ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಎಲ್ಲ ಫ್ಲ್ಯಾಟ್‌ಗಳ ಮಾಲೀಕರಿಗೆ ಅವರ ಫ್ಲ್ಯಾಟ್ ಅಥವಾ ಅಪಾರ್ಟ್ ಮೆಂಟ್ ಇರುವ ಭೂಮಿಯ ಮೇಲಿನ ಹಕ್ಕು ಇನ್ನೂ ವರ್ಗಾವಣೆಯಾಗಿಲ್ಲ. ಕರ್ನಾಟಕದಲ್ಲಿ ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯೇ (Rera Act) ಇನ್ನೂ ಪ್ರಕಟವಾಗಿಲ್ಲ. ಒಕ್ಯುಪೆನ್ಸಿ ಸರ್ಟಿಫಿಕೇಟ್ ( Occupancy certificate) ವಿತರಿಸಿದರೆ ಪ್ರಾಜೆಕ್ಟ್ ಕಂಪ್ಲೀಟ್ ಆಯಿತು ಎನ್ನುವ ತಪ್ಪು ಮಾಹಿತಿಯನ್ನು ರೇರಾ ಪೋರ್ಟಲ್‌ನಲ್ಲಿ ನೀಡಲಾಗಿದೆ ಎಂದು ಕರ್ನಾಟಕ ಮನೆ ಗ್ರಾಹಕರ ವೇದಿಕೆಯ ಸಂಚಾಲಕ ಧನಂಜಯ್ ಪದ್ಮನಾಭಾಚಾರ್ ಆರೋಪಿಸಿದ್ದಾರೆ.
ವಿಸ್ತಾರ ಬಿಸಿನೆಸ್ & ಪ್ರಾಪರ್ಟಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಯಾವುದೇ ಅಪಾರ್ಟ್ ಮೆಂಟ್ ಅಸೋಸಿಯೇಶನ್‌ಗೆ ಭೂಮಿಯ ಹಕ್ಕು ವರ್ಗಾವಣೆಯಾಗಿಲ್ಲ. ಕರ್ನಾಟಕ ಮನೆ ಗ್ರಾಹಕರ ವೇದಿಕೆಯ ಅಡಿಯಲ್ಲಿ ಐನೂರು ಅಪಾರ್ಟ್‌ಮೆಂಟ್‌ಗಳು ಇವೆ. ಯಾವುದರಲ್ಲೂ ಮನೆಗಳ ಗ್ರಾಹಕರಿಗೆ ಲ್ಯಾಂಡ್ ಟ್ರಾನ್ಸ್ ಫರ್ ಆಗಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಮಾರ್ಗಸೂಚಿ ಪ್ರಕಟಿಸಬೇಕು ಎಂದು ಧನಂಜಯ್ ಪದ್ಮನಾಭಾಚಾರ್ ವಿವರಿಸಿದ್ದಾರೆ.
ಮಾರ್ಗಸೂಚಿಯನ್ನು ಪ್ರಕಟಿಸಿದ ಬಳಿಕ ಲ್ಯಾಂಡ್ ಟ್ರಾನ್ಸ್‌ಫರ್‌ಗೆ ಸಂಬಂಧಿಸಿ ರೇರಾದಲ್ಲಿ ಒಂದು ಸಕ್ಷಮ ಪ್ರಾಧಿಕಾರವನ್ನು ವ್ಯವಸ್ಥೆಗೊಳಿಸಬೇಕು. ಆಗ ಮನೆ ಮಾಲೀಕರು, ಬಿಲ್ಡರ್‌ಗಳು ಲ್ಯಾಂಡ್ ಟ್ರಾನ್ಸ್‌ಫರ್ ಪ್ರಕ್ರಿಯೆ ಕೈಗೊಳ್ಳಬಹುದು. ಅಸೋಸಿಯೇಶನ್ ನೋಂದಣಿಯಾಗಿದೆಯೇ ಎಂಬುದನ್ನು ಖಾತರಿಪಡಿಸುವ ರಿಜಿಸ್ಟ್ರೇಶನ್ ಸರ್ಟಿಫಿಕೇಟ್, ಬಿಲ್ಡರ್ಸ್ ಮತ್ತು ಅಸೋಸಿಯೇಶನ್ ನಡುವೆ ಲ್ಯಾಂಡ್ ಟ್ರಾನ್ಸ್ ಫರ್ ಆಗಿರುವುದಕ್ಕೆ ದಾಖಲೆ, ಇಸಿ ದಾಖಲೆ, ಖಾತಾ ಟ್ರಾನ್ಸ್ ಫರ್ ಆಗಿರುವ ದಾಖಲೆಗಳು ಅಗತ್ಯ. ಆಗ ಪ್ರಾಜೆಕ್ಟ್ ಸಂಪೂರ್ಣವಾಗಿದೆ ಎಂದು ರೇರಾ ಹೇಳಬಹುದು. ಕೇವಲ ಒಸಿ ವಿತರಿಸಿದರೆ ಸಾಕಾಗುವುದಿಲ್ಲ ಎನ್ನುತ್ತಾರೆ ಧನಂಜಯ್ ಪದ್ಮನಾಭಾಚಾರ್.
