ನವದೆಹಲಿ: ಮ್ಯೂಚುವಲ್ ಫಂಡ್‌ಗಳು ಅಂತಾರಾಷ್ಟ್ರೀಯ ಯೋಜನೆಗಳಲ್ಲಿ ಹೊಸತಾಗಿ ಹೂಡಿಕೆ ಮಾಡಲು ಸೆಬಿ ( Securities and exchange board of India) ಅನುಮತಿ ನೀಡಿದೆ. ಇದಕ್ಕೆ ೭೦೦ ಕೋಟಿ ಡಾಲರ್ (೫೪,೬೦೦ ಕೋಟಿ ರೂ.) ಮಿತಿಯನ್ನೂ ವಿಧಿಸಿದೆ.
ಇದರೊಂದಿಗೆ ಹೂಡಿಕೆದಾರರಿಗೆ ಅಂತಾರಾಷ್ಟ್ರೀಯ ಯೋಜನೆಗಳಲ್ಲಿ ಹೂಡಿಕೆಗೆ ಅವಕಾಶ ಸಿಗಲಿದೆ. ಹೀಗಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿತಿಯ ಒಳಗೆ ಮ್ಯೂಚುವಲ್ ಫಂಡ್ ಹೂಡಿಕೆ ನಡೆಯಬೇಕಾಗುತ್ತದೆ.
ಹೀಗಿದ್ದರೂ ಅಂತಾರಾಷ್ಟ್ರೀಯ ಮ್ಯೂಚುವಲ್ ಫಂಡ್‌ಗಳಲ್ಲಿ ಲಂಪ್ಸಮ್ ಹೂಡಿಕೆಗಿಂತ ಸಿಪ್ ಹೂಡಿಕೆ (SIP) ಸೂಕ್ತ ಎನ್ನುತ್ತಾರೆ ತಜ್ಞರು.
ಐಸಿಐಸಿಐ, ಎಡಿಲ್‌ವೈಸ್, ಪಿಜಿಐಎಂ ಮತ್ತು ನಿಪ್ಪೋನ್ ಅಂತಾರಾಷ್ಟ್ರೀಯ ಸ್ಕೀಮ್‌ಗಳನ್ನು ಲಂಪ್ಸಮ್ ಮತ್ತು ಸಿಪ್ ಮಾದರಿಯಲ್ಲಿ ಆರಂಭಿಸಿವೆ.