Site icon Vistara News

Sensex | ಸೆನ್ಸೆಕ್ಸ್‌ 212 ಅಂಕ ಜಿಗಿತ, ನಿಫ್ಟಿ 80 ಅಂಕ ಚೇತರಿಕೆ

bse crash

ಮುಂಬಯಿ: ದೇಶಿ ಹೂಡಿಕೆದಾರರ ಲಾಭಾಂಶ ನಗಧೀಕರಣ, ಪ್ಯೂಚರ್ ಆಂಡ್ ಆಪ್ಷನ್ ಮಾರುಕಟ್ಟೆಯ ವಾರ ಮತ್ತು ತಿಂಗಳಾಂತ್ಯ ದಿನವಾಗಿದ್ದರಿಂದ ಮಾರುಕಟ್ಟೆಯಲ್ಲಿ ಇಂದು ಭಾರಿ ಏರಿಳಿತ ( Sensex) ದಾಖಲಾಯಿತು.
ಅಮೇರಿಕಾ ಮಾರುಕಟ್ಟೆಯ ಭಾರಿ ಏರಿಕೆಯ ನಂತರ ಸಿಂಗಾಪುರದ ಎಸಜಿಎಕ್ಸ್ ನಿಫ್ಟಿ ಸಹ 17900 ರ ಸನಿಹ ಭಾರಿ ಏರಿಕೆಯ (GAP UP) ಸೂಚನೆ ಕೊಟ್ಟಿತ್ತು. ಆದರೆ ಭಾರತದ ಮಾರುಕಟ್ಟೆ ಅಷ್ಟೋಂದು ಹೆಚ್ಚಳದೊಂದಿಗೆ (GAP UP) ಆರಂಭವಾಗಲಿಲ್ಲ. 115 ಅಂಕಗಳ ಏರಿಕೆಯೊಂದಿಗೆ ನಿಫ್ಟಿ 17771 ರಲ್ಲಿ ಪ್ರಾರಂಭವಾದರೇ, ಸೆನ್ಸೆಕ್ಸ್ 249 ಅಂಶಗಳ ಏರಿಕೆಯೊಂದಿಗೆ 59792ಕ್ಕೆ ಶುರುವಾಯಿತು. ಆದರೆ ಹೂಡಿಕೆದಾರರು ತಕ್ಷಣ ಲಾಭಾಂಶ ನಗಧೀಕರಣಕ್ಕೆ ಮುಂದಾಗಿದ್ದರಿಂದ ಮಾರುಕಟ್ಟೆ ಕುಸಿತಕ್ಕೆ ಒಳಗಾಯಿತು. ಬ್ಯಾಂಕ್ ನಿಫ್ಟಿ ಸಹ 317 ಅಂಕಗಳ ಏರಿಕೆಯೊಂದಿಗೆ 41440 ಕ್ಕೆ ಆರಂಭವಾಯಿತು.
ಬೆಳಿಗ್ಗೆ ಮಾರುಕಟ್ಟೆ ಆರಂಭದ ನಂತರ 17654 ರವರೆಗೆ ನಿರತಂರ ಇಳಿಕೆ ಕಂಡಿತು ಆದರೆ ಮಧ್ಯಾಹ್ನ 3 ಗಂಟೆ ನಂತರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರು ಕೊಳ್ಳುವಿಕೆ ನಡೆಸಿದ್ದರಿಂದ ಮಾರುಕಟ್ಟೆ ಭಾರಿ ಏರಿಕೆ ಕಂಡಿತು. ದಿನದ ಅಂತ್ಯಕ್ಕೆ ನಿಫ್ಟಿ 80 ಅಂಕಗಳ ಏರಿಕೆಯೊಂದಿಗೆ 17736 ಅಂಶಗಳಿಗೆ ಮುಕ್ತಾಯವಾದರೆ, ಸೆನ್ಸೆಕ್ಸ್ 212 ಅಂಕಗಳ ಹೆಚ್ಚಳದೊಂದಿಗೆ 59756 ರಲ್ಲಿ ಪೂರ್ಣಗೊಂಡಿತು. ಬ್ಯಾಂಕ್ ನಿಫ್ಟಿ 176 ಅಧಿಕ ಅಂಶಗಳೊಂದಿಗೆ 47299 ರಲ್ಲಿ ಅಂತ್ಯಗೊಂಡಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.41 