ ಹೊಂದಿರುವ ಸದಸ್ಯರು ತಮ್ಮ ಖಾತೆಗೆ ಬಡ್ಡಿ ಹಣ (PF Balance Check) ಬಂದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ತೊಡಗಿದ್ದಾರೆ. ಸ್ಮಾರ್ಟ್ ಫೋನ್ (smart phone) ಕೈಯಲ್ಲಿ ಇರುವುದರಿಂದ ಈಗ ಇದು ಕಷ್ಟವೇನಲ್ಲ.

ಇಪಿಎಫ್ ಬಡ್ಡಿ ಕ್ರೆಡಿಟ್ ಸ್ಥಿತಿಯನ್ನು ಪರಿಶೀಲಿಸಲು ನಾಲ್ಕು ದಾರಿಗಳಿವೆ. ಆನ್‌ಲೈನ್ ಮೂಲಕ, ಸಂದೇಶ ಕಳುಹಿಸಿ, ಮಿಸ್ಡ್ ಕಾಲ್‌ ಅಥವಾ ಉಮಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್ ಬಡ್ಡಿ ಕ್ರೆಡಿಟ್ ಆಗಿದೆಯೇ ಇಲ್ಲವೋ ಎಂದು ನೋಡಬಹುದು.

ಆನ್ ಲೈನ್ ನಲ್ಲಿ ಪರಿಶೀಲಿಸಿ

ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು epfindia.gov.in ಗೆ ಲಾಗಿನ್ ಮಾಡಿ. ಅಲ್ಲಿ UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್‌ ಅನ್ನು ಹಾಕಿ. ಬಳಿಕ ಇ-ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ. ಒಮ್ಮೆ ನೀವು ಎಲ್ಲಾ ವಿವರಗಳನ್ನು ಫೈಲ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಸದಸ್ಯರ ಐಡಿ ತೆರೆದು ಖಾತೆಯಲ್ಲಿರುವ ಒಟ್ಟು EPF ಬ್ಯಾಲೆನ್ಸ್ ಅನ್ನು ನೋಡಬಹುದು.

ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ


ಉಮಂಗ್ ಅಪ್ಲಿಕೇಶನ್

ಉಮಂಗ್ ಅಪ್ಲಿಕೇಶನ್ ಮೂಲಕ EPF ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಲು UMANG ಅಪ್ಲಿಕೇಶನ್ ತೆರೆಯಿರಿ. EPFO ಮೇಲೆ ಕ್ಲಿಕ್ ಮಾಡಿ. ಉದ್ಯೋಗಿ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ, ಬಳಿಕ View Passbook ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ UAN ಸಂಖ್ಯೆ ಮತ್ತು ಪಾಸ್‌ವರ್ಡ್‌ ಫೀಡ್ ಮಾಡಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಅನ್ನು ಅಲ್ಲಿ ಹಾಕಿ ಇಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

ಎಸ್‌ಎಂಎಸ್

ಇಪಿಎಫ್ ಬ್ಯಾಲೆನ್ಸ್ ಅನ್ನು ಎಸ್ ಎಂಎಸ್ ಕಳುಹಿಸಿಯೂ ಪರಿಶೀಲಿಸಬಹುದು. ಮೊಬೈಲ್ ಸಂಖ್ಯೆಯನ್ನು ಹೊರತುಪಡಿಸಿ, ಯುಎಎನ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸದಸ್ಯರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಿಂದ ಎಸ್ ಎಂಎಸ್ ಕಳುಹಿಸುವ ಮೂಲಕ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ಇದಕ್ಕಾಗಿ EPFOHO UAN ಅನ್ನು 7738299899ಗೆ ಎಸ್‌ಎಂಎಸ್ ಮಾಡಬೇಕು.

ಮಿಸ್ಡ್ ಕಾಲ್

ಮಿಸ್ಡ್ ಕಾಲ್ ನೀಡಿಯೂ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದಕ್ಕಾಗಿ UAN ಪೋರ್ಟಲ್‌ನಲ್ಲಿ ನೋಂದಾಯಿಸಲಾದ EPFO ಚಂದಾದಾರರು UANನಲ್ಲಿ ನೋಂದಾಯಿಸಲಾದ ತಮ್ಮ ಮೊಬೈಲ್ ಸಂಖ್ಯೆಯಿಂದ 9966044425 ಈ ನಂಬರ್‌ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ನೆನಪಿಡಿ, ನೀವು ಕರೆ ಮಾಡುವ ಸಂಖ್ಯೆ ನಿಮ್ಮ ಪಿಎಫ್‌ ಅಕೌಂಟ್‌ನಲ್ಲಿ ದಾಖಲಾಗಿರಬೇಕು.

Exit mobile version