Site icon Vistara News

Security checks : ಶೀಘ್ರ ಬೆಂಗಳೂರು ಸೇರಿ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಫಟಾಫಟ್‌ ಸೆಕ್ಯುರಿಟಿ ಚೆಕ್

airport

ನವ ದೆಹಲಿ: ಶೀಘ್ರದಲ್ಲಿಯೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆ (security check) ಫಟಾಫಟ್‌ ನಡೆಯಲಿದೆ. ಅಂದರೆ ಇದಕ್ಕೆ ತಗಲುವ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ. ಅಧಿಕಾರಿಗಳು ಕಂಪ್ಯೂಟೆಡ್‌ ಟೊಮೊಗ್ರಫಿ ಟೆಕ್ನಾಲಜಿ (CTiX machines- Computed Tomography technology) ಆಧರಿತ ಸೆಕ್ಯುರಿಟಿ ಚೆಕ್‌ ವ್ಯವಸ್ಥೆಯನ್ನು ಅಳವಡಿಸಲಿದ್ದಾರೆ. ಇದರ ಪರಿಣಾಮ ತಪಾಸಣೆಗೆ ತಗಲುವ ಅವಧಿ ಇಳಿಕೆಯಾಗಲಿದೆ.

ಸಮಯ ಉಳಿತಾಯ ಆಗೋದು ಹೇಗೆ? ಕಂಪ್ಯೂಟೆಡ್‌ ಟೊಮೊಗ್ರಫಿ ಟೆಕ್ನಾಲಜಿಯ ಪರಿಣಾಮ ಪ್ರಯಾಣಿಕರು ಏರ್‌ಪೋರ್ಟ್‌ಗಳಲ್ಲಿ ಪ್ರತ್ಯೇಕ ಎಕ್ಸ್‌-ರೇ ತಪಾಸಣೆಯ ಸಲುವಾಗಿ (X-ray screening) ಎಲೆಕ್ಟ್ರಾನಿಕ್‌ ವಸ್ತುಗಳು ಮತ್ತು ದ್ರವ ಪದಾರ್ಥಗಳನ್ನು ತಮ್ಮ ಬ್ಯಾಗ್‌ಗಳಿಂದ ತೆಗೆಯಬೇಕಾದ ಅವಶ್ಯಕತೆ ಇರುವುದಿಲ್ಲ.

ಹೀಗಿದ್ದರೂ, ನಿಷೇಧಿತ ವಸ್ತುಗಳಾದ ಲೈಟರ್‌, ಕತ್ತರಿ, ಬ್ಲೇಡ್‌, ಚೂರಿ ಇತ್ಯಾದಿಗಳು ಒಂದು ವೇಳೆ ಇದ್ದರೆ ಸೆಕ್ಯುರಿಟಿ ಚೆಕ್‌ ವೇಳೆ ತಡೆಯಬಹುದು. ಈ ವಸ್ತುಗಳು ಎಕ್ಸ್‌ ರೇ ಸ್ಕ್ರೀನಿಂಗ್‌ನಲ್ಲಿ ರಿಜೆಕ್ಟ್‌ ಆಗುತ್ತವೆ. ಆಗ ಸಿಐಎಸ್‌ಎಫ್‌ ಭದ್ರತಾ ಸಿಬ್ಬಂದಿ ಅಂಥ ನಿಷೇಧಿತ ವಸ್ತುಗಳನ್ನು ಪರಿಶೀಲಿಸಿ ತೆಗೆದು ಹಾಕುತ್ತಾರೆ. ಮುಂಬಯಿ ಏರ್‌ಪೋರ್ಟ್‌ನಲ್ಲಿ ನಿತ್ಯ ಸರಾಸರಿ 60,000 ಬ್ಯಾಗ್‌ಗಳ ತಪಾಸಣೆ ವೇಳೆ ಅಂದಾಜು 7,000 ಬ್ಯಾಗ್‌ಗಳು ಈ ಕೆಟಗರಿಗೆ ಬರುತ್ತವೆ.

ಇದನ್ನೂ ಓದಿ: Air India Maharaja : ಏರ್‌ ಇಂಡಿಯಾ ರಿಬ್ರಾಂಡಿಂಗ್‌, ಮಹಾರಾಜ ನೇಪಥ್ಯಕ್ಕೆ?

ಈ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಬ್ಯೂರೊ ಆಫ್‌ ಸಿವಿಲ್‌ ಏವಿಯೇಶನ್‌ ಸೆಕ್ಯುರಿಟಿ (Bureau of Aviation Security) ಐದು ದಿನಗಳ ಏವಿಯೇಶನ್‌ ಸೆಕ್ಯುರಿಟಿ ವೀಕ್‌ ಎಂಬ ಕಾರ್ಯಕ್ರಮವನ್ನು 131 ಏರ್‌ ಪೋರ್ಟ್‌ಗಳಲ್ಲಿ ಆಯೋಜಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನದ ಸಿಟಿಕ್ಸ್‌ ಮೆಶೀನ್‌ಗಳನ್ನು (CTiX machines) ಡಿಸೆಂಬರ್‌ನಲ್ಲಿ ಹೈಪರ್‌ ಸೆನ್ಸಿಟಿವ್‌ ಏರ್‌ಪೋರ್ಟ್‌ಗಳಾದ ದಿಲ್ಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್‌, ಕೋಲ್ಕತಾ ಮತ್ತು ಚೆನ್ನೈನಲ್ಲಿ ಅಳವಡಿಸಲಾಗುವುದು. ಕಂಪ್ಯೂಟೆಡ್‌ ಟೊಮೊಗ್ರಫಿ ಟೆಕ್ನಾಲಜಿಯನ್ನು ಇದರದಲ್ಲಿ ಬಳಸಿಕೊಳ್ಳಲಾಗುವುದು. ಇದು ಪ್ರಯಾಣಿಕರ ಬ್ಯಾಗ್‌ಗಳ 3ಡಿ ಮಾದರಿಯನ್ನು ಜನರೇಟ್‌ ಮಾಡಲಿದೆ. ವಿಶ್ವಾದ್ಯಂತ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಇದನ್ನು ಈಗಾಗಲೇ ಬಳಸಲಾಗುತ್ತಿದೆ.

Exit mobile version