Site icon Vistara News

Financial Year End : ಮಾರ್ಚ್​​ ಕೊನೇ ಶನಿವಾರ, ಭಾನುವಾರ ಬ್ಯಾಂಕ್​ಗೆ ರಜೆ ಇಲ್ಲ; ಆರ್​ಬಿಐ ಆದೇಶ

Reserve Bank of India

ನವದೆಹಲಿ: ಬ್ಯಾಂಕುಗಳು ಸಾಮಾನ್ಯವಾಗಿ ಭಾನುವಾರ ಮತ್ತು ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರದಂದು ಕಾರ್ಯನಿರ್ವಹಿಸುವುದಿಲ್ಲ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಎಲ್ಲಾ ಏಜೆನ್ಸಿ ಬ್ಯಾಂಕುಗಳಿಗೆ ಪ್ರಸಕ್ತ ಹಣಕಾಸು ವರ್ಷದ -2023-24 (Financial Year End) ಕೊನೆಯ ದಿನದಂದು (2023-24) ಮಾರ್ಚ್ 31, 2024 ರ ಭಾನುವಾರದಂದು ತಮ್ಮ ಶಾಖೆಗಳನ್ನು ತೆರೆದಿಡುವಂತೆ ಸೂಚನೆ ನೀಡಿದೆ.

2023-24ರ ಹಣಕಾಸು ವರ್ಷದ (ಎಫ್​ಎ) ಕೊನೆಯ ದಿನ ಭಾನುವಾರದಂದು ಬರುವುದರಿಂದ ಈ ಸೂಚನೆ ಬಂದಿದೆ. ಅಧಿಕೃತ ಹೇಳಿಕೆಯಲ್ಲಿ, “2023-24ರ ಹಣಕಾಸು ವರ್ಷದಲ್ಲಿ ತೆರಿಗೆ ಪಾವತಿಗಳಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ಲೆಕ್ಕಹಾಕಲು ಮಾರ್ಚ್ 31, 2024 ರಂದು (ಭಾನುವಾರ) ಸರ್ಕಾರಿ ರಸೀದಿಗಳು ಮತ್ತು ಪಾವತಿಗಳನ್ನು ವ್ಯವಹರಿಸುವ ಬ್ಯಾಂಕುಗಳ ಎಲ್ಲಾ ಶಾಖೆಗಳನ್ನು ವಹಿವಾಟುಗಳಿಗೆ ತೆರೆದಿಡಲು ಭಾರತ ಸರ್ಕಾರ ವಿನಂತಿಸಿದೆ” ಎಂದು ಆರ್​​ಬಿಐ ಹೇಳಿದೆ.

ಆರ್ಬಿಐನ ಏಜೆನ್ಸಿ ಬ್ಯಾಂಕುಗಳಾಗಿ ಪಟ್ಟಿ ಮಾಡಲಾದ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (ಪಿಎಸ್​ಬಿ) ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಸೇರಿವೆ. ಅಂತೆಯೇ, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಲಿಮಿಟೆಡ್​ನಂತ ಖಾಸಗಿ ಬ್ಯಾಂಕುಗಳು ಏಜೆನ್ಸಿ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : Air India : ಸೇಫ್ಟಿ ಫಸ್ಟ್​​; ಏರ್ ಇಂಡಿಯಾಗೆ 80 ಲಕ್ಷ ದಂಡ

ಸಭೆಯ ಬಳಿಕ ನಿರ್ಧಾರ

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಭೆ ಸೇರಿ ಚರ್ಚೆಗಳನ್ನು ನಡೆಸಿದ್ದಾರೆ. ಈ ಚರ್ಚೆಗಳು ಮುಂದಿನ ತಿಂಗಳು ನಿಗದಿಯಾಗಿರುವ ಬಡ್ಡಿ ದರ ನಿಗದಿ ಸಮಿತಿ ಸಭೆಗೆ ಪೂರ್ವಭಾವಿ ಸಭೆಯಾಗಿದೆ.

ವಾರಾಂತ್ಯದಲ್ಲಿ ತೆರೆದಿರುವ ಬ್ಯಾಂಕ್​ಗಳ ವಿವರ ಇಲ್ಲಿದೆ

Exit mobile version