Site icon Vistara News

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

Ujjivan Small Finance Bank

ಬೆಂಗಳೂರು, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ (Ujjivan Small Finance Bank) ಜುಲೈ 1, 2024 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಸಂಜೀವ್ ನೌಟಿಯಾಲ್ ಅವರನ್ನು ತನ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಿದೆ. ಈ ನೇಮಕಕ್ಕೆ ಆರ್‌ಬಿಐ ಅನುಮೋದನೆ ನೀಡಿದೆ ಎಂದು ಬ್ಯಾಂಕ್​ನ ಪ್ರಕಟಣೆ ತಿಳಿಸಿದೆ. ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಮುಂಚಿತವಾಗಿಯೇ ಅವರು ಉಜ್ಜೀವನ್ ಬ್ಯಾಂಕ್​​ಗೆ ಸೇರುತ್ತಾರೆ ಈ ಸಮಯದಲ್ಲಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿದೆ.

ನೌಟಿಯಾಲ್ ಅವರು ಎಸ್‌ಬಿಐನ ಮಾಜಿ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದು. ಅಲ್ಲದೆ ಹಿಂದೆ ಎಸ್‌ಬಿಐ ಲೈಫ್‌ನಲ್ಲಿ ಎರಡು ವರ್ಷಗಳ ಕಾಲ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್ ವೃತ್ತಿಜೀವನದಲ್ಲಿ ಅವರಿಗೆ 36 ವರ್ಷಗಳ ಅನುಭವವಿದೆ. ನೌಟಿಯಾಲ್ ಅವರ ನೇಮಕವು ಬ್ಯಾಂಕಿನ ಮುಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆಗೆ ಒಳಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಜ್ಜೀವನ್ ಎಸ್‌ಎಫ್‌ಬಿ ಅಧ್ಯಕ್ಷರಾದ ಬಾಣಾವರ ಅನಂತರಾಮಯ್ಯ ಪ್ರಭಾಕರ್ ಮಾತನಾಡಿ “ಆರ್‌ಬಿಐ, ನೌಟಿಯಾಲ್ ಅವರ ನೇಮಕವನ್ನು ಅನುಮೋದಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ಅವರನ್ನು ಉಜ್ಜೀವನ್ ಕುಟುಂಬಕ್ಕೆ ಸ್ವಾಗತಿಸುತ್ತೇನೆ. ಅವರೊಬ್ಬ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸರ್ವತೋಮುಖ ಅನುಭವವನ್ನು ಹೊಂದಿರುವ ಮಹತ್ವದ ರೀಟೇಲ್ ಬ್ಯಾಂಕರ್. ಅವರಿಗೆ ಬ್ಯಾಂಕಿಂಗ್ ನ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಅನುಭವವಿದೆ. ಗ್ರಾಹಕರೇ ಕೇಂದ್ರವಾಗಿರುವಂತಹ, ಬಲವಾದ ಸಂಸ್ಥೆಗಳನ್ನು ಕಟ್ಟುವಲ್ಲಿ ಮತ್ತು ಪೋಷಿಸುವಲ್ಲಿ ಪರಿಣತರು. ಅವರ ಅರ್ಹತೆಗಳು ಉಜ್ಜೀವನ್ ಅನ್ನು ಮುನ್ನಡೆಸಲು ಸಹಜ ಆಯ್ಕೆಯನ್ನಾಗಿಸಿವೆ. ಈ ಪ್ರಯಾಣ, ಅವರಿಗೆ ಶುಭಕರವಾಗಲಿ ಮತ್ತು ಅತ್ಯುತ್ತಮ ಯಶಸ್ಸನ್ನು ತರಲಿ ಎಂದು ನಾನೂ ಮತ್ತು 22,000+ ’ಉಜ್ಜೀವನ್​ ಶಾಖೆಗಳು ಹಾರೈಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಅವರು ನಿರ್ಗಮಿತ ಸಿಇಒ ಇಟ್ಟೀರ ಡೇವಿಸ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಮೂಲ ಅವಧಿ ಮುಗಿಯುವ ಕೆಲವು ತಿಂಗಳುಗಳ ಮೊದಲೇ ಸೇವೆಯಿಂದ ಬಿಡುಗಡೆ ಹೊಂದಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದರು ಮತ್ತು ಮಂಡಳಿಯು ಅವರ ಆಶಯಗಳನ್ನು ಗೌರವಿಸಿದೆ.

ಇದನ್ನೂ ಓದಿ: IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

ಸಂಜೀವ್ ನೌಟಿಯಾಲ್ ಪ್ರತಿಕ್ರಿಯಿಸಿ “ಉಜ್ಜೀವನ್‌ಗೆ ಸೇರುತ್ತಿರುವುದು ನಿಜಕ್ಕೂ ಒಂದು ಗೌರವವೇ ಸರಿ. ಉಜ್ಜೀವನ್ ಒಂದು ಪ್ರಮುಖ ಸಮೂಹ ಮಾರುಕಟ್ಟೆ ಬ್ಯಾಂಕ್. ಇದು, ಪ್ರತಿಯೊಬ್ಬರಿಗೂ ಉತ್ತಮ ಜೀವನವನ್ನು ಕಟ್ಟಿಕೊಡಬೇಕೆಂಬ ಉನ್ನತವಾದ ಉದ್ದೇಶ ಹೊಂದಿದೆ. ಉಜ್ಜೀವನ್, ಎನ್‌ಬಿಎಫ್‌ಸಿ-ಎಂಎಫ್‌ಐ ನಿಂದ ಒಂದು ಅತ್ಯಂತ ಯಶಸ್ವಿ ಬ್ಯಾಂಕಾಗಿ ಪರಿವರ್ತನೆಗೊಂಡಿದೆ. ಈಗ ಅದು ಹಣಕಾಸು ಮತ್ತು ಡಿಜಿಟಲ್ ಸೇರ್ಪಡೆಯ ಹೊಸ ಗಡಿಗಳನ್ನು ದಾಟಲು ಸಿದ್ಧ. ಟೀಮ್ ಉಜ್ಜೀವನ್ ಮತ್ತು ಎಲ್ಲ ಹಿತಾಸಕ್ತರೊಂದಿಗೆ ಸೇರಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ನೌಟಿಯಾಲ್ ಅವರು ಈ ಹಿಂದೆ ಉಪ-ವ್ಯವಸ್ಥಾಪಕ ನಿರ್ದೇಶಕರಾಗಿ (ಹಣಕಾಸು ಸೇರ್ಪಡೆ ಮತ್ತು ಮೈಕ್ರೋ ಮಾರ್ಕೆಟ್ಸ್), ಎಸ್‌ಬಿಐ ಮತ್ತು ಎಸ್‌ಬಿಐ ಲೈಫ್ ಇನ್ಶೂರೆನ್ಸ್‌ ನ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಭಾರತೀಯ ಜೀವ ವಿಮಾ ನಿಗಮದ (ಎಲ್.ಐ.ಸಿ ಯ) ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಹಲವಾರು ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೌಟಿಯಾಲ್ ಅವರು ಆರ್ಟ್ಸ್ ವಿಭಾಗದಲ್ಲಿ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್‌ಗಳ ಸರ್ಟಿಫೈಡ್ ಅಸೋಸಿಯೇಟ್ ಆಗಿದ್ದಾರೆ.

Exit mobile version