ಮುಂಬಯಿ: ಬಾಲಿವುಡ್ ನಟಿ ಅಲಿಯಾ ಭಟ್ ಮಾಲಿಕತ್ವದ ಕಿಡ್ಸ್‌ವೇರ್ ಬ್ರಾಂಡ್ ಏಡ್-ಎ-ಮಾಮಾ ಅನ್ನು ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ (Ed-a-Mamma) 300-350 ರೂ.ಗೆ ಖರೀದಿಸಿದಲು ಉದ್ದೇಶಿಸಿದೆ. ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ (Reliance Brands Ltd) ರಿಲಯನ್ಸ್ ಇಂಡಸ್ಟ್ರೀಸ್‌ನ ರಿಟೇಲ್ ಭಾಗವಾಗಿರುವ ರಿಟೇಲ್ ವೆಂಚರ್ಸ್‌ನ ಭಾಗವಾಗಿದೆ. ರಿಲಯನ್ಸ್ ಬ್ರಾಂಡ್ಸ್ ಮತ್ತು ಏಡ್ -ಎ-ಮಾಮಾ ಜತೆಗೆ ಮಾತುಕತೆ ಅಂತಿಮ ಘಟ್ಟದಲ್ಲಿದೆ. ಮುಂದಿನ ಕೆಲವು ದಿನಗಳಲ್ಲಿ ಒಪ್ಪಂದ ಅಂತಿಮವಾಗಲಿದೆ.
ಏಡ್ -ಎ- ಮಾಮಾ: ಏಡ್ -ಎ-ಮಾಮಾ ಬ್ರಾಂಡ್ ಅನ್ನು ಎಟರ್ನಲಿಯಾ ಕ್ರಿಯೇಟಿವ್ & ಮರ್ಚಂಡೈಸಿಂಗ್ ಹೊಂದಿದೆ. 2020ರಲ್ಲಿ ಏಡ್ -ಎ-ಮಾಮಾ ಆರಂಭವಾಯಿತು. ಅಫರ್ಡಬಲ್ ದರದಲ್ಲಿ ಮಕ್ಕಳ ಅವಶ್ಯಕತೆಯ ನಾನಾ ಉಡುಪುಗಳನ್ನು ಮಾರಾಟ ಮಾಡುತ್ತದೆ. ಮುಖ್ಯವಾಗಿ ಆನ್‌ಲೈನ್ ಬ್ರಾಂಡ್ ಆಗಿದ್ದರೂ, ದೊಡ್ಡ ರಿಟೇಲ್ ಸರಣಿಗಳ ಮೂಲಕ ಮಾರಾಟವಾಗುತ್ತದೆ.
ರಿಲಯನ್ಸ್‌ನಿಂದ ಖರೀದಿ ಸಂಭವ: ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ ಮತ್ತು ಏಡ್ -ಎ- ಮಾಮಾ ನಡುವೆ ಮುಂದಿನ 7-10 ದಿನಗಳಲ್ಲಿ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ಇದರಿಂದ ರಿಲಯನ್ಸ್‌ಗೆ ಕಿಡ್ಸ್‌ವೇರ್ ವಲಯದಲ್ಲಿ ಮಾರುಕಟ್ಟೆ ವಿಸ್ತರಿಸಲು ಹಾದಿ ಸುಗಮವಾಗಿದೆ. ವರದಿಗಳ ಪ್ರಕಾರ ಡೀಲ್ 300-350 ಕೋಟಿ ರೂ.ಗೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ದಿಗ್ಗಜರ ನೇತೃತ್ವದಲ್ಲಿ ಗುರು ಪೂರ್ಣಿಮೆ
ರಿಲಯನ್ಸ್ ಬ್ರಾಂಡ್ಸ್ 2007ರಲ್ಲಿ ಸ್ಥಾಪನೆಯಾಗಿದೆ. ರಿಲಯನ್ಸ್ ಬ್ರಾಂಡ್ಸ್ 50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಜತೆಗೆ ಸಹಭಾಗಿತ್ವವನ್ನು ಹೊಂದಿದೆ. ಭಾರತದಲ್ಲಿ 2,000 ಸ್ಟೋರ್‌ಗಳನ್ನು ಒಳಗೊಂಡಿದೆ. ಅರ್ಮಾನಿ ಎಕ್ಸ್‌ಚೇಂಜ್, ಬಾಲಿ, ಜಿಎಎಸ್, ಜಿಮ್ಮಿ ಚೂ, ಕಾಟೆ ಸ್ಪೇಡ್, ಮಾರ್ಕ್ಸ್ &ಸ್ಪೆನ್ಸರ್ ಮುಂತಾದ ಬ್ರಾಂಡ್‌ಗಳ ಜತೆಗೆ ಸಹಭಾಗಿತ್ವವನ್ನು ಹೊಂದಿದೆ. ನಟಿ ಆಲಿಯಾ ಭಟ್ ಅವರು ತಮ್ಮ ಮುಂಬರುವ ಸಿನಿಮಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಬಾಲಿವುಡ್‌ಗೆ ಕೂಡ ಪದಾರ್ಪಣೆ ಮಾಡಲಿದ್ದಾರೆ.