Site icon Vistara News

Sensex | ಸೆನ್ಸೆಕ್ಸ್‌ 69 ಅಂಕ ಇಳಿಕೆ, ನಿಫ್ಟಿಗೆ 30 ಅಂಕ ನಷ್ಟ

sensex

ಮುಂಬಯಿ: ಅಮೇರಿಕಾದ ಮಾರುಕಟ್ಟೆ ಭಾರಿ ಕುಸಿತದ ಕಾರಣ ಭಾರತದ ಷೇರುಪೇಟೆ ಇಳಿಮುಖವಾಗಿ ಪ್ರಾರಂಭವಾದರೂ (Sensex) ದಿನಪೂರ್ತಿ ಏರಿಳಿತ ದಾಖಲಿಸಿ ಅಲ್ಪ ಅಂಶಗಳ ಕುಸಿತದೊಂದಿಗೆ ಅಂತ್ಯಕಂಡಿತು.
ನಿಫ್ಟಿ 114 ಅಂಕಗಳ ಇಳಿಕೆಯೊಂದಿಗೆ 17968 ರಲ್ಲಿ ಆರಂಭಗೊಂಡಿತು. ಸೆನ್ಸೆಕ್ಸ್ 395 ಅಂಶಗಳ ಕುಸಿತದೊಂದಿಗೆ 60511 ರಲ್ಲಿ ಪ್ರಾರಂಭಗೊಂಡಿತು. ಬ್ಯಾಂಕ್ ನಿಫ್ಟಿ ಸಹ 272 ಅಂಶಗಳ ಇಳಿಕೆಯೊಂದಿಗೆ 40873 ರಲ್ಲಿ ಶುರುವಾಯಿತು.
ನಿಫ್ಟಿ ಪ್ರಾರಂಭವಾದ ನಂತರ ಏರಿಕೆ ಕಂಡು 75 ನಿಮಿಷದಲ್ಲಿ 135 ಅಂಶಗಳ ಹೆಚ್ಚಳವಾಯಿತು. ಆದರೆ 18100 ರ ರೆಜಿಸ್ಟೇನ್ಸ್ ದಾಟಲಾಗದೆ ಇಳಿಮುಖವಾಯಿತು. ಇಂದು ಪೂಚ್ಯರ್ ಅಂಡ್ ಆಪ್ಷನ್ ಮಾರುಕಟ್ಟೆಯ ವಾರದ ವಾಯಿದೆ ದಿನವಾಗಿದ್ದರಿಂದ ಏರಿಳಿತ ದಾಖಲಿಸಿತು. ದಿನದ ಅಂತ್ಯಕ್ಕೆ 30 ಅಂಕಗಳ ಇಳಿಕೆಯೊಂದಿಗೆ 18052 ರಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್ 69 ಅಂಶಗಳ ಕುಸಿತವಾಗಿ 60863 ರಲ್ಲಿ ಅಂತ್ಯಗೊಂಡಿದೆ. ಆದರೆ ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ಉತ್ತಮ ವಹಿವಾಟು ನಡೆಸಿದ್ದರಿಂದ ಬ್ಯಾಂಕ್ ನಿಫ್ಟಿ 151 ಅಂಕಗಳ ಹೆಚ್ಚಳದೊಂದಿಗೆ 41298 ರಲ್ಲಿ ವಹಿವಾಟು ಪೂರ್ಣಗೊಂಡಿದೆ.
ಅಮೇರಿಕಾದ ಫೆಡರಲ್ ಬ್ಯಾಂಕ್ ನಿರೀಕ್ಷೆಯಂತೆ ಶೇ.0.75 ರಷ್ಟು ಬಡ್ಡಿದರ ಏರಿಕೆ ಮಾಡಿದೆ. ಆದರೆ ಹಣದುಬ್ಬರ ನಿಯಂತ್ರಿಸುವವರೆಗೆ ಕಠಿಣ ನಿರ್ಧಾರಗಳು ಮುಂದುವರೆಯಿತ್ತವೆ ಮತ್ತು ಇನ್ನಷ್ಟು ಬಡ್ಡಿದರವನ್ನು ಮಾಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಜೆರೋಮ್ ಪೋವೆಲ್ ಹೇಳಿಕೆ ನೀಡಿದ್ದರಿಂದ ಅಮೇರಿಕಾದ ಷೇರುಪೇಟೆ ಭಾರಿ ಕುಸಿತ ದಾಖಲಿಸಿತು.
ಇದರ ಪರಿಣಾಮ ಭಾರತದ ಷೇರುಪೇಟೆಯ ಮೇಲೆ ಭಾರಿ ಪ್ರಮಾಣದಲ್ಲಿ ಕಾಣುತ್ತಿಲ್ಲ. ದೇಶದಲ್ಲಿ ಜನ ಭಾರಿ ಪ್ರಮಾಣದಲ್ಲಿ ಮ್ಯೂಚಲ್ ಫಂಡ್ ಮೂಖಾಂತರ ಹೂಡಿಕೆ ಮಾಡುತ್ತಿರುವುದು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಸತತವಾಗಿ ಕೊಳ್ಳುತ್ತಿರುವುದರಿಂದ ಷೇರುಪೇಟೆಗೆ ಚೇತೋಹಾರಿಕೆಯಾಗಿದೆ.
ಇಂದು ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.24 ಹಾಗೂ ಮಧ್ಯಮ ಕಂಪನಿಗಳ ಸೂಚ್ಯಂಕ ಶೇ.0.37 ಏರಿಕೆಯಾಗಿದೆ. ಬ್ಯಾಂಕಿಂಗ್, ರಿಯಾಲಿಟಿ ಮತ್ತು ಎಫ್ಎಂಸಿಜಿ ಷೇರುಗಳ ಸೂಚ್ಯಂಕ ಏರಿಕೆಯಾದರೆ, ಐಟಿ, ಆಟೋ ಮತ್ತು ಇಂಧನ ಕ್ಷೇತ್ರದ ಸೂಚ್ಯಂಕ ಇಳಿಕೆಯಾಗಿವೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 677 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 732 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.
ಇಂದು ಚಿನ್ನ 586 ರೂ ಮತ್ತು ಬೆಳ್ಳಿ 1650 ರೂ ಇಳಿಕೆಯಾಗಿದೆ.

Exit mobile version