Site icon Vistara News

Reliance Jio: ಜಿಯೋದಲ್ಲಿ ಇನ್ನು 800ಕ್ಕೂ ಹೆಚ್ಚು ಚಾನೆಲ್, 13 ಒಟಿಟಿ ಆ್ಯಪ್‌‌ಗಳು! ಪಡೆಯೋದು ಹೇಗೆ?

Jio Fiber

ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ (telecom operator ) ಆಗಿರುವ ರಿಲಯನ್ಸ್ ಜಿಯೋ (Reliance Jio) 2016ಲ್ಲಿ ಪ್ರಾರಂಭವಾದಾಗಿನಿಂದ ತನ್ನ ವ್ಯವಹಾರಗಳನ್ನು ವಿಸ್ತರಿಸುತ್ತಲೇ ಬಂದಿದೆ. ಇದೀಗ ಜಿಯೋ ಫೈಬರ್ (jio fiber) ಮತ್ತು ಜಿಯೋ ಏರ್ ಫೈಬರ್ (jio air fiber) ಮೂಲಕ ತನ್ನ ಫೈಬರ್ ಸೇವೆಗಳ ಸಂಪರ್ಕವನ್ನು ವಿಸ್ತರಿಸುತ್ತಿದೆ.

ಉದ್ಯಮಿ ಮುಕೇಶ್ ಅಂಬಾನಿ (mukesh ambani) ಒಡೆತನದ ಕಂಪೆನಿಯು ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ (jio tv+ application) ಅನ್ನು ಪರಿಚಯಿಸಿದೆ. ಇದರ ಮೂಲಕ ಒಂದೇ ಜಿಯೋ ಏರ್ ಫೈಬರ್ ಸಂಪರ್ಕದೊಂದಿಗೆ ಎರಡು ಟಿವಿಗಳನ್ನು ಸಂಪರ್ಕಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಈ ಕೊಡುಗೆಯು 10ಕ್ಕಿಂತಲೂ ಹೆಚ್ಚು ಭಾಷೆಗಳು ಮತ್ತು 20ಕ್ಕಿಂತಲೂ ಹೆಚ್ಚು ಪ್ರಕಾರಗಳಲ್ಲಿ 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳನ್ನು ಒದಗಿಸುತ್ತದೆ. ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ ಈಗ ಎಲ್ಲಾ ಪ್ರಮುಖ ಸ್ಮಾರ್ಟ್ ಟಿವಿ ಒಎಸ್‌‌ನಲ್ಲಿ ಉಚಿತ ಡೌನ್‌ಲೋಡ್‌ಗಾಗಿ ಲಭ್ಯವಿದೆ.

ಇತ್ತೀಚಿನ ಕೊಡುಗೆಯ ವೈಶಿಷ್ಟ್ಯದಲ್ಲಿ ಏಕ ಸೈನ್ ಆನ್ ಅನ್ನು ಒಳಗೊಂಡಿವೆ. ಅಂದರೆ ಒಮ್ಮೆ ಸೈನ್ ಇನ್ ಮಾಡಿ ಮತ್ತು ಸಂಪೂರ್ಣ ಜಿಯೋ ಟಿವಿ ಪ್ಲಸ್ ವಿಷಯದ ಕ್ಯಾಟಲಾಗ್ ಅನ್ನು ಪ್ರವೇಶಿಸಬಹುದು. ಸ್ಮಾರ್ಟ್ ಟಿವಿ ರಿಮೋಟ್ ನಲ್ಲಿ ಎಲ್ಲಾ ಜಿಯೋ ಟಿವಿ ಪ್ಲಸ್ ವಿಷಯ ಮತ್ತು ವೈಶಿಷ್ಟ್ಯಗಳು ಲಭ್ಯವಿದೆ.

ಸ್ಮಾರ್ಟ್ ಫಿಲ್ಟರ್ ನಲ್ಲಿ ಭಾಷೆ, ವರ್ಗ ಅಥವಾ ಚಾನೆಲ್ ಸಂಖ್ಯೆಯನ್ನು ಸರಳವಾಗಿ ಕೀ ಮೂಲಕ ಹುಡುಕಬಹುದು. ಸ್ಮಾರ್ಟ್ ಆಧುನಿಕ ಮಾರ್ಗದರ್ಶಿ ಮೂಲಕ 800ಕ್ಕೂ ಅಧಿಕ ಚಾನಲ್‌ಗಳನ್ನು ಬಹಳ ಸುಲಭವಾಗಿ ಅನ್ವೇಷಿಸಬಹುದು. ಬಳಸಲು ಸುಲಭವಾದ ಸ್ಮಾರ್ಟ್ ಫಿಲ್ಟರ್‌ಗಳೊಂದಿಗೆ ಪ್ರೋಗ್ರಾಂ ವೇಳಾಪಟ್ಟಿ ಮಾಡಬಹುದು.

