Site icon Vistara News

Sensex | ಆರ್ಥಿಕ ಹಿಂಜರಿತದ ಭೀತಿ, ಷೇರು ಪೇಟೆಯಲ್ಲಿ ತಲ್ಲಣ, ಸೆನ್ಸೆಕ್ಸ್‌ 37 ಅಂಕ ಇಳಿಕೆ, ನಿಫ್ಟಿ 17,000ಕ್ಕೆ

bse

ಮುಂಬಯಿ: ವಿದೇಶಿ ಹೂಡಿಕೆದಾರರ ಭಾರಿ ಮಾರಾಟದ ಒತ್ತಡದ ನಡೆವೆಯು ಇಂದು ಷೇರು ಮಾರುಕಟ್ಟೆ ಅಲ್ಪ ನಕಾರಾತ್ನಕತೆಯೊಂದಿಗೆ ವಹಿವಾಟು ನಡೆಸಿದೆ. ಸೆನ್ಸೆಕ್ಸ್ (Sensex) 231 ಅಂಕಗಳ ಏರಿಕೆಯೊಂದಿಗೆ 57376 ಅಂಕಗಳೊಂದಿಗೆ ದಿನವನ್ನು ಆರಂಭಿಸಿ ಕೆಲವೇ ನಿಮಿಷಗಳಲ್ಲಿ ಭಾರಿ ಏರಿಕೆಯನ್ನು ದಾಖಲಿಸಿತು ಮತ್ತು ಅಷ್ಟೇ ವೇಗವಾಗಿ ಕುಸಿತವನ್ನು ಕಂಡಿತು. 94 ಅಂಕಗಳ ಏರಿಕೆಯೊಂದಿಗೆ 17107 ರಲ್ಲಿ ವಹಿವಾಟು ಆರಂಭಿಸಿದ ನಿಫ್ಟಿ ಸಹ ದಿನಪೂರ್ತಿ ಭಾರಿ ಏರಿಳಿಕೆಯನ್ನು ಕಂಡಿತು. ಬ್ಯಾಂಕ್ ನಿಫ್ಟಿ ಸಹ 195 ಅಂಕಗಳ ಮೇಲ್ಮಟ್ಟದಲ್ಲಿ 38811 ರಲ್ಲಿ ಪ್ರಾರಂಭವಾಯಿತು.
ವಿದೇಶಿ ಹೂಡಿಕೆದಾರರ ಭಾರಿ ಮಾರಾಟದ ಒತ್ತಡ ಮತ್ತು ದೇಶಿ ಹೂಡಿಕೆದಾರರ ಅಧಿಕ ಬೇಡಿಕೆಯ ನಡುವೆ ದಿನಪೂರ್ತಿ ನಿಫ್ಟಿ ಹಲವು ಭಾರಿ ನೂರಾರು ಅಂಕಗಳ ಏರಿಳಿತ ದಾಖಲಿಸಿ ದಿನದ ಅಂತ್ಯಕ್ಕೆ ಕೇವಲ 8 ಅಂಕಗಳ ಇಳಿಕೆಯೊಂದಿಗೆ 17007 ರಲ್ಲಿ ಮುಕ್ತಾಯಕಂಡಿತು. ಸೆನ್ಸೆಕ್ಸ್ ಸಹ 37 ಅಂಕಗಳ ಅಲ್ಪ ಇಳಿಕೆಯೊಂದಿಗೆ 57107 ಕ್ಕೆ ವಹಿವಾಟು ಅಂತ್ಯಗೊಳಿಸಿತು.

