ನವದೆಹಲಿ: ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ತನ್ನ ಉಳಿತಾಯ ಖಾತೆಗಳ ಬಡ್ಡಿ ದರದಲ್ಲಿ ಶೇ.0.25ರಷ್ಟು ಕಡಿತಗೊಳಿಸಿದೆ.
ಜೂನ್ 1ರಿಂದ ಪರಿಷ್ಕೃತ ಬಡ್ಡಿ ದರ ಜಾರಿಯಾಗಲಿದೆ. ಹೊಸ ಬದಲಾವನೆಯ ಪ್ರಕಾರ, ಅಂಚೆ ಪೇಮೆಂಟ್ಸ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 1 ಲಕ್ಷ ರೂ. ತನಕದ ಠೇವಣಿಗೆ ಬಡ್ಡಿ ದರ ಶೇ.2.2ರಿಂದ ಶೇ. 2ಕ್ಕೆ ಕಡಿತವಾಗಿದೆ. 1 ಲಕ್ಷ ರೂ.ಗಳಿಂದ 2 ಲಕ್ಷ ರೂ. ತನಕದ ಠೇವಣಿಗೆ ಬಡ್ಡಿ ದರ ಶೇ.2.25ರಿಂದ ಶೇ.2.25ಕ್ಕೆ ಇಳಿಕೆಯಾಗಿದೆ.
ಪೇಮೆಂಟ್ಸ್ ಬ್ಯಾಂಕ್ ಈ ಹಿಂದೆ ಫೆಬ್ರವರಿಯಲ್ಲಿ ತನ್ನ ಉಳಿತಾಯ ಖಾತೆಗಳ ಬಡ್ಡಿ ದರಗಳಲ್ಲಿ ಶೇ.0.25 ರಷ್ಟು ಕಡಿತಗೊಳಿಸಿತ್ತು.