Site icon Vistara News

Sensex | ಸೆನ್ಸೆಕ್ಸ್‌ 215 ಅಂಕ ಇಳಿಕೆ, ನಾಳೆ ಆರ್‌ಬಿಐ ತುರ್ತು ಸಭೆ

sensex

ಮುಂಬಯಿ: ಅಮೇರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ಬಡ್ಡಿದರ ಏರಿಕೆ ‌ಕುರಿತ ಸಭೆ ಮತ್ತು ನಾಳೆ ಬೆಳಿಗ್ಗೆ ಆರ್‌ಬಿಐ ಸಮಿತಿಯ ಸಭೆಯ ಹಿನ್ನೆಲೆಯಲ್ಲಿ, ಮಾರುಕಟ್ಟೆಯಲ್ಲಿ ಲಾಭಾಂಶ ನಗದೀಕರಣಕ್ಕೆ ಹೂಡಿಕೆದಾರರು ಒತ್ತು ನೀಡಿದ್ದರಿಂದ ಷೇರುಪೇಟೆ ಇಂದು (Sensex ) ಇಳಿಮುಖವಾಗಿ ಅಂತ್ಯಕಂಡಿತು.
ನಿಫ್ಟಿ 32 ಅಂಕಗಳ ಏರಿಕೆಯೊಂದಿಗೆ 18177ರಲ್ಲಿ ಪ್ರಾರಂಭವಾದರೆ, ಸೆನ್ಸೆಕ್ಸ್ 35 ಅಂಶಗಳ ಹೆಚ್ಚಳದೊಂದಿಗೆ 61156 ರಲ್ಲಿ ಆರಂಭಗೊಂಡಿತು. ಬ್ಯಾಂಕ್ ನಿಫ್ಟಿ 183 ಅಂಕಗಳ ಏರಿಕೆಯೊಂದಿಗೆ 41472 ರಲ್ಲಿ ಶುರುವಾಯಿತು.
ಬ್ಯಾಂಕ್ ನಿಫ್ಟಿ ಆರಂಭದಲ್ಲಿ ಏರಿಕೆಯಾಗಲು ಪ್ರಯತ್ನಿಸಿತು. ಆದರೆ 41470 ರ ರೆಜಿಸ್ಟೇನ್ಸ್ ದಾಟಲಾಗದೆ 400 ಅಂಕಗಳ ಇಳಿಮುಖವಾಯಿತು. 41200 ರ ಸರ್ಪೋರ್ಟ್‌ಗಿಂತಲೂ ಕೆಳಗೆ ವಹಿವಾಟು ನಡೆದು, ದಿನದ ಅಂತ್ಯಕ್ಕೆ 142 ಅಂಕಗಳ ಇಳಿಕೆಯೊಂದಿಗೆ 41146 ರಲ್ಲಿ ಮುಕ್ತಾಯವಾಯಿತು. ನಿಫ್ಟಿ 62 ಅಂಕಗಳ ಇಳಿಮುಖದೊಂದಿಗೆ 18082 ರಲ್ಲಿ ಅಂತ್ಯಗೊಂಡಿದೆ. ನಾಳೆ ಮಹತ್ವದ ಸಭೆಯ ಪರಿಣಾಮ ನಿಫ್ಟಿ 18000 ಸರ್ಪೋಟ್ ಕಾಪಾಡಿಕೊಳ್ಳುತ್ತದಯೇ ಎಂಬುದನ್ನು ನೋಡಬೇಕು. ಒಂದು ವರ್ಷದಲ್ಲಿ ನಿಫ್ಟಿ ನಾಲ್ಕು ಬಾರಿ 18000 ಕ್ಕಿಂತ ಹೆಚ್ಚು ವಹಿವಾಟು ನಡೆಸಿದರೂ ಸಾರ್ವಕಾಲಿಕ ಏರಿಕೆಯಾದ 18604 ನ್ನು ಮೀರಿ ವಹಿವಾಟು ನಡೆಸಲು ಸಾಧ್ಯವಾಗಿಲ್ಲ. ಸೆನ್ಸೆಕ್ಸ್ 215 ಅಂಕಗಳ ಇಳಿಕೆಯೊಂದಿಗೆ 60906 ರಲ್ಲಿ ಅಂತ್ಯಗೊಂಡಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.12 ಹಾಗೂ ಮಧ್ಯಮ ಕಂಪನಿಗಳ ಸೂಚ್ಯಂಕ ಶೇ.0.22 ಇಳಿಕೆಯಾಗಿದೆ. ಫಾರ್ಮಾ, ಲೋಹ ಮತ್ತು ಮಾಧ್ಯಮ ವಲಯದ ಸೂಚ್ಯಂಕಗಳು ಏರಿಕೆಯಾದರೆ ಬ್ಯಾಂಕಿಂಗ್ , ಐಟಿ, ಆಟೋ ಮತ್ತು ರಿಯಾಲಿಟಿ ವಲಯದ ಸೂಚ್ಯಂಕಗಳು ಕುಸಿತವಾದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1436 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 1378 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.

Exit mobile version