Site icon Vistara News

Tata Group : ಟಾಟಾ ಸಮೂಹದಿಂದ ಸೂಪರ್‌ ಆ್ಯಪ್ ನ್ಯೂ ಅಭಿವೃದ್ಧಿಗೆ 16,400 ಕೋಟಿ ರೂ. ಹೂಡಿಕೆ

TATA Neu

#image_title

ಮುಂಬಯಿ: ಟಾಟಾ ಗ್ರೂಪ್‌ ಸೂಪರ್‌ ಆ್ಯಪ್ ನ್ಯೂ ( TaTa Neu ) ಅನ್ನು ಅಭಿವೃದ್ಧಿಪಡಿಸಲು 2 ಶತಕೋಟಿ ಡಾಲರ್‌ ( ಅಂದಾಜು 16,400 ಕೋಟಿ ರೂ.) ಹೂಡಿಕೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಟಾಟಾ ಡಿಜಿಟಲ್‌ ಎರಡು ವರ್ಷಗಳ ಕಾಲ ಹೆಚ್ಚುವರಿ ಹೂಡಿಕೆಯನ್ನು ಪಡೆಯಲಿದೆ. ಇದರಿಂದ ಸೂಪರ್‌ ಆ್ಯಪ್ ಟಾಟಾ ನ್ಯೂ ಅನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ. ಹೊಸ ಡಿಜಿಟಲ್‌ ಆಫರ್‌ಗಳನ್ನು ನೀಡಲು, ತಾಂತ್ರಿಕ ಅಡಚಣೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಈ ಆ್ಯಪ್ ಬಿಡುಗಡೆಯಾಗಿತ್ತು.

ಸೂಪರ್‌ ಆ್ಯಪ್‌ನ ಮೌಲ್ಯವನ್ನು ವೃದ್ಧಿಸಲು ದಾರಿಗಳನ್ನು ಕಂಡುಕೊಳ್ಳುವಂತೆ ಟಾಟಾ ಗ್ರೂಪ್‌, ಟಾಟಾ ಡಿಜಿಟಲ್‌ಗೆ ತಿಳಿಸಿದೆ. ಟಾಟಾ ನ್ಯೂ ಭಾರತದ ಮೊದಲ ಸೂಪರ್‌ ಆ್ಯಪ್ ಆಗಿದೆ. ಚೀನಾದ ಆಲಿಪೇ, ವಿಚಾಟ್‌ ಮಾದರಿಯಲ್ಲಿ ಅಭಿವೃದ್ಧಿಯಾಗುವ ಉದ್ದೇಶವನ್ನು ಹೊಂದಿದೆ. ಆದರೆ ಕಳೆದ ವರ್ಷ ಬಿಡುಗಡೆಯಾದ ಬಳಿಕ ಗ್ರಾಹಕರು ತಾಂತ್ರಿಕ ಅಡಚಣೆಗಳ ಬಗ್ಗೆ ದೂರಿದ್ದರು.

Exit mobile version