ರಿಯಾಲ್ಟಿ ಹೂಡಿಕೆ: ನಿಮಗೆ ರಿಯಲ್ ಎಸ್ಟೇಟ್‌ನಲ್ಲಿ ಇನ್ವೆಸ್ಟ್ ಮಾಡಬೇಕು ಅಂತ ಅನ್ನಿಸುತ್ತಿದ್ದರೂ, ಅದಕ್ಕೆ ಬೇಕಾಗುವ ಲಕ್ಷಾಂತರ ಅಥವಾ ಕೋಟಿಗಟ್ಟಲೆ ರೂ. ಹಣ ಇಲ್ಲ ಎಂದು ಆಲೋಚಿಸುತ್ತಿದ್ದೀರಾ. ಹಾಗಾದರೆ ಚಿಂತೆ ಮಾಡಬೇಡಿ.
ನೀವು ಕೇವಲ 500 ರೂ.ಗಳಿಂದಲೂ ನೀವು ರಿಯಲ್ ಎಸ್ಟೇಟ್‌ನಲ್ಲಿ ಇನ್ವೆಸ್ಟ್ ಮಾಡಬಹುದು. ಇದಕ್ಕೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ ಅಥವಾ ಆರ್ ಇಐಟಿಗಳಲ್ಲಿ ಹೂಡಿಕೆಯನ್ನು ಆರಂಭಿಸಬಹುದು. ಏನಿದು ಆರ್‌ಇಐಟಿ ಎನ್ನುತ್ತೀರಾ? ಭಾರತದಲ್ಲಿ ಈ ಪರಿಕಲ್ಪನೆ ಹೊಸತಾದರೂ, ರಿಯಾಲ್ಟಿಯಲ್ಲಿ ಹೂಡಿಕೆ ಆರಂಭಿಸಲು ಉತ್ತಮ ಸಾಧನವಾಗಿದೆ.
ಇದನ್ನೂ ಓದಿ: ITR filing online for AY 2023-24 : ವೇತನದಾರರಿಗೆ ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆಗೆ ಕಂಪ್ಲೀಟ್ ಗೈಡ್
ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು ರಿಯಲ್ ಎಸ್ಟೇಟ್ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತವೆ. ಅಪಾರ್ಟ್‌ಮೆಂಟ್ ಬಿಲ್ಡಿಂಗ್, ಸೆಲ್ ಟವರ್, ಡೇಟಾ ಸೆಂಟರ್, ಹೋಟೆಲ್, ಆಸ್ಪತ್ತೆ, ರಿಟೇಲ್ ಸೆಂಟರ್, ವೇರ್ ಹೌಸ್ ಇತ್ಯಾದಿ ಪ್ರಾಪರ್ಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಆರ್‌ಇಐಟಿಗಳು ಸ್ಟಾಕ್ ಮಾರ್ಕೆಟ್‌ನಲ್ಲಿ ನೋಂದಣಿಯಾಗಿರುತ್ತವೆ. ದೇಶದಲ್ಲಿ ಎಂಬಸಿ ಆಫೀಸ್ ಪಾರ್ಕ್ಸ್ ಆರ್‌ಇಐಟಿ, ಮೈಂಡ್ ಸ್ಪೇಸ್ ಬಿಸಿನೆಸ್ ಪಾರ್ಕ್ಸ್ ಆರ್‌ಐಇಟಿ ಇದೆ.
ಈ ಆರ್‌ಇಐಟಿಗಳಲ್ಲಿ ಜನರು ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಸಣ್ಣ ಮೊತ್ತದಲ್ಲಿ ಕೂಡ ಹೂಡಿಕೆ ಆರಂಭಿಸಬಹುದು. ಈ ವ್ಯವಹಾರದಲ್ಲಿ ಗಳಿಸಿದ ಆದಾಯವನ್ನು ಷೇರುದಾರರಿಗೆ ಆರ್‌ಇಐಟಿಗಳು ವಿತರಿಸುತ್ತವೆ. ನಿಮ್ಮ ಹೂಡಿಕೆಯನ್ನು ವೈವಿಧ್ಯಗೊಳಿಸಲು ಇದು ಸಹಾಯಕ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