ಭಾರತದ ಅತ್ಯಂತ ಶ್ರೀಮಂತ ಕುಟುಂಬ (Richest Indian Family) ಎಂದೇ ಗುರುತಿಸಲ್ಪಟ್ಟಿರುವ ಅಂಬಾನಿ ಕುಟುಂಬದ (Ambani Family) ಸಂಪತ್ತು ಭಾರತದ ಜಿಡಿಪಿಯ (GDP of India) ಶೇ. 10ರಷ್ಟಿದೆ. ಅಂಬಾನಿ ಕುಟುಂಬವು ಭಾರತದ ಉದ್ಯಮಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಒಟ್ಟು 25,75,000 ಕೋಟಿ ಮೌಲ್ಯದ ಸಂಪತ್ತನ್ನು ಹೊಂದಿದೆ.
ಬಾರ್ಕ್ಲೇಸ್-ಹುರುನ್ ಇಂಡಿಯಾ ಸಮೀಕ್ಷೆಯಲ್ಲಿ (Barclays-Hurun India report) ನೀಡಿರುವ ಶ್ರೇಯಾಂಕಗಳ ಪ್ರಕಾರ ಇದು 2024ರ ಮಾರ್ಚ್ 20ರ ಕಂಪೆನಿಯ ಮೌಲ್ಯಮಾಪನಗಳನ್ನು ಆಧರಿಸಿವೆ. ಇದು ಖಾಸಗಿ ಹೂಡಿಕೆಗಳು ಮತ್ತು ಇತರ ಆಸ್ತಿಗಳನ್ನು ಹೊರತುಪಡಿಸಿದೆ.
ಅಂಬಾನಿಯ ಅನಂತರ ಬಜಾಜ್ ಕುಟುಂಬವು 7,13,000 ಕೋಟಿ ಮೌಲ್ಯದ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ನಿರಜ್ ಬಜಾಜ್ ಅವರ ಕುಟುಂಬದ ಮುಖ್ಯಸ್ಥರಾಗಿದ್ದಾರೆ.
ಬಿರ್ಲಾ ಕುಟುಂಬ 5.39 ಲಕ್ಷ ಕೋಟಿ ಸಂಪತ್ತು ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ದೇಶದ ಪ್ರಮುಖ ಈ ಮೂರು ಕುಟುಂಬ ವ್ಯವಹಾರಗಳ 460 ಶತಕೋಟಿ ಡಾಲರ್ ಆಗಿದ್ದು, ಇದು ಸಿಂಗಾಪುರದ ಜಿಡಿಪಿಗೆ ಸಮನಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಈ ಪಟ್ಟಿಯಲ್ಲಿ ಸಜ್ಜನ್ ಜಿಂದಾಲ್ ನೇತೃತ್ವದ ಕುಟುಂಬವು 4.71 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ನಾಡಾರ್ ಕುಟುಂಬವು 4.30 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದೆ. ನಾಡಾರ್ ಕುಟುಂಬದ ರೋಶನಿ ನಾಡರ್ ಮಲ್ಹೋತ್ರಾ ಅವರು ಟಾಪ್ 10 ಕುಟುಂಬದ ವ್ಯವಹಾರಗಳ ಪಟ್ಟಿಯಲ್ಲಿ ಏಕೈಕ ಮಹಿಳೆಯಾಗಿದ್ದಾರೆ.
ಮೊದಲ ತಲೆಮಾರಿನ ಕುಟುಂಬ
ಅದಾನಿ ಕುಟುಂಬವು 15,44,000 ಕೋಟಿ ಮೌಲ್ಯದೊಂದಿಗೆ ಅತ್ಯಂತ ಮೌಲ್ಯಯುತವಾದ ಮೊದಲ ತಲೆಮಾರಿನ ಕುಟುಂಬ ವ್ಯವಹಾರವಾಗಿ ಹೊರಹೊಮ್ಮಿದೆ. ಅನಂತರದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕರಾದ ಪೂನಾವಾಲಾ ಕುಟುಂಬವು 2,37,000 ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. 91,200 ಕೋಟಿ ರೂ. ಮೌಲ್ಯದ ಡಿವಿ ಕುಟುಂಬ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Mukesh Ambani: ಮುಕೇಶ್ ಅಂಬಾನಿ ಮನೆಯ ವಿದ್ಯುತ್ ಬಿಲ್ ಎಷ್ಟಿರಬಹುದು ಊಹಿಸಿ!
ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ಮುಖ್ಯ ಸಂಶೋಧಕ ಅನಾಸ್ ರಹಮಾನ್ ಜುನೈದ್ ಈ ಕುರಿತು ಪ್ರತಿಕ್ರಿಯಿಸಿ, ಕೈಗಾರಿಕಾ ಉತ್ಪನ್ನಗಳ ವಲಯದಲ್ಲಿ 28 ಕಂಪೆನಿಗಳು 4,58,700 ಕೋಟಿ ರೂ. ಮತ್ತು ಆಟೋಮೊಬೈಲ್ ವಲಯದ 23 ಕಂಪೆನಿಗಳು ಮತ್ತು ಫಾರ್ಮಾಸ್ಯುಟಿಕಲ್ಸ್ ವಲಯದ 22 ಕಂಪೆನಿಗಳು 1,876,200 ಕೋಟಿ ರೂ. ಮೌಲ್ಯದ್ದಾಗಿವೆ. ಈ ವ್ಯವಹಾರಗಳು ಭಾರತದ ಜಾಗತಿಕ ಸ್ಪರ್ಧಾತ್ಮಕತೆ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಲ್ಲಿ ಪ್ರಮುಖವಾಗಿವೆ. ಈ ಕುಟುಂಬದ ವ್ಯವಹಾರಗಳ ಗಮನಾರ್ಹವಾದ ಉದ್ಯಮ ವೈವಿಧ್ಯತೆಯು ಭಾರತದಲ್ಲಿ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ನಿರ್ವಹಿಸುವಲ್ಲಿ ಮತ್ತು ಮುನ್ನಡೆಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ.
ಏಷ್ಯಾ ಪೆಸಿಫಿಕ್‌ನ ಬಾರ್ಕ್ಲೇಸ್ ಖಾಸಗಿ ಬ್ಯಾಂಕ್ ಮುಖ್ಯಸ್ಥ ನಿತಿನ್ ಸಿಂಗ್ ಮಾತನಾಡಿ, ಭಾರತವು ಸಂಕೀರ್ಣ ದೇಶವಾಗಿದೆ. ಇದು ವಿವಿಧ ರಾಜ್ಯಗಳು ಮತ್ತು ವಿವಿಧ ವಸ್ತುಗಳಿಂದ ಮಾಡಲ್ಪಟ್ಟಿದೆ. ಈ ಸಂಕೀರ್ಣ ಪರಿಸರದಲ್ಲಿ ಹೇಗೆ ಕೆಲಸ ಮಾಡಬೇಕೆಂದು ತಿಳಿದಿರುವ ಜನರಿಗೆ ಇದು ಪ್ರಯೋಜನವನ್ನು ನೀಡುತ್ತದೆ. ಬಹು ಪೀಳಿಗೆಯ ವ್ಯವಹಾರಗಳು ಹಲವಾರು ವರ್ಷಗಳ ಬಳಿಕ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.