Site icon Vistara News

Sensex falls | ಷೇರುಪೇಟೆಯಲ್ಲಿ ತಲ್ಲಣ, ಸೆನ್ಸೆಕ್ಸ್‌ 518 ಅಂಕ ಪತನ

stock trader

ಮುಂಬಯಿ: ಅಲ್ಪಾವಧಿ ಹೂಡಿಕೆದಾರರ ಲಾಭಾಂಶ ಗಳಿಕೆ ಮತ್ತು ಜಾಗತಿಕ ಹೂಡಿಕೆದಾರರ ಮಾರಾಟ ಒತ್ತಡದ ಕಾರಣ ಷೇರು ಮಾರುಕಟ್ಟೆ ಇಂದು ಭಾರಿ ಇಳಿಕೆಯಾಗಿದೆ. ಮಾರುಕಟ್ಟೆ ಸಾರ್ವಕಾಲಿಕ ಏರಿಕೆಯ ಹಂತದಲ್ಲಿ ಟೆಕ್ನಿಕಲಿ ಚಾರ್ಟ್​ ಪ್ರಕಾರ ಡಬಲ್ ಟಾಪ್ ಆಗಿರುವುದರಿಂದ (Sensex falls) ಹೂಡಿಕೆದಾರರು ಲಾಭಾಂಶ ನಗದೀಕರಣಕ್ಕೆ ಮುಂದಾಗಿದ್ದಾರೆ
ನಿಫ್ಟಿ ಬೆಳಿಗ್ಗೆ 61 ಅಂಕಗಳ ಇಳಿಕೆಯೊಂದಿಗೆ 18246 ರಲ್ಲಿ ಪ್ರಾರಂಭವಾಯಿತು. ಸೆನ್ಸೆಕ್ಸ್ 207 ಅಂಶಗಳ ಕಡಿತದೊಂದಿಗೆ 61456 ರಲ್ಲಿ ಆರಂಭವಾದರೆ, ಬ್ಯಾಂಕ್ ನಿಫ್ಟಿ 150 ಅಂಕಗಳ ಇಳಿಕೆಯೊಂದಿಗೆ 42286ಕ್ಕೆ ಶುರುವಾಯಿತು.
ನಿಫ್ಟಿ ಪ್ರಾರಂಭದಿಂದಲೇ ಭಾರಿ ಇಳಿಕೆಯಾಗುತ್ತಾ ಸಾಗಿತು. ನಂತರ ಅಲ್ಪ ಅಂಕಗಳ ಮಧ್ಯೆ ವಹಿವಾಟು ನಡೆಯಿತು. ಸಾರ್ವಜನಿಕ ಬ್ಯಾಂಕಗಳ ಷೇರುಗಳಿಗೆ ಸತತವಾದ ಬೇಡಿಕೆ ಇರುವುದರಿಂದ ಬ್ಯಾಂಕ್ ನಿಫ್ಟಿ ಭಾರಿ ಇಳಿಕೆಯಾಗಲಿಲ್ಲ. ದಿನ ಪೂರ್ತಿ ಕೇವಲ 150 ಅಂಶಗಳ ಮಧ್ಯ ವಹಿವಾಟು ನಡೆಯಿತು.
ದಿನದ ಅಂತ್ಯಕ್ಕೆ ನಿಫ್ಟಿ 147 ಅಂಕಗಳ ಇಳಿಕೆಯೊಂದಿಗೆ 18159 ರಲ್ಲಿ, ಸೆನ್ಸೆಕ್ಸ್ 518 ಅಂಶಗಳ ಕಡಿತದೊಂದಿಗೆ 61144 ರಲ್ಲಿ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ ಕೇವಲ 90 ಅಂಕಗಳ ಇಳಿಕೆಯೊಂದಿಗೆ 42346 ರಲ್ಲಿ ಅಂತ್ಯವಾಯಿತು.
ಷೇರು ಪೇಟೆ ಭಾರಿ ಅಂತರದ ಇಳಿಕೆಯಾದರೂ ಸಣ್ಣ ಕಂಪನಿಗಳ ಸೂಚ್ಯಂಕ (ಶೇ. 0.24) ಸಕಾರಾತ್ಮವಾಗಿ ಅಂತ್ಯವಾಗಿದೆ. ಮಧ್ಯಮ ಕಂಪನಿಗಳ ಸೂಚ್ಯಂಕ 0.04 ರಷ್ಟು ಇಳಿಕೆಯಾಗಿದೆ. ಸಾರ್ವಜನಿಕ ಬ್ಯಾಂಕಿಂಗ್ ಮತ್ತು ಮಾಧ್ಯಮ ಕ್ಷೇತ್ರದ ಸೂಚ್ಯಂಕಗಳು ಏರಿಕೆಯಾದರೆ, ಐಟಿ, ಇಂಧನ ಮತ್ತು ರಿಯಾಲಿಟಿ ವಲಯದ ಸೂಚ್ಯಂಕಗಳು ಇಳಿಕೆಯಾಗಿವೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 1593 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು 1262 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ.

Exit mobile version