Site icon Vistara News

Sensex | ಸೆನ್ಸೆಕ್ಸ್‌ 419 ಅಂಕ ಪತನ, ನಿಫ್ಟಿ 128 ಅಂಕ ನಷ್ಟ

stock trading

ಮುಂಬಯಿ: ಜಾಗತಿಕ ಮಾರುಕಟ್ಟೆಯ ಪ್ರಭಾವ ಮತ್ತು ಅಲ್ಪಾವಧಿ ಹೂಡಿಕೆದಾರರ ಲಾಭ ನಗದೀಕರಣಕ್ಕೆ ಮುಂದಾಗಿರುವುದರಿಂದ ಮಾರುಕಟ್ಟೆ (Sensex ) ಇಂದು ಇಳಿಕೆಯಾಯಿತು.
ನಿಫ್ಟಿ 112 ಅಂಕಗಳ ಇಳಿಕೆಯೊಂದಿಗೆ 18044 ರಲ್ಲಿ ಪ್ರಾರಂಭವಾದರೆ, ಸೆನ್ಸೆಕ್ಸ್ 509 ಆಂಶಗಳ ಕಡಿತದೊಂದಿಗೆ 60524 ರಲ್ಲಿ ಆರಂಭವಾಯಿತು. ಬ್ಯಾಂಕ್ ನಿಫ್ಟಿ ಇಂದು 320 ಅಂಕಗಳ ಇಳಿಕೆಯೊಂದಿಗೆ 41462 ಕ್ಕೆ ಶುರುವಾಯಿತು.
ನಿಫ್ಟಿ ಆರಂಭದಿಂದ ಇಳಿಮುಖವಾಗುತ್ತಲೇ, 18000ಕ್ಕಿಂತ ಕೆಳಗೆ ವಹಿವಾಟು ನಡೆಸಿತು. 17970 ರಲ್ಲಿ ಸಪೋರ್ಟ್​ ತೆಗೆದುಕೊಂಡಿತು, ದಿನದ ಕೊನೆಯ ಒಂದು ಗಂಟೆಯಲ್ಲಿ ಷೇರುಗಳಿಗೆ ಬೇಡಿಕೆ ಬಂದ ಪರಿಣಾಮ ಮಾರುಕಟ್ಟೆ 18000 ಕ್ಕಿಂತ ಮೇಲೆ ಮುಕ್ತಾಯವಾಯಿತು. ಅದೇ ರೀತಿ ಬ್ಯಾಂಕ್ ನಿಫ್ಟಿ ಆರಂಭದಿಂದ ಇಳಿಕೆಯಾದರೂ ಮಧ್ಯಾಹ್ನದ ನಂತರ ಪುಟಿದೆದ್ದಿದ್ದಿತು.
ದಿನದ ಅಂತ್ಯಕ್ಕೆ ನಿಫ್ಟಿ 128 ಅಂಕಗಳ ಇಳಿಕೆಯೊಂದಿಗೆ 18028 ರಲ್ಲಿ ಮತ್ತು ಸೆನ್ಸೆಕ್ಸ್ 419 ಅಂಶಗಳ ಕಡಿತದೊಂದಿಗೆ 60613 ರಲ್ಲಿ ಅಂತ್ಯಗೊಂಡಿತು. ಬ್ಯಾಂಕ್ ನಿಫ್ಟಿ ಸಹ 179 ಅಂಕಗಳ ಇಳಿಕೆಯೊಂದಿಗೆ 41603 ರಲ್ಲಿ ವಹಿವಾಟು ಪೂರ್ಣಗೊಳಿಸಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ.1.15 ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 0.97 ರಷ್ಟು ಇಳಿಕೆಯಾಗಿದೆ. ಆಟೋ, ಬ್ಯಾಂಕಿಂಗ್, ಲೋಹ ಸೇರಿದಂತೆ ಎಲ್ಲ ಸೂಚ್ಯಂಕಗಳು ಇಂದು ಇಳಿಕೆ ದಾಖಲಿಸಿವೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು ಅಲ್ಪ ಪ್ರಮಾಣದಲ್ಲಿ 36 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರೆ ದೇಶಿ ಸಾಂಸ್ಥಿಕ ಹೂಡಿಕೆದಾರರು 967 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

Exit mobile version