ಪ್ಲೇಬ್ಯಾಕ್ ಮೂಲಕ ವೇಗವನ್ನು ನಿಯಂತ್ರಿಸಿ, ಕ್ಯಾಚ್-ಅಪ್ ಟಿವಿಯಲ್ಲಿ ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ವೈಯಕ್ತಿಕ ಶಿಫಾರಸು, ಮಕ್ಕಳ ಸುರಕ್ಷಿತ ವಿಭಾಗ ಕೂಡ ಇದರಲ್ಲಿ ಲಭ್ಯವಿದೆ.


13 ಒಟಿಟಿ ಅಪ್ಲಿಕೇಶನ್‌ಗಳು

ಬಳಕೆದಾರರು ಚಾನೆಲ್‌ಗಳು ಮತ್ತು ಒಟಿಟಿ ಅಪ್ಲಿಕೇಶನ್‌ಗಳನ್ನು ಸಹ ಪಡೆಯಬಹುದು. ಸಾಮಾನ್ಯ ಮನರಂಜನೆ, ಸುದ್ದಿ, ಕ್ರೀಡೆ, ಸಂಗೀತ, ಮಕ್ಕಳು, ವ್ಯಾಪಾರ ಮತ್ತು ಭಕ್ತಿ ಸೇರಿದಂತೆ 800ಕ್ಕೂ ಡಿಜಿಟಲ್ ಟಿವಿ ಚಾನೆಲ್‌ಗಳು ಇದರಲ್ಲಿ ಲಭ್ಯವಾಗಲಿದೆ. ಜೊತೆಗೆ ಬಳಕೆದಾರರು ಆನಂದಿಸಬಹುದಾದ 13 ಒಟಿಟಿ ಅಪ್ಲಿಕೇಶನ್‌ಗಳಿವೆ.

ಪಡೆಯುವುದು ಹೇಗೆ?

ಜಿಯೋ ಟಿವಿ ಪ್ಲಸ್ ಅನ್ನು ಪಡೆಯಲು ಬಳಕೆದಾರರು ಆಂಡ್ರಾಯ್ಡ್ ಟಿವಿ, ಆಪಲ್ ಟಿವಿ ಅಥವಾ ಅಮೆಜಾನ್ ಫೈರ್ ಟಿವಿ ಸ್ಟಿಕ್ ನ ಆಪ್ ಸ್ಟೋರ್‌ಗಳಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್, ಹಾಟ್ ಸ್ಟಾರ್ , ಝೀ5, ಸೋನಿ ಲೈವ್ ಮತ್ತು ಸನ್ ನೆಕ್ಸ್ಟ್ ಅಪ್ಲಿಕೇಶನ್ ಇದರಲ್ಲಿ ಲಭ್ಯವಾಗಲಿದೆ.

ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಬಳಕೆದಾರರು ಜಿಯೋ ಫೈಬರ್, ಜಿಯೋ ಏರ್ ಫೈಬರ್ ನೊಂದಿಗೆ ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬಹುದು. ಒಟಿಪಿ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅನಂತರ ಬಳಕೆದಾರರು ಜಿಯೋ ಟಿವಿ ಪ್ಲಸ್ ಅಪ್ಲಿಕೇಶನ್ ಅನ್ನು ಆನಂದಿಸಬಹುದು.

ಇದನ್ನೂ ಓದಿ: Reliance Jio: ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದೇ ಸಂಪರ್ಕದಲ್ಲಿ ನೋಡಿ ಎರಡು ಟಿವಿ!

ಯೋಜನೆಗಳು

ಜಿಯೋ ಏರ್ ಫೈಬರ್ ಪೋಸ್ಟ್ ಪೇಯ್ಡ್ 599 ರೂ., 899 ರೂ. ಮತ್ತು ಹೆಚ್ಚು, ಜಿಯೋ ಫೈಬರ್ ಪ್ರಿಪೇಯ್ಡ್ 999 ಮತ್ತು ಹೆಚ್ಚಿನ ದರದಲ್ಲಿ ಲಭ್ಯವಿದೆ.

Exit mobile version