Site icon Vistara News

SBI Chairman salary : ಎಸ್‌ಬಿಐ ಚೇರ್ಮನ್‌ ಸಂಬಳ ತೀರಾ ಕಡಿಮೆ ಆಯ್ತು ಎಂದ ಮೋಹನ್‌ದಾಸ್‌ ಪೈ

SBI Chairman Dinesh khara

#image_title

ಬೆಂಗಳೂರು: ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿವಿ ಮೋಹನ್‌ ದಾಸ್‌ ಪೈ ಅವರು ಎಸ್‌ಬಿಐ ಚೇರ್ಮನ್‌ ದಿನೇಶ್‌ ಖರಾ ಅವರಿಗೆ ಸರ್ಕಾರ ನೀಡುತ್ತಿರುವ ಸಂಬಳ ತೀರಾ ಕಡಿಮೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (SBI Chairman salary) ಹಾಗಾದರೆ ಅವರು ಹೀಗೆ ಹೇಳಿರುವುದೇಕೆ? ಇಲ್ಲಿದೆ ವಿವರ.

ಎಸ್‌ಬಿಐ 2022-23ರಲ್ಲಿ 50,000 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹೀಗಿದ್ದರೂ, ಬ್ಯಾಂಕ್‌ ನ ಅಧ್ಯಕ್ಷ ದಿನೇಶ್‌ ಖರಾ ಪಡೆಯುತ್ತಿರುವ ಸಂಬಳ ಕೇವಲ 37 ಲಕ್ಷ ರೂ. ಇದು ಸರಿಯಲ್ಲ, ನವ ಭಾರತದಲ್ಲಿ ಇಂಥದ್ದು ನಡೆಯಬಾರದಿತ್ತು ಎಂದು ಮೋಹನ್‌ ದಾಸ್‌ ಪೈ ಹೇಳಿದ್ದಾರೆ.

ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ (State Bank of India) ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ 16,695 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇಡೀ 2022-23ರ ಸಾಲಿನಲ್ಲಿ ದಾಖಲೆಯ 50,000 ಕೋಟಿ ರೂ. ನಿವ್ವಳ ಲಾಭ (net profit) ಗಳಿಸಿದೆ. ಈ ದಾಖಲೆ ಬರೆದ ಮೊದಲ ( SBI Profit) ಭಾರತೀಯ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2021-22ರ ಜನವರಿ-ಮಾರ್ಚ್‌ ಅವಧಿಯಲ್ಲಿ ಎಸ್‌ಬಿಐ 9114 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಸುಧಾರಣೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಲಾಭಾಂಶ ಕೂಡ ವೃದ್ಧಿಸಿದೆ ಎಂದು ಎಸ್‌ಬಿಐನ ಚೇರ್ಮನ್‌ ದಿನೇಶ್‌ ಖರಾ ಅವರು ತಿಳಿಸಿದ್ದಾರೆ.

ಎಸ್‌ಬಿಐ 1.5 ಲಕ್ಷ ಕೋಟಿ ರೂ. ಕಾರ್ಪೊರೇಟ್‌ ಸಾಲವನ್ನು ವಿತರಿಸಿದೆ. ಜನವರಿ-ಮಾರ್ಚ್‌ನಲ್ಲಿ ಕ್ರೆಡಿಟ್‌ ಗ್ರೋತ್‌ 14% ಆಗಿದೆ. ನಿವ್ವಳ ಬಡ್ಡಿ ಆದಾಯದ ಮೂಲಕ 40,393 ಕೋಟಿ ರೂ. ಗಳಿಸಿದೆ ಎಂದು ಬ್ಯಾಂಕ್‌ ತಿಳಿಸಿದೆ. ಎಸ್‌ಬಿಐನ ಅನುತ್ಪಾದಕ ಸಾಲ ಅಥವಾ ವಸೂಲಾಗದ ಸಾಲದ ಅನುಪಾತ 2.7%ಕ್ಕೆ ಇಳಿಕೆಯಾಗಿದೆ. ಇದು ದಶಕದಲ್ಲೇ ಕನಿಷ್ಠ ಎಂದು ಚೇರ್ಮನ್‌ ದಿನೇಶ್‌ ಖರಾ ತಿಳಿಸಿದ್ದಾರೆ.

ಇದನ್ನೂ ಓದಿ: EPF e-passbook : UMANG ಆ್ಯಪ್‌ನಲ್ಲಿ ನಿಮ್ಮ ಪಿಎಫ್ ಪಾಸ್‌ಬುಕ್‌ ಸುಲಭವಾಗಿ ಪರಿಶೀಲಿಸಿ

Exit mobile version