ರಷ್ಟು ಏರಿಕೆ ಕಂಡರೆ ಮಧ್ಯಮ ಕಂಪನಿಗಳ ಸೂಚ್ಯಂಕ 0.78 ರಷ್ಟು ಹೆಚ್ಚಳವಾಯಿತು. ಲೋಹ, ರಿಯಾಲಿಟಿ, ಇಂಧನ, ಮೂಲಭೂತ ಸೌಕರ್ಯ ಸೇರಿಂದಂತೆ ಬಹುತೇಕ ಸೂಚ್ಯಂಕಗಳು ಏರಿಕೆ ದಾಖಲಿಸಿದವು. ಅಮೇರಿಕಾದ ಮಾರುಕಟ್ಟೆಯಲ್ಲಿನ ಐಟಿ ಸಂಬಂಧಿತ ಕಂಪನಿಗಳು ಭಾರಿ ಇಳಿಕೆ ಕಂಡ ಪರಿಣಾಮ ಭಾರತದ ಐಟಿ ಕಂಪನಿಗಳು ಅಲ್ಪ ಇಳಿಕೆ ಕಂಡವು. ಇದರಿಂದಾಗಿ ಐಟಿ ಸೂಚ್ಯಂಕ ಇಳಿಕೆ ದಾಖಲಿಸಿತು.
ಭಾರತದಲ್ಲಿ ಮನೆಗಳ ಮಾರಾಟ ಹೆಚ್ಚಳ ಅಧಿಕವಾಗಬಹುದು ಎಂದು ಸಮೀಕ್ಷಾ ವರದಿ ಹಿನ್ನಲೇ ಇಂದು ರಿಯಾಲಿಟಿ ವಲಯದ ಎಲ್ಲ ಕಂಪನಿಗಳು ಬಹಳ ಏರಿಕೆ ದಾಖಲಿಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 2818 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 1580 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.
ತ್ರೈಮಾಸಿಕ ಫಲಿತಾಂಶ – ನಾಳೆ ಪ್ರಮುಖ ಕಂಪನಿಗಳಾದ ಮಾರುತಿ ಸೂಜುಕಿ, ಡಾ. ರೆಡ್ಡಿ ಲ್ಯಾಬ್, ಬ್ಲೂ ಡಾರ್ಟ್​, ಟಾಟಾ ಪವರ್, ವೇದಾಂತ ಮತ್ತು ಬಂಧನ ಬ್ಯಾಂಕ್ ಏರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.
ಅದೇ ರೀತಿ ಆರ್‌ಬಿಐ ಸಹ ಅನಿರೀಕ್ಷತವಾಗಿ ನವೆಂಬರ 3 ರಂದು ವಿತ್ತೀಯ ನೀತಿ ಸಭೆ ಕರೆದಿದೆ. ಅಕ್ಟೋಬರ್‌ನಲ್ಲಿ ಪ್ರಕಟವಾದ ಹಣದುಬ್ಬರ ದರ ನಿರೀಕ್ಷೆಯಂತೆ ಕಡಿಮೆ ಆಗದಿರುವುದರಿಂದ ಪುನಃ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಮುಂದಿನ ಸಭೆ ಡಿಸೆಂಬರ್ 5-7ರಂದು ನಿಗದಿಯಾಗಿತ್ತು. ಮುಂದಿನ ವಾರ ನಡೆಯುವ ಈ ಎರಡು ಮಹತ್ವದ ಸಭೆಗಳ ಫಲಿತಾಂಶದ ಮೇಲೆ ಷೇರುಮಾರುಕಟ್ಟೆ ನಡೆ ನಿರ್ಧರಿತವಾಗಲಿದೆ.

Exit mobile version