ಬ್ಯಾಂಕ್ ನಿಫ್ಟಿ 257 ಅಂಕಗಳ ಕುಸಿತದೊಂದಿಗೆ 39359 ಅಂಕಗಳ ಇಳಿಕೆ ದಾಖಲಿಸಿತು. ನಿಫ್ಟಿ ಪ್ರಮುಖ ಘಟ್ಟವಾದ 17000 ಅಂಕಗಳಿಗಿಂತಲೂ ಕೆಳಗೆ ವಹಿವಾಟು ನಡೆಸಿ ಏರಡನೇ ದಿನವೂ 200 ದಿನಗಳ ಮೂವಿಂಗ್ ಆವರೆಜನಲ್ಲಿ ಬೆಂಬಲ ಪಡೆದುಕೊಂಡಿತು.
ಇಂದು ವಿದೇಶಿ ಹೂಡಿಕೆದಾರರು 2823 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ ದೇಶಿ ಹೂಡಿಕೆದಾರರು 3504 ಕೋಟಿ ರೂ , ಮೌಲ್ಯದ ಷೇರುಗಳನ್ನು ಕೊಂಡುಕೊಂಡರು. ವಿದೇಶಿ ಹೂಡಿಕೆದಾರರು ಕಳೆದ ಕೆಲವು ದಿನಗಳಿಂದ ಸತತವಾಗಿ ಷೇರುಗಳನ್ನು ಭಾರಿ ಮಟ್ಟದಲ್ಲಿ ಮಾರಾಟ ಮಾಡುತ್ತಿದ್ದಾರೆ.
ಅನಿಲ ಮತ್ತು ಗ್ಯಾಸ್, ಐಟಿ, ಔಷಧ ಮತ್ತು ಎಫ್ಎಂಸಿಜಿ ವಲಯದ ಷೇರುಗಳು ಏರಿಕೆ ಕಂಡರೆ ಬ್ಯಾಂಕಿಂಗ್, ವಾಹನೋಧ್ಯಮ, ಲೋಹ ಮತ್ತು ರಿಯಾಲಿಟಿ ಕ್ಷೇತ್ರದ ಷೇರುಗಳು ಇಳಿಕೆ ಕಂಡವು.
ಕಚ್ಚಾತೈಲ ದರ ಇಳಿಕೆ
ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಕಚ್ಚಾತೈಲ ದರ ಕೆಲವು ವಾರಗಳಿಂದ ಸತತವಾಗಿ ಕುಸಿತ ದಾಖಲಿಸುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲಗೆ 85 ಡಾಲರಗೆ ವಹಿವಾಟು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತ ಕಂಡರೆ ಭಾರತ ದೇಶದ ವಿತ್ತೀಯ ಕೊರತೆ ಒತ್ತಡ ಕಡಿಮೆಯಾಗಲಿದೆ.
ಬಡ್ಡಿ ದರ ಏರಿಕೆ ಸಾಧ್ಯತೆ
ಅಮೇರಿಕಾದ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆಯ ನಂತರ ಶುಕ್ರವಾರ ಭಾರತದ ಆರ್ಬಿಐ ಸಹ ಬಡ್ಡಿದರಗಳನ್ನು ಏರಿಸುವ ಸಾಧ್ಯತೆಗಳು ದಟ್ಟವಾಗಿವೆ. ಶೇ. 0.35 ರಿಂದ 0.50 ರಷ್ಟು ಬಡ್ಡಿದರ ಏರಿಕೆ ಮಾಡಬಹುದು ಎಂದು ತಜ್ಙರು ಅಂದಾಜಿಸಿದ್ದಾರೆ. ಅಮೇರಿಕಾದ ಫೆಡರಲ್ ಬ್ಯಾಂಕ್ ಬಡ್ಡಿದರ ಏರಿಸಿದ್ದರ ಪರಿಣಾಮ ಅಮೇರಿಕಾದ ಬಾಂಡ್ ಮಾರುಕಟ್ಟೆಯ ಆದಾಯದಲ್ಲಿ ಭಾರಿ ಏರಿಕೆ ಕಾಣುತ್ತಿದ್ದು, 1, 2, 3 5 ಮತ್ತು 7 ವರ್ಷಗಳ ವಾಯಿದೆಯ ಬಾಂಡ್‌ಗಳ ಆದಾಯ ಮಟ್ಟ ಶೇ. 4ಕ್ಕೇ ಏರಿಕೆ ಕಂಡಿದೆ. ಇದು 2007 ರ ನಂತರ ಅಮೇರಿಕಾ ಕಾಣುತ್ತಿರುವ ಅತಿ ಹೆಚ್ಚಿನ ಬಾಂಡಗಳ ಆದಾಯ ಮಟ್ಟ.

Exit mobile version